Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಡಿಜಿಟಲ್ ಅರೆಸ್ಟ್ ಹೆಸರಿನಲ್ಲಿ ನಿವೃತ್ತ ಎಲ್ಐಸಿ ಅಧಿಕಾರಿಗೆ ವಂಚನೆ; 62ರ ಮಹಿಳೆ ಕಳೆದುಕೊಂಡಿದ್ದು ಬರೋಬ್ಬರಿ 99 ಲಕ್ಷ ರೂ

Spread the love

ಪುಣೆ: ಇವತ್ತು ಎಲ್ಲವೂ ಆನ್​ಲೈನ್ ಆಗಿರುವುದರಿಂದ ಸೈಬರ್ ಅಪರಾಧಿಗಳಿಗೆ (cyber criminals) ಹಣ ದೋಚಲು ಒಳ್ಳೆಯ ಮಾರ್ಗಗಳು ಸಿಕ್ಕಿವೆ. ಇತ್ತೀಚೆಗೆ ದೇಶದಲ್ಲಿ ಡಿಜಿಟಲ್ ಅರೆಸ್ಟ್ ಪ್ರಕರಣಗಳು ಸಾಕಷ್ಟು ಬೆಳಕಿಗೆ ಬರುತ್ತಿವೆ. ಪುಣೆಯ ಮಹಿಳೆಯೊಬ್ಬರು (woman) ಇಂಥದ್ದೇ ಪ್ರಕರಣದಲ್ಲಿ 99 ಲಕ್ಷ ರೂ ಕಳೆದುಕೊಂಡ ಘಟನೆ ನಡೆದಿದೆ. ನಕಲಿ ಸರ್ಕಾರಿ ದಾಖಲೆಗಳನ್ನು (forged documents) ಸೃಷ್ಟಿಸಿ 62 ವರ್ಷದ ಮಹಿಳೆಯೊಬ್ಬಳನ್ನು ಹೆದರಿಸಿ ಆನ್​ಲೈನ್​ನಲ್ಲೇ ಹಣ ಲಪಟಾಯಿಸಲಾಗಿದೆ. ವಂಚನೆಗೊಳಗಾದ 62 ವರ್ಷದ ಮಹಿಳೆಯು ಪುಣೆಯ ಕೊತ್ರುಡ್ (Kothrud) ಎಂಬಲ್ಲಿನ ನಿವಾಸಿಯಾಗಿದ್ದು, ನಿವೃತ್ತ ಎಲ್​ಐಸಿ ಅಧಿಕಾರಿಯೂ ಹೌದು.

ಅಕ್ಟೋಬರ್ ಕೊನೆಯ ವಾರದಲ್ಲಿ ಈ ವಂಚನೆ ನಡೆದಿದೆ. ಸೈಬರ್ ಸಿಟಿ ಸೈಬರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪೊಲೀಸರು ನೀಡಿರುವ ಮಾಹಿತಿ ಪ್ರಕಾರ, ಡಾಟಾ ಪ್ರೊಟೆಕ್ಷನ್ ಏಜೆನ್ಸಿ ಕಡೆಯವನೆಂದು ಹೇಳಿಕೊಂಡ ವ್ಯಕ್ತಿಯೊಬ್ಬ ಪುಣೆಯ ಮಹಿಳೆಯನ್ನು ಸಂಪರ್ಕಿಸುತ್ತಾನೆ. ಆಕೆಯ ಆಧಾರ್ ಜೋಡಿತ ಮೊಬೈಲ್ ನಂಬರ್ ಅನ್ನು ಅಕ್ರಮ ವಹಿವಾಟುಗಳಿಗೆ ದುರ್ಬಳಕೆ ಮಾಡಲಾಗಿದೆ ಎಂದು ಹೇಳುತ್ತಾನೆ.

ನಂತರ ಆ ಮಹಿಳೆಗೆ ಫೋನ್​ನಲ್ಲೇ ಪೊಲೀಸ್ ಅಧಿಕಾರಿ ಎನ್ನಲಾದ ಜಾರ್ಜ್ ಮ್ಯಾಥ್ಯೂ ಅವರನ್ನು ಪರಿಚಯಿಸಲಾಗುತ್ತದೆ. ಆ ನಕಲಿ ಪೊಲೀಸ್ ಅಧಿಕಾರಿಯು, ಮಹಿಳೆಯಿಂದ ಅಕ್ರಮ ಹಣ ವರ್ಗಾವಣೆ ಕೃತ್ಯ ಆಗಿದೆ ಎಂದು ಆರೋಪಿಸಿ, ಆಕೆಯ ಬ್ಯಾಂಕ್ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಳ್ಳಲಾಗುವುದು ಎಂದು ಎಚ್ಚರಿಸುತ್ತಾನೆ.

