Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಶಿಲ್ಪಾ ಶೆಟ್ಟಿ ಒಡೆತನದ ಬೆಂಗಳೂರಿನ ‘ಬ್ಯಾಸ್ಟಿಯನ್’ ಪಬ್‌ನಲ್ಲಿ ಗಲಾಟೆ: ಮಾಜಿ ಬಿಗ್ ಬಾಸ್ ಸ್ಪರ್ಧಿಯ ಮಾಜಿ ಪತಿಯಿಂದ ಸಿಬ್ಬಂದಿ ಮೇಲೆ ಹಲ್ಲೆ ಆರೋಪ

Spread the love

ಬೆಂಗಳೂರು: ಬೆಂಗಳೂರು ನಗರದ ಲ್ಯಾಂಗ್‌ಫೋರ್ಡ್ ರಸ್ತೆಯಲ್ಲಿರುವ ನಟಿ ಶಿಲ್ಪಾಶೆಟ್ಟಿ ಒಡೆತನದ ‘ಬ್ಯಾಸ್ಟಿಯನ್’ ಪಬ್‌ನಲ್ಲಿ (Bangalore pub brawl) ಗಲಾಟೆ ನಡೆದಿದೆ. 2 ದಿನಗಳ ನಂತರ ಈ ಪ್ರಕರಣ ಬೆಳಕಿಗೆ ಬಂದಿದೆ. ಗುರುವಾರ ರಾತ್ರಿ 1.30 ಸುಮಾರಿಗೆ ಈ ಘಟನೆ ನಡೆದಿದೆ. ಪಬ್‌ನಲ್ಲಿ ಸರ್ವಿಸ್ ವಿಚಾರಕ್ಕೆ ಸಂಬಂಧಿಸಿದಂತೆ ಗಲಾಟೆ ನಡೆದಿದೆ ಎಂದು ಹೇಳಲಾಗಿದೆ. ಈ ವೇಳೆ ಸಿಬ್ಬಂದಿ ಹಾಗೂ ಉದ್ಯಮಿ ಸತ್ಯ ನಾಯ್ಡು ನಡುವೆ ವಾಗ್ವಾದ ನಡೆದು, ಪಬ್​​​ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ್ದಾರೆ. ಇನ್ನು ಗಲಾಟೆಯ ಬಗ್ಗೆ ಯಾವುದೇ ದೂರು ದಾಖಲಾಗಿಲ್ಲ. ಇದೀಗ ಪೊಲೀಸರು ಸ್ವತಃ ಪಬ್​​​​​​​​ಗೆ ಬಂದು ಮಾಹಿತಿ ಕಲೆಹಾಕಿದ್ದಾರೆ. ಕಬ್ಬನ್ ಪಾರ್ಕ್ ಠಾಣೆ ಪೊಲೀಸರಿಗೆ ಈ ಗಲಾಟೆ ಬಗ್ಗೆ ವಿಡಿಯೋವೊಂದು ಸಿಕ್ಕಿದೆ, ಅದರ ಆಧಾರ ಮೇಲೆ ತನಿಖೆ ನಡೆಸಿದ್ದಾರೆ.

ಇನ್ನು ಉದ್ಯಮಿ ಸತ್ಯ ನಾಯ್ಡು ಅವರನ್ನು ಮಾಜಿ ಬಿಗ್ ಬಾಸ್ ಸ್ಪರ್ಧಿ ಮತ್ತು ನಿರೂಪಕಿಯ ಮಾಜಿ ಪತಿ ಎಂದು ಹೇಳಲಾಗಿದೆ. ಪಬ್‌ ಮುಚ್ಚುವ ಸಮಯದಲ್ಲಿ ಈ ಗಲಾಟೆ ನಡೆದಿದೆ. ಪಬ್‌ನಲ್ಲಿ ಸರ್ವಿಸ್ ನೀಡುವ ವಿಚಾರಕ್ಕೆ ಸತ್ಯ ನಾಯ್ಡು ಸಿಬ್ಬಂದಿಗಳ ಮೇಲೆ ಸಿಟ್ಟಾಗಿದ್ದಾರೆ. ಈ ವೇಳೆ ಸಿಬ್ಬಂದಿಗಳು ತುಂಬಾ ತಾಳ್ಮೆಯಿಂದ, ಅವರನ್ನು ಸಮಾಧಾನ ಮಾಡಲು ಮುಂದಾಗಿದ್ದಾರೆ. ಆದರೆ ಸತ್ಯ ನಾಯ್ಡು ಮಾತು ಕೇಳದೆ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾರೆ.

ಈ ಘಟನೆಯ ವೇಳೆ ಸತ್ಯ ನಾಯ್ಡು ಅತಿಯಾಗಿ ಮದ್ಯಪಾನ ಮಾಡಿದ್ದರು ಎಂದು ಹೇಳಲಾಗಿದೆ. ಸಿಬ್ಬಂದಿ ಮೇಲೆ ಹಲ್ಲೆ ಮಾಡುವುದನ್ನು ತಡೆಯಲು ಪಬ್‌ನ ಬೌನ್ಸರ್‌ಗಳು ಪ್ರಯತ್ನಿಸಿದ್ದಾರೆ. ಇನ್ನು ಈ ಬಗ್ಗೆ ಪೊಲೀಸರು ಯಾವುದೇ ದೂರು ದಾಖಲಿಸಿಕೊಂಡಿಲ್ಲ ಎಂದು ಹೇಳಲಾಗಿದೆ. ಇದೀಗ ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಸ್ಥಳಕ್ಕೆ ಧಾವಿಸಿ ವಿಚಾರಣೆ ನಡೆಸಿದ್ದಾರೆ. ಇನ್ನು ಈ ಗಲಾಟೆಯ ಬಗ್ಗೆ ವಿಡಿಯೋವೊಂದು ಸಿಕ್ಕಿದೆ. ಅದರ ಆಧಾರ ಮೇಲೆ ತನಿಖೆ ನಡೆಸಲು ಮುಂದಾಗಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *