ಕರ್ನಾಟಕ ಅಸಂಘಟಿತ ಕಾರ್ಮಿಕರ ಒಕ್ಕೂಟಕ್ಕೆ ನೂತನ ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಆಯ್ಕೆ

ಮಂಗಳೂರು :ಕರ್ನಾಟಕ ರಾಜ್ಯ ಅಸಂಘಟಿತ ಕಾರ್ಮಿಕರ ಒಕ್ಕೂಟದ ಸಭೆಯು ಇಂದು ಮಂಗಳೂರಿನ ಕೇಂದ್ರ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ನೂತನ ಅಧ್ಯಕ್ಷರಾಗಿ ಸಂದೀಪ್ ಶೆಟ್ಟಿ ಅಡ್ಕರವರು ಆಯ್ಕೆಯಾದರು. ಸಂಸ್ಥಾಪಕರಾದ ರಾಜೇಶ್ ಪವಿತ್ರನ್ ರವರು ಶಲ್ಯ ಹಾಕಿ ಗೌರವದೊಂದಿಗೆ ಜವಾಬ್ದಾರಿಯನ್ನು ನೀಡಿದರು. ಸಂದೀಪ್ ಶೆಟ್ಟಿ ಅಡ್ಕ ರವರ ನೇತೃತ್ವದಲ್ಲಿ ಕಾರ್ಮಿಕರ ನೋವುಗಳಿಗೆ ಸ್ಪಂದಿಸುವ ಹಾಗೂ ಅವರ ಸಮಸ್ಯೆಗಳಿಗೆ ಪರಿಹಾರ ಕೊಡುವಂತಹ ಶಕ್ತಿ ಭಗವಂತ ನೀಡಲಿ ಎಂದು ರಾಜೇಶ್ ಪವಿತ್ರನ್ ಹಾರೈಸಿದರು.

