Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಬರಿಮಲೆ ದ್ವಾರಪಾಲಕ ಚಿನ್ನದ ಪೀಠ ಪತ್ತೆ: ದೂರುದಾರರ ಸಂಬಂಧಿಕರ ಮನೆಯಲ್ಲಿ ವಶ

Spread the love

ಪಥನಂತಿಟ್ಟ : ಶಬರಿಮಲೆಯ ದೇವಾಲಯದ ದ್ವಾರಪಾಲಕ ಮೂರ್ತಿಯ ಚಿನ್ನದ ಪೀಠ ಕೊನೆಗೂ ಪತ್ತೆಯಾಗಿದೆ. ಪ್ರಕರಣದಲ್ಲಿ ಕೇರಳ ಹೈಕೋರ್ಟ್ ಎಂಟ್ರಿಯಾಗಿ ವಾರ್ನಿಂಗ್ ಕೊಟ್ಟ ಬೆನ್ನಲ್ಲೇ ಅಧಿಕಾರಿಗಳು ಪೀಠವನ್ನು ಪತ್ತೆ ಮಾಡಿದ್ದಾರೆ.

ಟಿಡಿಬಿ ವಿಜಿಲೆನ್ಸ್‌ ಮತ್ತು ಪೊಲೀಸ್ ಅಧೀಕ್ಷಕ ಸುನಿಲ್ ಕುಮಾರ್ ವಿ. ಅವರ ನೇತೃತ್ವದ ತಂಡವು ಪೀಠವನ್ನು ಕೊಡುಗೆಯಾಗಿದ್ದ ನೀಡಿದ್ದ ವೆಂಜರ್‌ಮೂಡ್‌ನ ಉನ್ನಿಕೃಷ್ಣನ್ ಪೊಟ್ಟಿ ಅವರ ಸಂಬಂಧಿಕರ ಮನೆಯಲ್ಲಿ ಶನಿವಾರ ಪತ್ತೆ ಮಾಡಿತ್ತು.

ಚಿನ್ನದ ಹೊದಿಕೆಯ ತಾಮ್ರದ ದ್ವಾರಪಾಲಕ ಪೀಠದ ತೂಕದಲ್ಲಿ ಇಳಿಕೆ ಆಗಿರುವುದನ್ನು ಗಮನಿಸಿದ್ದ ಕೇರಳ ಹೈಕೋರ್ಟ್, ಅದರ ಬಗ್ಗೆ ತನಿಖೆ ಮಾಡುವಂತೆ ಇತ್ತೀಚೆಗೆ ಆದೇಶಿಸಿತ್ತು. ಇದರ ನಂತರ ಪೀಠ ಕಾಣೆಯಾಗಿತ್ತು. ಅಲ್ಲದೆ, 2019ರಲ್ಲಿ ದ್ವಾರಪಾಲಕರ ಫಲಕವನ್ನು ಲೋಹಲೇಪನಕ್ಕೆಂದು ತೆಗೆದುಕೊಂಡು ಹೋದಾಗ ತಾನು ಚಿನ್ನ ಲೇಪಿತ ಪೀಠವನ್ನು ದೇವಾಲಯಕ್ಕೆ ಕೊಡುಗೆಯಾಗಿ ನೀಡಿದ್ದಾಗಿ ಪೊಟ್ಟಿ ಹೇಳಿದ್ದರು. ಅದರ ಕೆಲಸ 2020ರಲ್ಲಿ ಮುಗಿದಿದ್ದು, ನಂತರ ಕೆಲವು ಭಕ್ತರ ಮೂಲಕ ದೇವಾಲಯದ ಅಧಿಕಾರಿಗಳಿಗೆ ತಲುಪಿಸಲಾಗಿತ್ತು. ಆದರೆ ಅದು ಈಗ ದೇವಾಲಯದಲ್ಲಿ ಕಾಣುತ್ತಿಲ್ಲ ಎಂದು ಅವರು ತಿಳಿಸಿದ್ದರು.
ನಾಪತ್ತೆಯಾಗಿರುವ ಬಗ್ಗೆ ದೂರು ದಾಖಲಿಸಿದ್ದ ಉನ್ನಿಕೃಷ್ಣನ್ ಪೊಟ್ಟಿ ಅವರ ಸಂಬಂಧಿಕರ ಮನೆಯಿಂದ ವಶಕ್ಕೆ ಪಡೆದುಕೊಂಡಿದೆ. ಇದರೊಂದಿಗೆ, ಈಗ ಪೊಟ್ಟಿ ಅವರ ಮೇಲೆಯೇ ಅನುಮಾನ ಬಂದಿದೆ.

ಶಬರಿಮಲೆ ದ್ವಾರಪಾಲಕ ಚಿನ್ನದ ಪೀಠ ಪತ್ತೆ: ಪೀಠ ಕೊಟ್ಟವರ ಸಂಬಂಧಿಕರ ಮನೆಯಲ್ಲಿ ವಶ


Spread the love
Share:

administrator

Leave a Reply

Your email address will not be published. Required fields are marked *