Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಸಂಜಯ್ ಕಪೂರ್ 30 ಸಾವಿರ ಕೋಟಿ ರೂ. ಆಸ್ತಿ ವಿವಾದ: ಕರೀಶ್ಮಾ ಮಕ್ಕಳು ಕೋರ್ಟ್‌ ಮೆಟ್ಟಿಲು

Spread the love

ಸಂಜಯ್ ಕಪೂರ್ಅವರು ಇತ್ತೀಚೆಗೆ ನಿಧನ ಹೊಂದಿದರು. ಲಂಡನ್​ನಲ್ಲಿ ಪೊಲೋ ಆಟ ಆಡುವಾಗ ಹೃದಯಾಘಾತ ಆಯಿತು. ಜೇನು ನೊಣ ನುಂಗಿದ್ದು ಅವರ ಸಾವಿಗೆ ಕಾರಣ ಎಂದೆಲ್ಲ ವರದಿಗಳಾದರೂ ಅದು ಸುಳ್ಳು ಎಂಬುದು ಆ ಬಳಿಕ ಗೊತ್ತಾಯಿತು. ಹೃದಯಾಘಾತವೇ ಅವರ ಸಾವಿಗೆ ಕಾರಣ ಆಗಿದೆ. ಈಗ ಸಂಜಯ್ ಕಪೂರ್ ಅವರ ಆಸ್ತಿಯ ಮೇಲೆ ಎಲ್ಲರ ಕಣ್ಣು ಬಿದ್ದಿದೆ. ಮಾಜಿ ನಟಿ ಕರೀಶ್ಮಾ ಕಪೂರ್ ಮತ್ತು ಸಂಜಯ್ ವಿವಾಹ ಆಗಿ ವಿಚ್ಛೇದನ ಪಡೆದಿದ್ದರು. ಈಗ ಕರೀಶ್ಮಾ ಮಕ್ಕಳು ಈಗ ಸಂಜಯ್ ಆಸ್ತಿಯಲ್ಲಿ ಪಾಲು ಬೇಕು ಎಂದು ಕೇಳಿದ್ದಾರೆ. ಇದಕ್ಕಾಗಿ ಕೋರ್ಟ್ ಮೆಟ್ಟಿಲು ಕೂಡ ಏರಿದ್ದಾರೆ.

ಸಂಜಯ್  ಕಪೂರ್ ವಿಲ್ ಬರೆದಿಟ್ಟಿದ್ದರು ಎನ್ನಲಾಗಿದೆ. ಈ ವಿಲ್​ ಫೇಕ್ ಎಂಬುದು ಕರೀಶ್ಮಾ ಆರೋಪ. ಈ ಕಾರಣದಿಂದಲೇ ಚಿಕ್ಕ ಮಕ್ಕಳನ್ನು ಮುಂದೆ ಬಿಟ್ಟು ಕೋರ್ಟ್​ನಲ್ಲಿ ಕೇಸ್ ಹಾಕಿಸಿದ್ದಾರೆ. ‘ನಿಜವಾದ ವಿಲ್​ನ ಅವರು ತೋರಿಸಿಲ್ಲ. ಈಗ ತೋರಿಸಿರುವ ವಿಲ್ ಫೋರ್ಜರಿ ಆಗಿದೆ’ ಎಂದು ಆರೋಪಿಸಲಾಗಿದೆ. ಕರೀಶ್ಮಾ ಕಪೂರ್ ಮಕ್ಕಳು ಕೋರ್ಟ್​ ಬಳಿ ಒಂದು ಮನವಿ ಮಾಡಿದ್ದಾರೆ. ಸಂಜಯ್ ಕಪೂರ್ ಪತ್ನಿ ಪ್ರಿಯಾ ಸಚ್​​ದೇವ್ ಅವರು ಆಸ್ತಿ ಬಳಕೆ ಮಾಡದಂತೆ ಕೋರಿದ್ದಾರೆ. ಕರೀಶ್ಮಾಗೆ ಇಬ್ಬರು ಮಕ್ಕಳು. ಸಮೀರಾಗೆ 20 ವರ್ಷ ಹಾಗೂ ಕಿಯಾನ್​ಗೆ 12 ವರ್ಷ.

ಸಂಜಯ್ ಕಪೂರ್ ಜೂನ್ 11ರಂದು ನಿಧನ ಹೊಂದದಿರು. ಅವರು 30 ಸಾವಿರ ಕೋಟಿ ರೂಪಾಯಿ ಆಸ್ತಿ. ಈ ಮೊದಲು ಕರೀಶ್ಮಾ ಅವರು ಆಸ್ತಿಯಲ್ಲಿ ಪಾಲು ಪಡೆಯಲು ಮಾರ್ಗ ಹುಡುಕುತ್ತಿದ್ದಾರೆ ಎಂದು ವರದಿ ಆಗಿತ್ತು. ಇನ್ನು, ಸಂಜಯ್ ಮೂರನೇ ಪತ್ನಿ ಪ್ರಿಯಾ ಸಚ್​ದೇವ್ ಕೂಡ ಆಸ್ತಿ ಎಲ್ಲ ತಮ್ಮದೇ ಎನ್ನುತ್ತಿದ್ದಾರೆ.

ಸಂಜಯ್ ಕಪೂರ್ ಸಹೋದರಿ ಮಂದಿರಾ ಕಪೂರ್ ಅವರು ಒಂದು ಗಂಭೀರ ಆರೋಪ ಮಾಡಿದ್ದಾರೆ. ಪ್ರಿಯಾ ಸಚ್​ದೇವ್ ಅವರು ತಮ್ಮ ತಾಯಿ ಬಳಿ ಒತ್ತಾಯ ಪೂರ್ವಕವಾಗಿ ಆಸ್ತಿ ಪತ್ರಕ್ಕೆ ಸಹಿ ಹಾಕಿಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ. ಈ ವಿಚಾರ ಕೂಡ ಚರ್ಚೆಗೆ ಕಾರಣ ಆಗಿದೆ.


Spread the love
Share:

administrator

Leave a Reply

Your email address will not be published. Required fields are marked *