ನಿರ್ಮಲಾ ಸೀತಾರಾಮನ್ ನಕಲಿ ಹಸ್ತಾಕ್ಷರ ಇರುವ ದಾಖಲೆ

ವಂಚಕರು ಮಹಿಳೆ ವಿರುದ್ಧ ಒಂದು ನಕಲಿ ಅರೆಸ್ಟ್ ವಾರಂಟ್ ದಾಖಲೆ ಸೃಷ್ಟಿಸಿ ಅದನ್ನು ಮೊಬೈಲ್ ನಂಬರ್​ಗೆ ಕಳುಹಿಸಿದ್ದಾರೆ. ಆ ದಾಖಲೆಯಲ್ಲಿ ನಿರ್ಮಲಾ ಸೀತಾರಾಮನ್ ಅವರ ನಕಲಿ ಹಸ್ತಾಕ್ಷರ ಇರುತ್ತದೆ. ಸರ್ಕಾರ ಅಧಿಕೃತ ಮುದ್ರೆ ರೀತಿಯ ಸೀಲ್ ಹಾಕಲಾಗಿರುತ್ತದೆ.

ಮಹಿಳೆಗೆ ವಯಸ್ಸಾಗಿರುವುದರಿಂದ ಆಕೆಯನ್ನು ಡಿಜಿಟಲ್ ಅರೆಸ್ಟ್ ಮಾಡಲಾಗುವುದು. ದೂರದಿಂದಲೇ ಆಕೆಯ ಮೇಲೆ ನಿಗಾ ಇರಿಸಲಾಗುವುದು ಎಂದು ಹೇಳುವ ದುಷ್ಕರ್ಮಿಗಳು, ಮಹಿಳೆಯ ಎಲ್ಲಾ ಬ್ಯಾಂಕು ಅಕೌಂಟ್​ಗಳಲ್ಲಿರುವ ಹಣದ ಪರಿಶೀಲನೆ ಆಗಬೇಕಿರುವುದರಿಂದ, ಅದನ್ನು ಆರ್​ಬಿಐ ಅಕೌಂಟ್​ಗಳಿಗೆ ವರ್ಗಾಯಿಸಬೇಕೆಂದು ತಿಳಿಸುತ್ತಾರೆ. ಇವರ ಮಾತನನ್ನು ನಂಬಿ ಆ ಮಹಿಳೆ ತನ್ನಲ್ಲಿರುವ 99 ಲಕ್ಷ ರೂ ಹಣವನ್ನು ದುಷ್ಕರ್ಮಿಗಳು ತಿಳಿಸುವ ವಿವಿಧ ಬ್ಯಾಂಕ್ ಅಕೌಂಟ್​ಗಳಿಗೆ ವರ್ಗಾವಣೆ ಮಾಡುತ್ತಾರೆ

ಈ ವಂಚಕರು ನಕಲಿ ಅರೆಸ್ಟ್ ವಾರಂಟ್ ಮಾತ್ರವಲ್ಲ, ಜಾರಿ ನಿರ್ದೇಶನಾಲಯ ಮತ್ತಿತರ ಸರ್ಕಾರಿ ಸಂಸ್ಥೆಗಳ ಹೆಸರಿನಲ್ಲಿ ನಕಲಿ ದಾಖಲೆಗಳನ್ನು ಸೃಷ್ಟಿಸಿ ಮಹಿಳೆಗೆ ಕಳುಹಿಸಿ ಹೆದರಿಸುವ ಕೆಲಸ ಮಾಡುತ್ತಾರೆ. ಮಹಿಳೆಯಿಂದ 99 ಲಕ್ಷ ರೂ ಹಣ ಬಂದ ಬಳಿಕ ದುಷ್ಕರ್ಮಿಗಳು ತಮ್ಮ ಸಂಪರ್ಕ ನಂಬರ್​ಗಳನ್ನು ಸ್ವಿಚ್ ಆಫ್ ಮಾಡಿಕೊಳ್ಳುತ್ತಾರೆ. ಆಗ ಮಹಿಳೆಗೆ ಅನುಮಾನ ಬರುತ್ತದೆ. ಪುಣೆ ಸೈಬರ್ ಪೊಲೀಸ್ ಠಾಣೆಯಲ್ಲಿ ಮಹಿಳೆ ದೂರು ದಾಖಲಿಸಿದ್ದಾರೆ. ಪೊಲೀಸರು ದುಷ್ಕರ್ಮಿಗಳ ಬ್ಯಾಂಕ್ ಅಕೌಂಟ್ ಮತ್ತು ಫೋನ್ ನಂಬರ್​​ಗಳನ್ನು ಟ್ರೇಸ್ ಮಾಡಲು ಪ್ರಯತ್ನಿಸುತ್ತಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *