Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಬೆಂಗಳೂರಿನಲ್ಲಿ 75 ಕೋಟಿ ಡ್ರಗ್ಸ್ ಪತ್ತೆ: ವಿಮಾನ ನಿಲ್ದಾಣದ ಭದ್ರತೆ ಪ್ರಶ್ನೆಗೆ ಗುರಿ

Spread the love

ಮಂಗಳೂರು : ಮಂಗಳೂರು ಪೊಲೀಸರು ಬೆಂಗಳೂರಿನಲ್ಲಿ ರಾಜ್ಯದ ಅತಿ ದೊಡ್ಡ ಡ್ರಗ್ಸ್ ಪ್ರಕರಣ ಭೇದಿಸಿದ್ದಾರೆ. ಅದರಲ್ಲಿ ಇಬ್ಬರು ವಿದೇಶಿ ಮಹಿಳೆಯನ್ನು ಅರೆಸ್ಟ್ ಮಾಡಿದ್ದಾರೆ. ಅಲ್ಲದೆ ಬಂಧಿತ ಇಬ್ಬರು ಮಹಿಳೆಯರು ಕಳೆದ ಒಂದು ವರ್ಷದಲ್ಲಿ ದೆಹಲಿ ವಿಮಾನ ನಿಲ್ದಾಣದ ಮೂಲಕ ಬೆಂಗಳೂರು ಹಾಗೂ ಮುಂಬೈ ವಿಮಾನ ನಿಲ್ದಾಣದಲ್ಲಿ ಬರೋಬ್ಬರಿ 59 ಬಾರಿ ಡ್ರಗ್ಸ್ ಸಮೇತ ಬಂದಿದ್ದಾರೆ ಎಂಬ ಮಾಹಿತಿ ದೊರೆತಿದ್ದು. ಇದೀಗ ವಿಮಾನ ನಿಲ್ದಾಣದಲ್ಲಿನ ಭದ್ರತೆ ಬಗ್ಗೆ ಪ್ರಶ್ನೆ ಎದ್ದಿದೆ.
ಮಂಗಳೂರು ಸಿಸಿಬಿ ಪೊಲೀಸರು ರಾಜ್ಯದಲ್ಲೆ ಅತೀ ದೊಡ್ಡ ಪ್ರಕರಣ ಎಂದು ಹೇಳಲಾಗುವ ಡ್ರಗ್ಸ್ ಪ್ರಕರಣ ರಾಕೆಟ್ ನ್ನು ಹಿಡಿದಿದ್ದಾರೆ. ಅದು ಬರೋಬ್ಬರಿ 75 ಕೋಟಿ ಮೌಲ್ಯ ಕೆಜಿಗಟ್ಟಲೆ ಎಂಡಿಎಂ ಡ್ರಗ್ಸ್, ದಾಸ್ತಿ ಅಂದರೆ ಗ್ರಾಂ ಲೆಕ್ಕದಲ್ಲಿ ಸಿಗುತ್ತಿದ್ದ ಎಂಡಿಎಂ ಡ್ರಗ್ರ್ ಇದೇ ಮೊದಲ ಬಾರಿಗೆ ಇಷ್ಟು ದೊಡ್ಡ ಮಟ್ಟದಲ್ಲಿ ಪೊಲೀಸರಿಗೆ ಸಿಕ್ಕಿದೆ. ಆದರೆ ಈ ಪ್ರಕರಣ ಮಾತ್ರ ದೇಶದ ವಿಮಾನ ನಿಲ್ದಾಣದಲ್ಲಿನ ಭದ್ರತೆ ಬಗ್ಗೆ ಪ್ರಶ್ನೆಯನ್ನು ಎಬ್ಬಿಸಿದೆ.
