Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅಸಭ್ಯ ರೀಲ್ಸ್ = ಆಫ್ ಲೈನ್ ಕೇಸ್!

Spread the love

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯವಾಗಿ ಹಾಗೂ ಅಸಹ್ಯವಾಗಿ ಪದಗಳನ್ನು ಬಳಕೆ ಮಾಡಿ ರೀಲ್ಸ್ ಮಾಡಿದರೆ ಹುಷಾರ್. ಹೌದು, ನಿಮ್ಮ ರೀಲ್ಸ್ ಗಳ ಮೇಲೆ ಪೊಲೀಸರು ಹದ್ದಿನ ಕಣ್ಣಿಟ್ಟಿದ್ದು, ಕೇಸ್ ಬೀಳೋದಂತು ಪಕ್ಕಾ.

ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಕೆಲವರು ಗಮನ ಸೆಳೆಯುವ ಹುಚ್ಚಾಟ ಪ್ರದರ್ಶನ ಮಾಡುತ್ತಾರೆ. ಅಸಭ್ಯ ಭಾಷೆಗಳನ್ನು ಬಳಕೆ ಮಾಡಿ ರೀಲ್ಸ್ ಮಾಡುತ್ತಾರೆ. ಇದಕ್ಕೆ ಕಡಿವಾಣ ಹಾಕಲು ಪೊಲೀಸ್ ಇಲಾಖೆ ಮುಂದಾಗಿದೆ. ಹೀಗಾಗಿ ಕಳೆದ ಮೂರು ವರ್ಷಗಳಲ್ಲಿ 127 ಪ್ರಕರಣವನ್ನು ದಾಖಲು ಮಾಡಿದೆ.

ಯಾವ ವರ್ಷದಲ್ಲಿ ಎಷ್ಟು ಕೇಸ್?

2023 – 38
2024 – 74
2025 – 15

ಒಟ್ಟು -127

ಸಾಮಾಜಿಕ ಜಾಲತಾಣಗಾದ ಫೇಸ್ ಬುಕ್, ಇನ್ಟಾಗ್ರಾಮ್ ಗಳಲ್ಲಿ ಕಿಡಿಗೇಡಿಗಳು ಇಂತಹ ರೀಲ್ಸ್ ಗಳನ್ನು ಮಾಡುತ್ತಾರೆ. ಅಸಭ್ಯ ಹಾಗೂ ಅಸಹ್ಯಕರವಾದಂತಹ ಭಾಷೆಗಳನ್ನು ಉಪಯೋಗಿಸುವುದರ ಜೊತೆಗೆ ವಿಡಿಯೋ ರೀಲ್ಸ್ಗಳನ್ನು ಮಾಡಿ ಫೇಸ್‌ಬುಕ್ ಇನ್ಸ್ಟಾಗ್ರಾಮ್ ಖಾತೆಗಳು ಹಾಗೂ ಇತರೆ ಆನ್‌ಲೈನ್ ಖಾತೆಗಳಲ್ಲಿ ಅಪ್ಲೋಡ್ ಮಾಡುತ್ತಿದ್ದಾರೆ.

ಇವರ ವಿರುದ್ಧ ಕ್ರಮ ಕೈಗೊಳ್ಳಲು ಪೊಲೀಸ್ ಠಾಣೆಗಳಲ್ಲಿ ಓರ್ವ ಪಿ.ಎಸ್‌.ಐ ಒಳಗೊಂಡಂತೆ ಒಟ್ಟು 4 ಜನ ಸಿಬ್ಬಂದಿಯವರು ಸಾಮಾಜಿಕ ಜಾಲತಾಣಗಳ ನಿಗಾವಣಾ (ಸೋಷಿಯಲ್ ಮೀಡಿಯಾ) ತಂಡ ರಚನೆ ಮಾಡಲಾಗಿದೆ. ಎಲ್ಲಾ ಠಾಣೆಗಳ ಸಿಬ್ಬಂದಿಗಳ ನಾಮಿನಲ್ ರೋಲ್ ಪಡೆದು, ವಾಟ್ಸ್ ಆಪ್ ಅನ್ನು ರಚಿಸಿ ನಿರ್ವಹಣೆ ಮಾಡಲಾಗುತ್ತಿದೆ.

