ಚೀನಾ ಗಡಿಯಲ್ಲಿ 50 ಪ್ರಯಾಣಿಕರೊಂದಿಗೆ ರಷ್ಯಾದ ವಿಮಾನ ಪತನ

ಮಾಸ್ಕೊ:ಇತ್ತೀಚಿಗೆ ವಿಮಾನ ಪ್ರಯಾಣ ನಿಜಕ್ಕೂ ಸೇಫ್ ಅಲ್ಲ ಅನಿಸೋಕೆ ಶುರುವಾಗ್ತಿದ್ದು, ಚೀನಾ (china) ಗಡಿಯಲ್ಲಿ 50 ಪ್ರಯಾಣಿಕರಿದ್ದ ರಷ್ಯಾದ ವಿಮಾನ (Russia Plane Missing) ಪತನವಾಗಿದೆ ಎಂಬ ಮಾಹಿತಿ ಲಭ್ಯವಾಗಿದೆ.

ಗುರುವಾರ ಏರ್ ಟ್ರಾಫಿಕ್ ಕಂಟ್ರೋಲ್ ರೂಮ್ ನ ಸಂಪರ್ಕ ಕಳೆದುಕೊಂಡ ರಷ್ಯಾದ ಪ್ಯಾಸೆಂಜರ್ ಫ್ಲೈಟ್ ಕಣ್ಮರೆಯಾಗಿದೆ.
ರಷ್ಯಾದ ಪೂರ್ವ ಅಮುರ್ ಪ್ರದೇಶದಲ್ಲಿದ್ದಾಗ ವಿಮಾನ ಸಂಪರ್ಕ ಕಡಿತಗೊಂಡಿದ್ದು. ಈ ಆನ್ -24 ವಿಮಾನದಲ್ಲಿ ಸುಮಾರು 50 ಪ್ರಯಾಣಿಕರಿದ್ದರು. ತಾಂತ್ರಿಕ ಕಾರಣದಿಂದ ದೊಡ್ಡ ದುರಂತ ನಡೆದುಹೋಗಿದ್ಯಾ ಅನ್ನೋ ಅನುಮಾನ ಇದೀಗ ಶುರುವಾಗಿದ್ದು ವಿನಾಮದಲ್ಲಿದ್ದವರೆಲ್ಲರೂ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಅಂಗಾರ ಏರ್ಲೈನ್ಸ್ ಒಡೆತನದ ವಿಮಾನವು ಅಮುರ್‌ನ ಟಿಂಡಾ ನಗರಕ್ಕೆ ಹೋಗುತ್ತಿತ್ತು ಎಂಬ ಮಾಹಿತಿ ಲಭ್ಯವಾಗಿದ್ದು, ಸಂಪರ್ಕ ಕಡಿತವಾದಾಗ ಪೈಲೆಟ್ ಏನನ್ನೋ ಹೇಳೋಕೆ ಪ್ರಯತ್ನಪಟ್ಟಿದ್ದಾರೆ. ರಷ್ಯಾದ ಅಮುರ್ ಪ್ರದೇಶವು ಚೀನಾದ ಗಡಿಗೆ ಹೊಂದುಕೊಂಡಿದೆ.
ಸದ್ಯ ವಿಮಾನ ಶೋಧಕಾರ್ಯ ನಡೆಯುತ್ತಿದ್ದು, ರಕ್ಷಣಾ ವಿಮಾನಗಳು ಪತನವಾದ ವಿಮಾನ ಅವಶೇಷಗಳನ್ನು ಪತ್ತೆ ಹಚ್ಚಿದೆ ಎಂದು ಮೂಲಗಳು ತಿಳಿಸಿವೆ. ಬಹುತೇಕ ತಾಂತ್ರಿಕ ಸಮಸ್ಯೆಯಿಂದ ವಿಮಾನ ಕ್ರಾಶ್ ಆಗಿದೆ ಎಂದು ಹಲವರು ಅನುಮಾನ ವ್ಯಕ್ತಪಡಿಸಿದ್ದಾರೆ.
ರಷ್ಯಾದ ವಿಮಾನ ಇಳಿಯುವ ಸ್ಥಳಕ್ಕಿಂತ ಕೆಲವು ಕಿಲೋಮೀಟರ್ ಮೊದಲು ಏರ್ ಕಂಟ್ರೋಲರ್ ಸಿಬ್ಬಂದಿ ವಿಮಾನದ ಕೊನೆಯ ಸ್ಥಳವನ್ನು ಪತ್ತೆ ಮಾಡಿದ್ದಾರೆ. ಸದ್ಯ ಸಿಗ್ನಲ್ ಕೊನೆಯದಾಗಿ ಗೋಚರವಾದ ಸುತ್ತಮುತ್ತ ಹುಡುಕಾಟ ನಡೆಸಿದ ನಂತರ ವಿಮಾನ ಅವಶೇಷ ಪತ್ತೆಯಾಗಿದೆ