Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ತನ್ನ ಐಕಾನಿಕ್ ಕಾರನ್ನು ಅಭಿಮಾನಿಗೆ ಗಿಫ್ಟ್ ನೀಡಿದ ರೋಹಿತ್ ಶರ್ಮಾ

Spread the love

ಮುಂಬೈ: ಫ್ಯಾಂಟಸಿ ಕ್ರಿಕೆಟ್‌ ಸ್ಪರ್ಧೆಯಲ್ಲಿ ವಿಜೇತನಾದ ಅಭಿಮಾನಿಗೆ ಮುಂಬೈ ಇಂಡಿಯನ್ಸ್‌ ಸ್ಟಾರ್‌ ಬ್ಯಾಟ್ಸ್‌ಮನ್‌ ರೋಹಿತ್‌ ಶರ್ಮಾ ತನ್ನ ಐಕಾನಿಕ್‌ ನೀಲಿ ಲ್ಯಾಂಬೊರ್ಗಿನಿ ಉರುಸ್‌ಅನ್ನು ಗಿಫ್ಟ್‌ ಆಗಿ ನೀಡಿದ್ದಾರೆ.

ಈ ಸ್ಟೈಲಿಶ್ ಐಷಾರಾಮಿ ಕಾರಿನೊಂದಿಗೆ ಬಹಳ ಹಿಂದಿನಿಂದಲೂ ರೋಹಿತ್ ಭಾವನಾತ್ಮಕ ಸಂಬಂಧ ಹೊಂದಿದ್ದಾರೆ. ಇದು ಅವರ ಏಕದಿನ ಪಂದ್ಯಗಳಲ್ಲಿ ವಿಶ್ವ ದಾಖಲೆಯ 264 ರನ್ ಇನ್ನಿಂಗ್ಸ್‌ಗೆ ಗೌರವವಾಗಿ ಒಲಿದುಬಂದ ಕಾರು. 38 ವರ್ಷದ ಬ್ಯಾಟ್ಸ್‌ಮನ್ ತಮ್ಮ ನೀಲಿ ಲ್ಯಾಂಬೊದಲ್ಲಿ ನಗರದಲ್ಲಿ ಹೆಚ್ಚಿನ ಸಂದರ್ಭದಲ್ಲಿ ಸುತ್ತಾಡುತ್ತಿದ್ದರು.

ಐಪಿಎಲ್ 2025 ಕ್ಕೂ ಮೊದಲು, ರೋಹಿತ್ ಸೇರಿದಂತೆ ಅನೇಕ ಕ್ರಿಕೆಟಿಗರು Dream11 ಅಪ್ಲಿಕೇಶನ್‌ನ ಜಾಹೀರಾತಿನಲ್ಲಿ ಕಾಣಿಸಿಕೊಂಡಿದ್ದರು. ಆ ಜಾಹೀರಾತಿನಲ್ಲಿ, ರೋಹಿತ್ ತನ್ನ ಲ್ಯಾಂಬೋರ್ಗಿನಿ ಉರುಸ್ ಅನ್ನು ಅದೃಷ್ಟಶಾಲಿ ವಿಜೇತರಲ್ಲಿ ಒಬ್ಬರಿಗೆ ನೀಡುವುದಾಗಿ ಹೇಳಿದ್ದರು.

ಈಗ ರೋಹಿತ್ ಅಭಿಮಾನಿಗೆ ಕಾರಿನ ಕೀಲಿಯನ್ನು ಹಸ್ತಾಂತರಿಸುತ್ತಿರುವ ವೀಡಿಯೋ ಈಗ ಸಾಮಾಜಿಕ ಮಾಧ್ಯಮದಲ್ಲಿ ಎಲ್ಲೆಡೆ ವೈರಲ್‌ ಆಗಿದೆ. ಈ ಕಾರಿನ ಭಾರತದಲ್ಲಿ ಸುಮಾರು 4 ಕೋಟಿ ರೂ. ಇದೆ.

67 ಪಂದ್ಯಗಳಲ್ಲಿ 12 ಶತಕಗಳು ಮತ್ತು 18 ಅರ್ಧ ಶತಕಗಳು ಸೇರಿದಂತೆ 4,301 ರನ್ ಗಳಿಸಿದ ರೋಹಿತ್ ತಮ್ಮ ಟೆಸ್ಟ್ ವೃತ್ತಿಜೀವನಕ್ಕೆ ನಿವೃತ್ತಿ ಘೋಷಿಸಿದ್ದಾರೆ. ಜೊತೆಗೆ ಸ್ಟಾರ್ ಬ್ಯಾಟ್ಸ್‌ಮನ್ ವಿರಾಟ್ ಕೊಹ್ಲಿ ಕೂಡ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮುಂಬರುವ ಐದು ಟೆಸ್ಟ್ ಸರಣಿಗೆ ಮುನ್ನ ಟೆಸ್ಟ್ ಕ್ರಿಕೆಟ್‌ಗೆ ಗುಡ್‌ಬೈ ಹೇಳಿದ್ದಾರೆ.

ಐಪಿಎಲ್‌ 2025ರ ಆವೃತ್ತಿಯಲ್ಲಿ ಮುಂಬೈ ತಂಡ ಪ್ಲೇ-ಆಫ್‌ ಹಂತದಲ್ಲಿದೆ. ಐದು ಬಾರಿ ಚಾಂಪಿಯನ್ ಆಗಿರುವ ಮುಂಬೈ ಪ್ಲೇ-ಆಫ್ ಸ್ಥಾನಕ್ಕಾಗಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ತೀವ್ರ ಪೈಪೋಟಿ ನಡೆಸಬೇಕಾಗಿದೆ. ಪ್ರಸ್ತುತ ಮುಂಬೈ ತಂಡ 12 ಪಂದ್ಯಗಳನ್ನು ಆಡಿದ್ದು, ಅವುಗಳಲ್ಲಿ ಏಳರಲ್ಲಿ ಗೆದ್ದಿದ್ದು, ಒಟ್ಟು 14 ಅಂಕಗಳನ್ನು ಗಳಿಸಿದೆ. 

ಡಿಸಿ ತಂಡವು 12 ಪಂದ್ಯಗಳಲ್ಲಿ ಆರು ಪಂದ್ಯಗಳನ್ನು ಗೆದ್ದು 12 ಅಂಕಗಳನ್ನು ಗಳಿಸಿದೆ. ಎರಡೂ ತಂಡಗಳು ಬುಧವಾರ ಮುಖಾಮುಖಿಯಾಗಲಿದ್ದು, ಎಂಐ ತಂಡವು ಡಿಸಿ ತಂಡವನ್ನು ಸೋಲಿಸಿದರೆ, ಅವರು ಪ್ಲೇಆಫ್‌ಗೆ ಅರ್ಹತೆ ಪಡೆಯುತ್ತಾರೆ.


Spread the love
Share:

administrator

Leave a Reply

Your email address will not be published. Required fields are marked *