ಈ ಅಧಿಕಾರಿಗಳು ಹಾಗೂ ಸಿಬ್ಬಂದಿ ಸಾಮಾಜಿಕ ಜಾಲತಾಣಗಳಲ್ಲಿ ಭಿನ್ನ ಹೆಸರುಗಳಲ್ಲಿ ಸಕ್ರಿಯವಾಗಿದ್ದು ಎಲ್ಲವನ್ನು ಗಮನಿಸುತ್ತಿರುತ್ತಾರೆ. ಯಾರಾದರೂ ನಿಯಮ ಉಲ್ಲಂಘನೆ ಮಾಡಿ ಪೋಸ್ಟ್ ಮಾಡಿದರೆ ಅಂತವರ ವಿರುದ್ಧ ಕ್ರಮ ಕೈಗೊಳ್ಳಲಾಗುತ್ತದೆ. ಕೇವಲ ಅಸಭ್ಯ ಭಾಷೆ ಅಷ್ಟೇ ಅಲ್ಲ, ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟು ಮಾಡುವ ಹಾಗೂ ಕೋಮು ಪ್ರಚೋದನಾಕಾರಿ ಸಂದೇಶಗಳನ್ನು ಹರಿಯಬಿಡುವವರ ವಿರುದ್ಧವೂ ಕ್ರಮ ಕೈಗೊಳ್ಳಲಾಗುತ್ತಿದೆ.


ವಿದ್ಯಾರ್ಥಿಗಳಿಗೆ ಪಾಠ!

ಈ ಬಗ್ಗೆ ಈಗಾಗಲೇ ಪೊಲೀಸ್ ಠಾಣೆಗಳ ವ್ಯಾಪ್ತಿಯಲ್ಲಿ ಬರುವ ಶಾಲಾ ಮತ್ತು ಕಾಲೇಜುಗಳಿಗೆ ಪೊಲೀಸ್ ಅಧಿಕಾರಿ/ಸಿಬ್ಬಂದಿಗಳು ಪ್ರತಿ ತಿಂಗಳ ಕೊನೆಯಲ್ಲಿ ಭೇಟಿ ನೀಡಲಾಗುತ್ತಿದ್ದು, ಈ ಸಂದರ್ಭದಲ್ಲಿ, ಸಾಮಾಜಿಕ ಜಾಲತಾಣಗಳ ಅನುಕೂಲ ಮತ್ತು ಅನಾನುಕೂಲಗಳ ಬಗ್ಗೆ ಶಾಲಾ/ ಕಾಲೇಜು ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಗುತ್ತಿದೆ ಹಾಗೂ ಸಾಮಾನ್ಯ ಸಭೆಗಳಲ್ಲಿ ಪೋಷಕರಲ್ಲಿಯೂ ಕೂಡ ಮಕ್ಕಳ ಮೇಲೆ ನಿಗಾವಹಿಸಲು ತಿಳುವಳಿಕೆ ಮೂಡಿಸಲಾಗುತ್ತಿದೆ.

ಅಸಭ್ಯ ಹಾಗೂ ಅಸಹ್ಯಕರವಾದಂತಹ ಭಾಷೆಗಳನ್ನು ಉಪಯೋಗಿಸುವುದರ ಜೊತೆಗೆ ವೀಡಿಯೋ ರೀಲ್ಸ್ ಗಳನ್ನು ಮಾಡುವವರ ವಿರುದ್ಧ ಐಪಿಸಿ/ಬಿಎನ್‌ಎಸ್ ಮತ್ತು ಐ.ಟಿ. ಕಾಯ್ದೆ ಮತ್ತು ಸಂಬಂಧಪಟ್ಟ ಇತರೆ ಕಾಯ್ದೆ ಅಡಿಯಲ್ಲಿ ಪ್ರಕರಣ ದಾಖಲಿಸಿ ಕ್ರಮ ಕೈಗೊಳ್ಳಲಾಗುತ್ತಿದೆ.

Law Enforcement Agency Request Portal ಮೂಲಕ ಸಂಬಂಧಪಟ್ಟ ಸೋಷಿಯಲ್ ಮೀಡಿಯಾ ಫ್ಲಾಟ್ ಫಾರ್ಮ್‌ ಗಳಿಗೆ, ನೋಟೀಸ್ ಮತ್ತು ಮನವಿ ಮೂಲಕ ಸಾಮಾಜಿಕ ಜಾಲತಾಣಗಳಲ್ಲಿ ಅಸಭ್ಯ ಹಾಗೂ ಅಸಹ್ಯಕರವಾದಂತಹ ವೀಡಿಯೋಗಳನ್ನು ಡಿಲೀಟ್ ಮಾಡುವುದಕ್ಕೆ ಕ್ರಮ ಕೈಗೊಳ್ಳಲಾಗುತ್ತಿದೆ.


Spread the love
Share:

administrator

Leave a Reply

Your email address will not be published. Required fields are marked *