ಭಾರತೀಯ ಆತಿಥ್ಯಕ್ಕೆ ಮನಸೋತ ರಷ್ಯಾದ ಪ್ರವಾಸಿಗ, ವಿಡಿಯೋ ವೈರಲ್!

ಭಾರತೀಯ ಸಂಸ್ಕೃತಿಯ ಅದ್ಭುತತೆಯನ್ನು ಪುನಃ ಒತ್ತಿ ಸಾರುವ ಘಟನೆಯೊಂದು ವೈರಲ್ ಆಗಿದೆ. ದೆಹಲಿಯ ಶಿವ ದೇವಾಲಯಕ್ಕೆ ಭೇಟಿ ನೀಡಿದ ರಷ್ಯಾದ ಪ್ರವಾಸಿಗನಿಗೆ, ಅಲ್ಲಿದ್ದ ಭಾರತೀಯ ಕುಟುಂಬವೊಂದು ಮನಸೋತು ಊಟ ನೀಡಿದ್ದು, ಈ ಆತ್ಮೀಯ ಆತಿಥ್ಯಕ್ಕೆ ಪ್ರವಾಸಿಗ ಭಾವುಕರಾಗಿದ್ದಾರೆ. “ಭಾರತಕ್ಕೆ ಬನ್ನಿ, ಇಲ್ಲಿ ನಿಜವಾದ ಆಧ್ಯಾತ್ಮಿಕತೆ ಅನುಭವಿಸಬಹುದು” ಎಂದು ಅವರು ಹೃತ್ಪೂರ್ವಕವಾಗಿ ಹೇಳಿದ್ದಾರೆ. ಈ ದೃಶ್ಯ Megha Updates ಖಾತೆಯ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಳ್ಳಲಾಗಿದ್ದು, 2.3 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಪಡೆದುಕೊಂಡಿದೆ. “ಅತಿಥಿ ದೇವೋಭವ” ಎಂಬ ಭಾವನೆಯನ್ನು ಮತ್ತೊಮ್ಮೆ ತೋರಿಸಿರುವ ಈ ಘಟನೆ ಭಾರತೀಯರ ಅಪಾರ ಆತಿಥ್ಯ ಪರಂಪರೆಯ ಮಾದರಿಯಾಗಿದೆ.
