ಸಲ್ಮಾನ್ ಖಾನ್‌ಗೆ ‘ಸೂಸೈಡ್ ಡಿಸೀಜ್’ ಕಾಯಿಲೆ; ಒಮ್ಮೆ ಆತ್ಮಹತ್ಯೆಗೆ ಯತ್ನಿಸಿದ್ದ ಬಗ್ಗೆ ಬಿಚ್ಚಿಟ್ಟ ಸಲ್ಲು!

ಸಲ್ಮಾನ್ ಖಾನ್ ಆತ್ಮ*ಹತ್ಯೆಗೆ ಯತ್ನ! ವಿಷಯ ಕೇಳಿ ಬೆಚ್ಚಿಬಿದ್ದ ಬಾಲಿವುಡ್ ಹಾಗೂ ಫ್ಯಾನ್ಸ್ salman khan said he once wants to end his life because of many diseases suc

ಬಾಲಿವುಡ್ ಭಾಯಿಜಾನ್ ಎಂದೇ ಫೇಮಸ್ ಆಗಿರೋ ಸಲ್ಮಾನ್ ಖಾನ್ ಆತ್ಮ*ಹತ್ಯೆಗೆ ಯತ್ನ ಮಾಡಿರುವ ವಿಷಯ ಇದೀಗ ಬೆಳಕಿಗೆ ಬಂದಿದ್ದು, ಬಾಲಿವುಡ್ ಬೆಚ್ಚಿಬಿದ್ದಿದೆ.
ಏನಿದು ವಿಷ್ಯ? ವಯಸ್ಸು 60 ಆದರೂ ಮೊನ್ನೆ ಮೊನ್ನೆ ಚಿತ್ರರಂಗಕ್ಕೆ ಎಂಟ್ರಿ ಕೊಟ್ಟ 20ರ ಹರೆಯದ ಬೆಡಗಿಯರ ಜೊತೆಗೂ ರೊಮಾನ್ಸ್ ಮಾಡುವಲ್ಲಿ ಎತ್ತಿದ ಕೈ ಎನ್ನಿಸಿಕೊಂಡಿರುವ ಬಾಲಿವುಡ್ ನಟರಲ್ಲಿ ಒಬ್ಬರು ಸಲ್ಮಾನ್ ಖಾನ್. ಕಟ್ಟುಮಸ್ತಾದ ದೇಹ ನೋಡಿದವರು ಅಬ್ಬಾ ನಟನಿಗೆ ಇಷ್ಟು ವಯಸ್ಸಾಯ್ತಾ ಎಂದು ಅಚ್ಚರಿಪಟ್ಟುಕೊಳ್ಳುವುದು ಇದೆ. ಆದರೆ ಬಣ್ಣದ ಲೋಕ ಹೊರಗಡೆಯಿಂದ ನೋಡುವಂತೆ ಇರುವುದಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿದೆ ಸಲ್ಮಾನ್ ಖಾನ್ ಅವರ ಬದುಕು. ಇದಾಗಲೇ ಅವರು ತಮಗಿರುವ ಭಯಾನಕ ರೋಗದ ಬಗ್ಗೆ ಮಾತನಾಡಿ ಶಾಕ್ ಕೊಟ್ಟಿದ್ದಾರೆ. ತಮಗೆ ಬ್ರೈನ್ ಅನ್ಯೂರಿಸಮ್ ಮತ್ತು ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂಬ ಎರಡು ರೋಗಗಳಿವೆ ಎಂದು ಅವರು ಹೇಳಿದ್ದಾರೆ. ಬ್ರೈನ್ ಅನ್ಯೂರಿಸಮ್ ಎಂದರೆ ಮಿದುಳಿನ ರಕ್ತನಾಳದಲ್ಲಿ ಊತ ಅಥವಾ ಬಲೂನ್ ಆಕಾರದ ರಚನೆ ಉಂಟಾಗುವುದು. ಇದು ರಕ್ತನಾಳದ ದುರ್ಬಲ ಸ್ಥಳದಿಂದ ಉಂಟಾಗುತ್ತದೆ. ಹೆಚ್ಚಿನ ಅನ್ಯೂರಿಸಮ್ ಗಳು ರೋಗಲಕ್ಷಣಗಳನ್ನು ತೋರಿಸುವುದಿಲ್ಲ. ಆದರೆ, ಅದು ಛಿದ್ರವಾದರೆ, ಅದು ಮಾರಣಾಂತಿಕ ರಕ್ತಸ್ರಾವಕ್ಕೆ ಕಾರಣವಾಗಬಹುದು.

