Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆರ್‌ಜೆ ಮಹ್ವಾಶ್ ಕ್ರಿಕೆಟ್ ಲೀಗ್‌ ಬಂಡವಾಳ ಹೂಡಿಕೆ – ಚಹಲ್ ಗೆಳತಿಯ ಹೊಸ ಅಧ್ಯಾಯ

Spread the love

ಟೀಮ್ ಇಂಡಿಯಾ ಆಟಗಾರ ಯುಜ್ವೇಂದ್ರ ಚಹಲ್ ಅವರ ಗೆಳತಿ ಆರ್​ಜೆ ಮಹ್ವಾಶ್ ಮತ್ತೆ ಸುದ್ದಿಯಲ್ಲಿದ್ದಾರೆ. ಈ ಬಾರಿ ಸುದ್ದಿಯಾಗಿರುವುದು ಕ್ರಿಕೆಟ್ ತಂಡದ ಖರೀದಿಯೊಂದಿಗೆ ಎಂಬುದು ವಿಶೇಷ. ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆ ಚಹಲ್ ಜೊತೆ ಕಾಣಿಸಿಕೊಂಡಿದ್ದ ಮಹ್ವಾಶ್ ಇದೀಗ ಚಾಂಪಿಯನ್ಸ್ ಲೀಗ್ ಟಿ10 ಟೂರ್ನಿಯಲ್ಲಿ ತಂಡವೊಂದನ್ನು ಖರೀದಿಸಿದ್ದಾರೆ.

ಅಂತಾರಾಷ್ಟ್ರೀಯ ಕ್ರಿಕೆಟ್​ನಿಂದ ನಿವೃತ್ತರಾಗಿರುವ ಆಟಗಾರರನ್ನು ಒಳಗೊಂಡಿರುವ ಹೊಸ ಟಿ10 ಲೀಗ್ ಶೀಘ್ರದಲ್ಲೇ ಶುರುವಾಗಲಿದೆ. ಚಾಂಪಿಯನ್ ಲೀಗ್ ಟಿ10 ಹೆಸರಿನಲ್ಲಿ ಮೂಡಿಬರಲಿರುವ ಈ ಟೂರ್ನಿಯ ಫ್ರಾಂಚೈಸಿ ಒಂದಕ್ಕೆ ಆರ್​ಜೆ ಮಹ್ವಾಶ್ ಸಹ-ಮಾಲೀಕರಾಗಿದ್ದಾರೆ. ಒಟ್ಟು 8 ತಂಡಗಳು ಈ ಟೂರ್ನಿಯಲ್ಲಿ ಕಣಕ್ಕಿಳಿಯಲಿದ್ದು, ಇದರಲ್ಲಿ ಒಂದು ತಂಡಕ್ಕೆ ಮಹ್ವಾಶ್ ಬಂಡವಾಳ ಹೂಡಿದ್ದಾರೆ.

ಆರ್​ಜೆ ಮಹ್ವಾಶ್ ಯಾರು?

ಆರ್​ಜೆ ಮಹ್ವಾಶ್  ಭಾರತದ ಅತ್ಯಂತ ಜನಪ್ರಿಯ ರೇಡಿಯೋ ಜಾಕಿ. ಹಾಗೆಯೇ ಸೋಷಿಯಲ್ ಮೀಡಿಯಾ ಇಂಫುಲೆನ್ಸರ್. ಈ ಹಿಂದೆ ಅವರು ಚಿತ್ರರಂಗದಲ್ಲೂ ಗುರುತಿಸಿಕೊಂಡಿದ್ದರು. ಚಾಂಪಿಯನ್ಸ್ ಟ್ರೋಫಿ 2025ರ ವೇಳೆ ಮಹ್ವಾಶ್ ಟೀಮ್ ಇಂಡಿಯಾ ಸ್ಪಿನ್ನರ್ ಯುಜ್ವೇಂದ್ರ ಚಹಲ್ ಕಾಣಿಸಿಕೊಂಡಿದ್ದರು. ಇದರೊಂದಿಗೆ ಚಹಲ್, ಮಹ್ವಾಶ್ ಜೊತೆ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ಸುದ್ದಿಗಳು ಹರಿದಾಡಲಾರಂಭಿಸಿತು.

ಇದನ್ನು ಪುಷ್ಠೀಕರಿಸುವಂತೆ ಆರ್​ಜೆ ಮಹ್ವಾಶ್ ಇಂಡಿಯನ್ ಪ್ರೀಮಿಯರ್ ಲೀಗ್ ವೇಳೆಯೂ ಯುಜ್ವೇಂದ್ರ ಚಹಲ್ ಜೊತೆ ಕಾಣಿಸಿಕೊಂಡರು. ಅಷ್ಟೇ ಅಲ್ಲದೆ ಪಂಜಾಬ್ ಕಿಂಗ್ಸ್ ತಂಡದ ಟೀಮ್ ಬಸ್​ನಲ್ಲಿ ಚಹಲ್ ಜೊತೆ ತೆರಳಿದ್ದರಿಂದ ಇಬ್ಬರ ನಡುವೆ ಪ್ರೇಮಾಂಕುರವಾಗಿ ಎಂಬ ಸುದ್ದಿಗಳು ಹುಟ್ಟಿಕೊಂಡಿದ್ದವು. ಇದಾಗ್ಯೂ ಚಹಲ್ ಆಗಲಿ, ಮಹ್ವಾಶ್ ಆಗಲಿ ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.

ಇದೀಗ ಟಿ10 ಲೀಗ್​ನಲ್ಲಿ ತಂಡವೊಂದನ್ನು ಖರೀದಿಸುವ ಮೂಲಕ ಆರ್​​ಜೆ ಮಹ್ವಾಶ್ ಕ್ರಿಕೆಟ್ ಅಂಗಳಕ್ಕೂ ಕಾಲಿಟ್ಟಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ಬಂಡವಾಳ ಹೂಡಿ ಅದೃಷ್ಟ ಪರೀಕ್ಷೆ ನಡೆಸಲು ಮುಂದಾಗಿದ್ದಾರೆ.

ಚಾಂಪಿಯನ್ಸ್ ಲೀಗ್ ಟಿ10 ಟೂರ್ನಿಯ ತಂಡಗಳಾವುವು?

  • ಎಲೈಟ್ ಈಗಲ್ಸ್
  • ಮೈಟಿ ಮೇವ್ರಿಕ್ಸ್
  • ಸೂಪರ್ ಸೋನಿಕ್
  • ಡೈನಾಮಿಕ್ ಡೈನಾಮೋಸ್
  • ಬ್ರೇವ್ ಬ್ಲೇಝರ್ಸ್
  • ವಿಕ್ಟರಿ ವೆಂಗಾರ್ಡ್
  • ಸ್ಟೆಲ್ಲರ್ ಸ್ಟ್ರೈಕರ್ಸ್
  • ಸುಪ್ರೀಮ್ ಸ್ಟಾಲಿನ್ಸ್

ಐಕಾನ್ ಪ್ಲೇಯರ್ಸ್ ಯಾರೆಲ್ಲಾ?

  • ಪಾರ್ಥೀವ್ ಪಟೇಲ್ (ಭಾರತ)
  • ತಿಲಕರತ್ನೆ ದಿಲ್ಶಾನ್ (ಶ್ರೀಲಂಕಾ)
  • ಡ್ವೇನ್ ಸ್ಮಿತ್ (ವೆಸ್ಟ್ ಇಂಡೀಸ್)
  • ರಾಸ್ ಟೇಲರ್ (ನ್ಯೂಝಿಲೆಂಡ್)
  • ಶಾನ್ ಮಾರ್ಷ್ (ಆಸ್ಟ್ರೇಲಿಯಾ)
  • ಡೇನಿಯಲ್ ಕ್ರಿಶ್ಚಿಯನ್ (ಆಸ್ಟ್ರೇಲಿಯಾ)
  • ತಿಸಾರ ಪರೇರಾ (ಶ್ರೀಲಂಕಾ)

ಚಾಂಪಿಯನ್ಸ್ ಲೀಗ್ ಟಿ10 ಲೀಗ್ ಯಾವಾಗ ಶುರು?

ಮಾಜಿ ಕ್ರಿಕೆಟಿಗರ ನೂತನ ಟಿ10 ಲೀಗ್​ ಆಗಸ್ಟ್ 22 ರಿಂದ ಶುರುವಾಗಲಿದೆ. 8 ತಂಡಗಳು ಕಣಕ್ಕಿಳಿಯಲಿರುವ ಈ ಟೂರ್ನಿಯ ಫೈನಲ್ ಪಂದ್ಯವು ಆಗಸ್ಟ್ 24 ರಂದು ಜರುಗಲಿದೆ.


Spread the love
Share:

administrator

Leave a Reply

Your email address will not be published. Required fields are marked *