ಆರ್ಎಸ್ಎಸ್ಗೆ ಮಹಾಗಜಕೇಸರಿ ಯೋಗ, $2042$ ರವರೆಗೂ ಪೂರ್ಣಾಯುಷ್ಯ!

ರಾಷ್ಟ್ರೀಯ ಸ್ವಯಂಸೇವಕ ಸಂಘದ ಚಟುವಟಿಕೆಗಳನ್ನು ನಿಷೇಧಿಸಬೇಕು ಎಂಬ ಕೂಗು ಈಗ ಕರ್ನಾಟಕದಲ್ಲಿ ಜೋರಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಪತ್ರದ ಬೆನ್ನಲ್ಲೇ ಅತ್ತ ಸಿಎಂ ಸಿದ್ದರಾಮಯ್ಯ, ಆ ಬಗ್ಗೆ ಪರಿಶೀಲನೆ ನಡೆಸುವುದಾಗಿಯೂ ತಿಳಿಸಿದ್ದಾರೆ. ಇದೀಗ ಆರ್ಎಸ್ಎಸ್ ಜನ್ಮ ತಾಳಿದ ದಿನಾಂಕ, ಸಮಯದ ಆಧಾರದಲ್ಲಿ ಖ್ಯಾತ ವಾಸ್ತು ತಜ್ಞ, ಜ್ಯೋತಿಷಿ ಡಾ. ಬಸವರಾಜ ಗುರೂಜಿ ಆ ಬಗ್ಗೆ ವಿಶ್ಲೇಷಿಸಿದ್ದಾರೆ.

ಆರ್ಎಸ್ಎಸ್ ಜನ್ಮ ಜಾತಕ ಪರಿಶೀಲಿಸಿದಾಗ, ಜಾತಕದಲ್ಲಿ ಮಹಾಗಜಕೇಸರಿ ಯೋಗವಿದೆ. ದಿನಾಂಕ 27-09-1925 ರ ಭಾನುವಾರ ಸ್ಥಾಪನೆಯಾಗಿರುವ ಮಾಹಿತಿ ಇದೆ. ಅದು ಶುಕ್ಲದಶಮಿ, ಧನಿಷ್ಟ ನಕ್ಷತ್ರ ಧನುರ್ ಲಗ್ನ, ಮಕರ ರಾಶಿ. ಶುಕ್ರ ಮಹಾದೆಶೆ ಇದ್ದು, 2042 ರ ತನಕದ ಪೂರ್ಣಾಯುಷ್ಯ ಜಾತಕ ಆರ್ಎಸ್ಎಸ್ನದ್ದಾಗಿದೆ. ಹೀಗಾಗಿ ಇದು ಗೋಚಾರದಲ್ಲಿ ಬರುತ್ತಿರುವ ವದಂತಿಗಳಿಗೆ ಪೂರಕವಾಗಿಲ್ಲ. ಶುಭ ದಿನ ಶುಭ ಲಗ್ನ ಶುಭ ಮಹೂರ್ತದಲ್ಲಿ ಸ್ಥಾಪನೆಯಾಗಿರುವ ಸಂಸ್ಥೆ ಗೆ ಯಾವುದೇ ಹಾನಿ ಇಲ್ಲ.
ಆರ್ಎಸ್ಎಸ್ ಸಂಬಂಧಿಸಿ ಈಗಿರುವ ಗ್ರಹ ಗೋಚಾರ ಇನ್ನೂ ಬಲಿಷ್ಟ ಮಟ್ಟದಲ್ಲಿ ವೃದ್ಧಿಯಾಗಲಿದ್ದು, ಇನ್ನೂ ವಿಸ್ತರಣೆಯಾಗುವ ಸಾಧ್ಯತೆ. ನಿಷೇಧ ಎನ್ನುವ ಪದ ಇದಕ್ಕೆ ವರ್ತಿಸುವುದಿಲ್ಲ. ಕಲಿಯುಗ ಪರ್ಯಂತ ಆರ್ಎಸ್ಎಸ್ ಜೀವಂತವಾಗಿರಲಿದೆ ಎಂದೇ ಹೇಳಬಹುದು. ಇದರಿಂದ ಮಹಾ ದೇಶ ರಕ್ಷಣೆಯ ಕಾರ್ಯವಾಗಲಿದೆ. ಜಾತಕ ರೀತ್ಯಾ ಮಹಾ ನಾಯಕರ ಉದ್ಭವ ಸಾಧ್ಯತೆ ಇದೆ. ಹಾಗೆಂದು 10 ರ ಮನೆ ಬಲಿಷ್ಠವಾಗಿದೆ. ಬುಧ ಉಚ್ಚನಾಗಿದ್ದು, ಕುಜನ ಜೊತೆ ಬದ್ಧ ಶತ್ರುಗಳ ಸಮಾಗಮವನ್ನೂ ಕಾಣಬಹುದು.