ಟ್ರೈಜಿಮಿನಲ್ ನ್ಯೂರಾಲ್ಜಿಯಾ ಎಂದರೆ ಮುಖದಲ್ಲಿ ತೀವ್ರವಾದ ನೋವು ಉಂಟುಮಾಡುವ ನರಗಳ ಅಸ್ವಸ್ಥತೆಯಾಗಿದೆ. ಈ ನೋವು ವಿದ್ಯುತ್ ಆಘಾತದಂತೆ ಭಾಸವಾಗುತ್ತದೆ. ಟ್ರೈಜಿಮಿನಲ್ ನರವು ಮುಖದಿಂದ ನೋವು, ಸ್ಪರ್ಶ ಮತ್ತು ತಾಪಮಾನದ ಸಂವೇದನೆಗಳನ್ನು ಮೆದುಳಿಗೆ ಸಾಗಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಸಲ್ಮಾನ್ ಖಾನ್ ಅವರ ಈ ಕಾಯಿಲೆಯನ್ನು ಸ್ಯೂಸೈ*ಡ್ ಡಿಸೀಜ್ ಎಂದೂ ಕರೆಯುತ್ತಾರೆ. ಸಲ್ಮಾನ್ ಖಾನ್ ಅವರು ನೆಟ್ಫ್ಲಿಕ್ಸ್ನ ‘ದಿ ಕಪಿಲ್ ಶರ್ಮಾ’ ಶೋಗೆ ಆಗಮಿಸಿದ್ದಾರೆ. ಈ ವೇಳೆ ಅವರು ತಮ್ಮ ಜೀವನದ ಬಗ್ಗೆ ತಮಗಿರುವ ಕಾಯಿಲೆ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅವರು ಈ ವಿಚಾರ ಹೇಳುತ್ತಿದ್ದಂತೆ ಅಭಿಮಾನಿಗಳಲ್ಲಿ ಆತಂಕ ಶುರುವಾಗಿದೆ.
ಇದನ್ನು ಸಲ್ಮಾನ್ ಖಾನ್ ಅವರು ಹೇಳಿರುವುದು ಸಾಕಷ್ಟು ವರದಿಯಾಗಿತ್ತು. ಆದರೆ ಇದೇ ಸಮಸ್ಯೆಯಿಂದಾಗಿ ತಾವು ಆತ್ಮ*ಹತ್ಯೆಯ ಬಗ್ಗೆ ಯೋಚನೆ ಮಾಡಿರುವುದಾಗಿ ನಟಿ ಹೇಳಿರುವುದು ಇದೀಗ ಬಹಿರಂಗಗೊಂಡಿದ್ದು, ಇದರಿಂದ ಬಾಲಿವುಡ್ ಬೆಚ್ಚಿಬಿದ್ದಿದೆ. ಜೊತೆಗೆ, ಅಭಿಮಾನಿಗಳು ಇದನ್ನು ಕೇಳಿ ದಂಗಾಗಿದ್ದಾರೆ. ಇಂಥ ಸಮಸ್ಯೆಗಳಿಂದ ಹೊರಬರುವುದು ಹೇಗೆ ಎಂಬ ಬಗ್ಗೆ ತಿಳಿಯದೇ ಕೆಲವು ಸಲ ಸಾಯುವ ಹಾದಿಯನ್ನೂ ತುಳಿಯುವ ಪ್ರಯತ್ನ ಮಾಡಿದೆ. ಆದರೆ ಬೇರೆ ಬೇರೆ ಕಾರಣಗಳಿಂದ ಹಾಗೆ ಮಾಡಲು ಆಗಲಿಲ್ಲ ಎಂದಿದ್ದಾರೆ. ಇದೇ ಸಮಸ್ಯೆಯಿಂದ ಮತ್ತೆ ನಟನಿಗೆ ಅದೇ ಯೋಚನೆ ಬಂದರೆ ಹೇಗಪ್ಪಾ ಎಂದು ಅಭಿಮಾನಿಗಳು ಆತಂಕಕ್ಕೀಡಾಗಿದ್ದಾರೆ.
ಅಷ್ಟಕ್ಕೂ ಸಲ್ಮಾನ್ ಖಾನ್ ಇನ್ನೂ ಅವಿವಾಹಿತರಾಗಿಯೇ ಉಳಿದಿದ್ದಾರೆ. ಇವರ ಹೆಸರು ಕೆಲವು ನಟಿಯರ ಜೊತೆ ಕೇಳಿಬಂದಿದ್ದರೂ, ಇವರ ವಿರುದ್ಧ ಗಂಭೀರ ಆರೋಪಗಳು ಇದ್ದರೂ, ಮದುವೆಯಂತೂ ಆಗಿಲ್ಲ ಸಲ್ಲುಭಾಯಿ. ಈ ಬಗ್ಗೆ ಷೋನಲ್ಲಿ ಮಾಹಿತಿ ಕೇಳಿದಾಗ ತಾವು ಏಕೆ ಮದುವೆಯಾಗಿಲ್ಲ ಎನ್ನುವುದನ್ನು ಅವರು ಬಹಿರಂಗಪಡಿಸುವ ಸಮಯದಲ್ಲಿ ರೋಗದ ಬಗ್ಗೆ ಹೇಳಿಕೊಂಡಿದ್ದಾರೆ. ‘ನನಗೆ ವಿವಿಧ ರೋಗಗಳು ಇವೆ. ಇದರ ಜೊತೆಗೆ ನಾನು ನಟನೆ ಮಾಡುವಾಗ ಫ್ರ್ಯಾಕ್ಚರ್ ಆಗುತ್ತದೆ. ನರಶೂಲೆ, ಮೆದುಳಿನಲ್ಲಿ ರಕ್ತನಾಳದ ಉರಿಯೂತ, ಎವಿಎಂ ಸಮಸ್ಯೆ ಇದ್ದರೂ ನಾನು ಈಗಲೂ ಕೆಲಸ ಮಾಡುತ್ತಿದ್ದೇನೆ. ಈ ಮಧ್ಯೆ ಪತ್ನಿ ಮೂಡ್ ಹಾಳಾಯಿತು ಎಂದರೆ ವಿಚ್ಛೇದನ ಕೊಟ್ಟು ಅರ್ಧ ಆಸ್ತಿಯನ್ನು ತೆಗೆದುಕೊಂಡು ಹೋಗಿಬಿಡಬಹುದು. ನಾನು ಯುವಕನಾಗಿದ್ದರೆ ಹೆಚ್ಚು ಸಮಸ್ಯೆ ಆಗುತ್ತಿರಲಿಲ್ಲ. ಎಲ್ಲವನ್ನೂ ಮತ್ತೆ ಗಳಿಸಬಹುದಿತ್ತು. ಆದರೆ, ಈ ವಯಸ್ಸಲ್ಲಿ ಮತ್ತೆ ಮೊದಲಿನಿಂದ ಆರಂಭಿಸಬೇಕು ಎಂದರೆ ಅದು ಅಸಾಧ್ಯ’ ಎಂದು ತಮಾಷೆಯ ರೂಪದಲ್ಲಿ ಹೇಳಿದ್ದಾರೆ.