ದೇಶದೆಲ್ಲೆಡೆ ಡ್ರಗ್ಸ್‌ ಸಾಗಾಟ ಮಾಡುವ ಈ ಇಬ್ಬರು ಮಹಿಳಾ ಡ್ರಗ್ ಪೆಡ್ಲರ್‌ಗಳು ದೆಹಲಿ ವಿಮಾನ ನಿಲ್ದಾಣದಿಂದ ದೇಶದ ಇತರೆಡೆ ವಿಮಾನದಲ್ಲೇ ಡ್ರಗ್ಸ್ ಸಾಗಾಟ ಮಾಡುತ್ತಿದ್ದರು ಎಂಬ ಮಾಹಿತಿ ಇದ್ದು, ಇದರಂತೆ ಮಂಗಳೂರು ಪೊಲೀಸರು ಮಾರ್ಚ್ 14ರ ಮಧ್ಯರಾತ್ರಿ ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಕಾದು ಕುಳಿತ್ತಿದ್ದರು. ರಾತ್ರಿ 12:30‌ರ ಸುಮಾರಿಗೆ ಬೆಂಗಳೂರು ವಿಮಾನ ನಿಲ್ದಾಣದಿಂದ ಎರಡು ಟ್ರಾಲಿಗಳ ಮೂಲಕ ಹೊರ ಬಂದ ದಕ್ಷಿಣ ಆಫ್ರಿಕಾ ಪ್ರಜೆಗಳಾದ 31 ವರ್ಷದ ಬಂಬಾ ಫಾಂಟಾ ಹಾಗೂ 30 ವರ್ಷದ ಅಬಿಗಾಲ್ ಅಡೋನಿಸ್ ಪ್ರತ್ಯೇಕ ಎರಡು ಕಾರುಗಳ ಮೂಲಕ ಹೊರಡುತ್ತಾರೆ. ಇಬ್ಬರಲ್ಲೂ ಒಂದೊಂದು ಟ್ರಾಲಿ ಬ್ಯಾಗ್ ಗಳಿದ್ದು ವಿಮಾನ ನಿಲ್ದಾಣಗಳಿಂದ ಎಲೆಕ್ಟ್ರಾನಿಕ್ ಸಿಟಿಯತ್ತ ಕಾರಿನಲ್ಲಿ‌ ಸಂಚರಿಸುತ್ತಿದ್ದ ವೇಳೆ ಮಂಗಳೂರು ಸಿಸಿಬಿ ಪೊಲೀಸರು ಕಾರನ್ನು‌ ಹಿಂಬಾಲಿಸಿ ಅಡ್ಡಗಟ್ಟಿ ಸಿನಿಮೀಯ ರೀತಿಯಲ್ಲಿ ಇಬ್ಬರನ್ನು ಬಂಧಿಸಿದ್ದಾರೆ. ಇಬ್ಬರಲ್ಲಿದ್ದ ಎರಡು ಟ್ರಾಲಿ ಬ್ಯಾಗ್‌ನಲ್ಲಿ ಒಟ್ಟು 75 ಕೋಟಿ ಮೌಲ್ಯದ 37.878 ಕೆಜಿ‌ ಎಂಡಿಎಂಎ ಮಾದಕ ವಸ್ತು ಪತ್ತೆಯಾಗಿದ್ದು ಎಲ್ಲವನ್ನ ವಶಪಡಿಸಿಕೊಂಡಿದ್ದಾರೆ. ಮಂಗಳೂರು ಪೊಲೀಸರು ಬೆಂಗಳೂರಿಗೆ ಹೋಗಿ ಬೆಂಗಳೂರುವಿಮಾನ ನಿಲ್ದಾಣದಿಂದ ಹೊರ ಬಂದ ಈ ಡ್ರಗ್ ಪೆಡ್ಲರ್‌ಗಳನ್ನು ಹಿಡಿದ್ದಾರೆ. ಆದರೆ ಅವರು ವಿಮಾನ ನಿಲ್ದಾಣದಿಂದ ಡ್ರಗ್ಸ್‌ ಸಮೇತ ಹೊರ ಬಂದಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ.
