Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಒಂದೇ ಫ್ಲೋರ್ 25 ಜನರಿಗೆ ಸೇಲ್: 500 ಕೋಟಿ ರೂ. ವಂಚಿಸಿದ ಬಿಲ್ಡರ್ ಅರೆಸ್ಟ್!

Spread the love

ಗುರುಗ್ರಾಮ: ಕಟ್ಟಡದ ಒಂದೇ ಮಹಡಿಯನ್ನು 25ಕ್ಕೂ ಅಧಿಕ ಮಂದಿಗೆ ಮಾರಾಟ ಮಾಡುವ ಮೂಲಕ 500 ಕೋಟಿ ರೂ. ವಂಚನೆ ನಡೆಸಿದ ಆರೋಪದಲ್ಲಿ ಇಲ್ಲಿನ ರಿಯಲ್ ಎಸ್ಟೇಟ್ ಉದ್ಯಮಿ ಹಾಗೂ 32 ಮೈಲ್ಸ್ಟೋನ್ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಧ್ರುವ ದತ್ತ್ ಶರ್ಮಾನನ್ನು ಬಂಧಿಸಲಾಗಿದೆ.

ಶುಕ್ರವಾರ ಬಂಧಿತರಾದ ದ್ರುವದತ್ತ್ ನನ್ನು ಗುರುಗ್ರಾಮ ಪೊಲೀಸರು ನಗರದ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರು ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ.

ಕಟ್ಟಡವೊಂದರ ಒಂದೇ ಮಹಡಿಯನ್ನು ನೀಡುವುದಾಗಿ ಹೇಳಿಕೊಂಡು 25ಕ್ಕೂ ಅಧಿಕ ಮಂದಿಯಿಂದ ಒಟ್ಟು 500 ಕೋಟಿ ರೂ. ಅಧಿಕ ಹಣವನ್ನು ವಂಚಿಸಿದ್ದಾನೆಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಟ್ರಾಮ್ವೆಂಚರ್ಸ್ ಪ್ರೈವೇಟ್ ಲಿಮಿಟೆಡ್ ನ ಪ್ರತಿನಿಧಿಯೊಬ್ಬರು ಈಗ 32 ಮೈಲ್ಸ್ಟೋನ್ ವಿಸ್ತಾಸ್ ಪ್ರೈವೇಟ್ ಲಿಮಿಟೆಡ್ ಎಂದು ಮರುನಾಮಕರಣಗೊಂಡಿರುವ ಆಯಪ್ರಾ ಮೋಟೆಲ್ಸ್ ವಿರುದ್ಧ ದೂರು ನೀಡಿದ್ದರು.

2021ರಲ್ಲಿ 32 ಮೈಲ್ಸ್ಟೋನ್ ವಿಸ್ತಾಸ್ ಪ್ರೈವೇಟ್ ಲಿಮಿಟೆಡ್ ಸಂಸ್ಥೆಯ ನಿರ್ದೇಶಕರು ಟ್ರಾಮ್ವೆಂಚರ್ಸ್ ಸಂಸ್ಥೆಯನ್ನು ಸಂಪರ್ಕಿಸಿ, ಗುರುಗ್ರಾಮ್ ನ 32 ಮೈಲ್ಸ್ಟೋನ್ ಸಂಕೀರ್ಣದಲ್ಲಿರುವ 3 ಸಾವಿರ ಚದರ ಅಡಿಯ ಮೊದಲ ಅಂತಸ್ತನ್ನು ಮಾರಾಟ ಮಾಡುವ ಕೊಡುಗೆ ನೀಡಿದ್ದರು. 2.5 ಕೋಟಿ ರೂ.ಗೆ ಈ ಡೀಲ್ ಕುದುರಿದ್ದು, ಸೆ.21ರಂದು ಮೊತ್ತವನ್ನು ಪಾವತಿಸಲಾಗಿತ್ತು.

ಆದರೆ ಒಡೆತನಕ್ಕೆ ಸಂಬಂಧಪಟ್ಟ ಅಗತ್ಯ ದಾಖಲೆಗಳನ್ನು ಅವರು ಪಡೆಯದೆ ಇದ್ದಾಗ, ಟ್ರಾಮ್ ವೆಂಚರ್ಸ್ ದೂರು ನೀಡಿತ್ತು. ಆನಂತರ ಪೊಲೀಸರು ತನಿಖೆ ನಡೆಸಿದಾಗ 2022 ಹಾಗೂ 2023ರ ನಡುವೆ ಒಂದೇ ಮಹಡಿಯ ಮಾಲಕತ್ವದ ಕುರಿತ ಪ್ರಮುಖ ದಾಖಲೆಗಳ್ನು ಇತರ 25 ಮಂದಿಗೆ ನೀಡಿರುವುದು ಬೆಳಕಿಗೆ ಬಂದಿತ್ತು.

ಪ್ರಕರಣಕ್ಕೆ ಸಂಬಂಧಿಸಿ ಆರ್ಥಿಕ ಅಪರಾಧದಳವು ತನಿಖೆ ನಡೆಸಿದ ಬಳಿಕ ಧ್ರುವದತ್ತ್ ಶರ್ಮಾನನ್ನು ಶನಿವಾರ ಬಂಧಿಸಲಾಯಿತೆಂದು ಪೊಲೀಸರು ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *