ಸಣ್ಣ ಮತ್ತು ಮಧ್ಯಮ ಗಾತ್ರದ ಷೇರುಗಳಲ್ಲಿ ಏರಿಕೆಯಿಂದ ಹೂಡಿಕೆದಾರರಿಗೆ ಸಂತೋಷ

ಮುಂಬೈ : ಹಲವು ದಿನಗಳಿಂದ ಕುಸಿಯುತ್ತಾ ಸಾಗಿದ್ದಾ ಷೇರು ಮಾರುಕಟ್ಟೆ ತುಸು ಚೇತರಿಕೆ ಕಂಡಿದೆ. ಸೋಮವಾರ ಒಂದೇ ದಿನ ಸೆನ್ಸೆಕ್ಸ್ 800 ಪಾಯಿಂಟ್ ಗಳಷ್ಟು ಏರಿಕೆ ಕಂಡಿದ್ದು, ನಿಫ್ಟಿ 24 ಸಾವಿರ ಅಂಕ ತಲುಪಿದೆ.
ಸಣ್ಣ ಮತ್ತು ಮಧ್ಯಮ ಗಾತ್ರದ ಷೇರುಗಳು ಹಬ್ಬದ ವಾತಾವರಣ ಸೃಷ್ಟಿಸಿದ್ದು, ಹೂಡಿಕೆದಾರರಲ್ಲಿ ಸಂತಸ ಮೂಡಿಸಿದೆ.
ನಿಫ್ಟಿ ಬ್ಯಾಂಕ್ ಷೇರುಗಳು 55 ಸಾವಿರ ಅಂಕ ತಲುಪಿ ಸಾರ್ವಕಾಲಿಕ ದಾಖಲೆ ಸೃಷ್ಟಿಸಿದೆ. ಐಸಿಐಸಿಯ ಬ್ಯಾಂಕ್, ಯೆಸ್ ಬ್ಯಾಂಕ್, ಇನ್ಫೋಸಿಸ್., ಟಾಟಾ ಎಲ್ಕ್ಸಿ, ಜಸ್ಟ್ ಡಯಲ್ ಷೇರುಗಳು ಗಮನಾರ್ಹವಾಗಿ ಏರಿಕೆ ಕಂಡಿವೆ.