Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಸ್ತೆ ಅಪಘಾತ ಮತ್ತು ಆಕಸ್ಮಿಕ ಸಾವು: ರಾಷ್ಟ್ರದಲ್ಲೇ ಬೆಂಗಳೂರು 3ನೇ ಸ್ಥಾನಕ್ಕೆ

Spread the love

ಬೆಂಗಳೂರು: ಬೆಂಗಳೂರಿನಲ್ಲಿ ಅಪಘಾತಗಳು, ಆತ್ಮಹತ್ಯೆ ಸೇರಿದಂತೆ ವಿವಿಧ ಕಾರಣಗಳಿಂದ ಜನರ ಸಾವಿನ ಸಂಖ್ಯೆ (Death rate) ಏರುತ್ತಲೇ ಇದೆ. 2023ರ ರಾಷ್ಟ್ರೀಯ ಅಪರಾಧ ದಾಖಲೆಗಳ ಬ್ಯೂರೋನ (NCRB) ವರದಿಯ ಪ್ರಕಾರ ಸಾವಿನ ಸಂಖ್ಯೆಯಲ್ಲಿ ಬೆಂಗಳೂರು ರಾಷ್ಟ್ರದಲ್ಲೇ 3 ನೇ ಸ್ಥಾನಕ್ಕೇರಿದೆ. 2023ರಲ್ಲಿ ಬೆಂಗಳೂರಿನಲ್ಲಿ ಬರೋಬ್ಬರಿ 4,414 ಸಾವುಗಳು ಸಂಭವಿಸಿದ್ದು, ಮುಂಬೈ ಮತ್ತು ಪುಣೆಯ ಬಳಿಕ ಬೆಂಗಳೂರು ಅತಿಹೆಚ್ಚು ಸಾವಿನ ಸಂಖ್ಯೆ ಹೊಂದಿದ ನಗರವಾಗಿದೆ ಎಂದು NCRB ವರದಿ ಮಾಡಿದೆ.

ರಸ್ತೆ ಅಪಘಾತದಲ್ಲಿ ಸಾವಿಗೀಡಾದವರ ಸಂಖ್ಯೆಯಲ್ಲಿ ಬೆಂಗಳೂರು 3ನೇ ಸ್ಥಾನ

ಕಳೆದ ವರ್ಷ ಇಡೀ ಭಾರತದಲ್ಲಿ 65,897 ಆಕಸ್ಮಿಕ ಸಾವುಗಳು ಸಂಭವಿಸಿದ್ದು, ಮುಂಬೈನಲ್ಲಿ 8,974 ಪ್ರಕರಣ, ಪುಣೆಯಲ್ಲಿ 5,054 ಪ್ರಕರಣಗಳು ದಾಖಲಾಗಿದ್ದರೆ, ಬೆಂಗಳೂರಿನಲ್ಲಿ 4,414 ಆಕಸ್ಮಿಕ ಸಾವು ಸಂಭವಿಸಿದೆ. ಇದರಿಂದಾಗಿ ಸಾವಿನ ಸಂಖ್ಯೆಯಲ್ಲಿ ಮುಂಬೈ ಮತ್ತು ಪುಣೆಯ ನಂತರ ಬೆಂಗಳೂರು 3ನೇ ಸ್ಥಾನದಲ್ಲಿದೆ. ಈ ಎಲ್ಲಾ ಸಾವುಗಳು ರಸ್ತೆ ಅಪಘಾತ, ವಿದ್ಯುತ್ ಶಾಕ್ ಇನ್ನಿತರ ಕಾರಣಗಳಿಂದ ಸಂಭವಿಸಿವೆಯೆಂದು NCRB ವರದಿ ಮಾಡಿದೆ.

2023ರಲ್ಲಿ ಸುಮಾರು 4,980 ಅಪಘಾತಗಳು ವರದಿಯಾಗಿತ್ತು.ಅದರಲ್ಲಿ 915 ಸಾವುಗಳು ಸಂಭವಿಸಿತ್ತು. ದೆಹಲಿಯಲ್ಲಿ 1,457, ಜೈಪುರದಲ್ಲಿ 1,017 ಸಾವುಗಳು ಸಂಭವಿಸಿದ್ದವು. NCRB ವರದಿಯ ಪ್ರಕಾರ ಬೆಂಗಳೂರು ಸಾವಿನ ಸಂಖ್ಯೆಯಲ್ಲಿ 3ನೇ ಸ್ಥಾನಕ್ಕೇರಿತ್ತು. ಕೇವಲ ರಸ್ತೆ ಅಪಘಾತದಿಂದಾದ ಸಾವಿನ ಪ್ರಕರಣಗಳೇ 97.3 ಪ್ರತಿಶತದಷ್ಟಿತ್ತು.

ಬೆಂಗಳೂರಿನಲ್ಲಿ ಆತ್ಮಹತ್ಯೆಯ ಪ್ರಕರಣಗಳೂ ಗಗನಕ್ಕೇರಿವೆ

ಅಪಘಾತಕ್ಕೀಡಾಗಿ ಸತ್ತವರ ಸಂಖ್ಯೆಯೊಂದಿಗೆ ಆತ್ಮಹತ್ಯೆಯ ಸಂಖ್ಯೆಯೂ ಬೆಂಗಳೂರಿನಲ್ಲಿ ಹೆಚ್ಚಾಗಿದೆ. 2022 ರಲ್ಲಿ ಆತ್ಮಹತ್ಯೆಗೆ ಬಲಿಯಾದವರ ಸಂಖ್ಯೆ 2313 ಆಗಿತ್ತು. ಅದು 2023 ರ ಹೊತ್ತಿಗೆ 2.5 ಪ್ರತಿಶತ ಏರಿಕೆ ಕಂಡು, 2,370 ಆತ್ಮಹತ್ಯೆ ಪ್ರಕರಣಗಳು ಬೆಳಕಿಗೆ ಬಂದಿದ್ದವು. ಸದ್ಯದ NCRB ವರದಿಯ ಪ್ರಕಾರ  ಬೆಂಗಳೂರು ಆತ್ಮಹತ್ಯೆ ಮಾಡಿಕೊಂಡು ಸಾವಿಗೀಡಾದವರ ಸಂಖ್ಯೆಯಲ್ಲಿ ಭಾರತದಲ್ಲಿಯೇ ಎರಡನೇ ಸ್ಥಾನದಲ್ಲಿದೆ. ದೆಹಲಿಯಲ್ಲಿ 3,131 ಪ್ರಕರಣಗಳು, ಚೆನ್ನೈನಲ್ಲಿ 1,529 ಮತ್ತು ಮುಂಬೈನಲ್ಲಿ 1,415 ಪ್ರಕರಣಗಳು ದಾಖಲಾಗಿದ್ದವು. ಬೆಂಗಳೂರು ಸೇರಿದಂತೆ ಈ ಮೂರು ಮಹಾನಗರಗಳಲ್ಲಿ ಒಟ್ಟೂ 53 ನಗರಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಸಾವು ಸಂಭವಿಸಿದ್ದು,  32 ಪ್ರತಿಶತ ಸಾವುಗಳು ಈ 4 ಮಹಾನಗರಗಳಲ್ಲಿಯೇ ನಡೆದಿವೆ.


Spread the love
Share:

administrator

Leave a Reply

Your email address will not be published. Required fields are marked *