ಈ ಇಬ್ಬರು ಮಹಿಳೆಯರು ಇದೇ ಮೊದಲ ಬಾರಿಗೆ ಈ ರೀತಿ ವಿಮಾನದಲ್ಲಿ ಡ್ರಗ್ಸ್ ಸಾಗಾಟ ಮಾಡಿಲ್ಲ. ಕಳೆದ ಒಂದು ವರ್ಷದಲ್ಲಿ ಬರೋಬ್ಬರಿ 59 ಬಾರಿ ವಿಮಾನದಲ್ಲೇ ಈ ಡ್ರಗ್ಸ್ ಸಾಗಾಟ ಮಾಡಿದ್ದಾರೆ. ದೆಹಲಿಯಿಂದ 37 ಬಾರಿ ಬೆಂಗಳೂರು ವಿಮಾನ ನಿಲ್ದಾಣಕ್ಕೆ ಹಾಗೂ ದೆಹಲಿಯಿಂದ 22 ಬಾರಿ‌ ಮುಂಬೈ ವಿಮಾನ ನಿಲ್ದಾಣ ಡ್ರಗ್ಸ್‌ ಸಾಗಿಸಿದ್ದಾರೆ. ಪ್ರತೀ ಬಾರಿಯೂ ದೆಹಲಿಯಿಂದ ಲೇಟ್ ನೈಟ್ ಫ್ಲೈಟ್ ಗಳನ್ನೇ ಬುಕ್ ಮಾಡಿಕೊಂಡು ಬರುತ್ತಿದ್ದ ಈ ಇಬ್ಬರು ಮಹಿಳೆಯರು ಅದ್ಯಾವ ರೀತಿ ತಪಾಸಣೆಗೆ ಒಳಗಾಗದೇ ಅಲ್ಲಿನ ಭದ್ರತಾ ಸಿಬ್ಬಂದಿಗೆ ಸಿಕ್ಕಿ ಬೀಳದೇ ವಿಮಾನ ನಿಲ್ದಾಣದಿಂದ ಹೊರ ಬಂದಿದ್ದಾರೆ ಎನ್ನುವುದೇ ಅನುಮಾನ ಹುಟ್ಟಿಸಿದೆ.
ವಿಮಾನ ನಿಲ್ದಾಣಗಳಲ್ಲಿ ಸಣ್ಣಪುಟ್ಟ ವಸ್ತುಗಳನ್ನು ತಪಾಸಣೆ ನಡೆಸಿ ಬಳಿಕ ಸ್ಕ್ಯಾನರ್ ಮೂಲಕ ಸ್ಕ್ಯಾನ್ ಮಾಡಿಯೇ ಪ್ರತಿ ಪ್ರಯಾಣಿಕರನ್ನು ಒಳಗೆ ಹಾಗೂ ಹೊರಗೆ ಬಿಡಲಾಗುತ್ತದೆ. ಎಲ್ಲವನ್ನೂ‌ ಬಹಳ‌ ಕಟ್ಟು ನಿಟ್ಟಾಗಿ ತಪಾಸಣೆ ಮಾಡುವ ಭದ್ರತಾ ಸಿಬ್ಬಂದಿಗಳು ಈ ಡ್ರಗ್ ಪೆಡ್ಲರ್ ಗಳನ್ನ ಇಷ್ಟೊಂದು ಬಾರಿ ಸಲೀಸಾಗಿ ಹೇಗೆ ಬಿಟ್ಟು ಕಳಿಸಿದ್ದಾರೆ ಎನ್ನುವುದು ಅನುಮಾನದ ವಿಚಾರ.
ಒಟ್ಟಿನಲ್ಲಿ ಮಂಗಳೂರು ಪೊಲೀಸರ ಈ ಕಾರ್ಯಾಚರಣೆಯಿಂದಾಗಿ ರಾಜ್ಯ ಹಾಗೂ ದೇಶಕ್ಕೆ ಸಾಗಾಟ ಆಗುತ್ತಿದ್ದ ದೊಡ್ಡ ಡ್ರಗ್ಸ್ ಜಾಲ ಪತ್ತೆಯಾಗಿದೆ. ಮಂಗಳೂರು ಪೊಲೀಸರ ಈ ಬೃಹತ್ ಕಾರ್ಯಾಚರಣೆಗೆ ಸಿಎಂ ಸಿದ್ದರಾಮಯ್ಯ ಹಾಗೂ ವಿರೋಧ ಪಕ್ಷದ ಮುಖಂಡರುಗಳು ಸೇರಿ ರಾಜ್ಯಾದ್ಯಂತ ಭಾರೀ ಪ್ರಶಂಸೆ ವ್ಯಕ್ತವಾಗಿದೆ. ಇಷ್ಟಕ್ಕೇ ಸುಮ್ಮನಾಗದ ಮಂಗಳೂರು ಪೊಲೀಸರು ಈ‌ ಜಾಲದಲ್ಲಿ ಇರೋ‌ ಇನ್ನಷ್ಟು ಪೆಡ್ಲರ್ ಗಳ ಪತ್ತೆಗೆ ಬಲೆ ಬೀಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *