ಅಪಘಾತದಲ್ಲಿ ಯುವ ಕಂದಾಯ ಅಧಿಕಾರಿ ರಮೇಶ್ ದುರ್ಮರಣ

ಚಿಂತಾಮಣಿ: ಚಿಂತಾಮಣಿ ತಾಲ್ಲೂಕಿನ ಮುರುಗಮಲ್ಲ ಹೋಬಳಿಯ ಪೆದ್ದೂರು ಸರ್ಕಲ್ ನ ಗ್ರಾಮ ಆಡಳಿತ ಅಧಿಕಾರಿ ಹಾಗೂ ಸದರಿ ಹೋಬಳಿಯ ಕಂದಾಯ ಇಲಾಖೆಯ ಆರ್ ಐ ಆಗಿ ಕೆಲಸ ನಿರ್ವಹಿಸು ತ್ತಿದ್ದ ರಮೇಶ್(28 ವರ್ಷ) ಇವರು ರಾತ್ರಿ ಮಲ್ಲೂರು ಬಳಿ ಅಪಘಾತವಾಗಿ ಮೃತಪಟ್ಟಿದ್ದಾರೆ.

ಮೃತಪಟ್ಟಿರುವ ವಿಷಯ ತಿಳಿದ ತಕ್ಷಣ ಕಂದಾಯ ಇಲಾಖೆಯ ಅಧಿಕಾರಿಗಳು ಅವರ ಸ್ವಗ್ರಾಮಕ್ಕೆ ತೆರಳಿ ಸಂತಾಪ ಸೂಚಿಸಿದ್ದಾರೆ.
