ಮೂರು ಬ್ಯಾಂಕ್‌ಗಳ ಮೇಲೆ ನಿರ್ಬಂಧ, ಗ್ರಾಹಕರಿಗೆ ತಾತ್ಕಾಲಿಕ ಸಮಸ್ಯೆ

ಆರ್‌ಬಿಐ ಮೂರು ಬ್ಯಾಂಕ್‌ಗಳಿಗೆ ಸಾಲ, ಠೇವಣಿ ಮತ್ತು ಇತರ ಬ್ಯಾಂಕಿಂಗ್ ವ್ಯವಹಾರಗಳನ್ನು ಮಾಡದಂತೆ ನಿರ್ಬಂಧ ಹೇರಿದೆ. ಈ ಕ್ರಮ ಗ್ರಾಹಕರ ಮೇಲೂ ಪರಿಣಾಮ ಬೀರುತ್ತದೆ. ಈ ಬ್ಯಾಂಕ್‌ಗಳಲ್ಲಿ ನಿಮಗೆ ಖಾತೆ ಇದೆಯೇ ಎಂದು ತಿಳಿದುಕೊಳ್ಳೋಣ.

ಆರ್‌ಬಿಐ ಮೂರು ಬ್ಯಾಂಕ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಂಡಿದೆ.
1949ರ ಬ್ಯಾಂಕಿಂಗ್ ನಿಯಂತ್ರಣ ಕಾಯ್ದೆಯ ಸೆಕ್ಷನ್ 35ಎ ಮತ್ತು 56ರ ಅಡಿಯಲ್ಲಿ ನಿರ್ಬಂಧಗಳನ್ನು ವಿಧಿಸಲಾಗಿದೆ. ಜುಲೈ ೪ರಿಂದ ಮೂರು ಬ್ಯಾಂಕ್‌ಗಳು ತಮ್ಮ ವ್ಯವಹಾರವನ್ನು ಸ್ಥಗಿತಗೊಳಿಸುವಂತೆ ಸೂಚಿಸಲಾಗಿದೆ. ಈ ಸಮಯದಲ್ಲಿ, ಗ್ರಾಹಕರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ.

ಈ ಮೂರು ಬ್ಯಾಂಕ್‌ಗಳು ಆರ್‌ಬಿಐನ ಪೂರ್ವಾನುಮತಿಯಿಲ್ಲದೆ ಯಾವುದೇ ಸಾಲ ಅಥವಾ ಮುಂಗಡವನ್ನು ಮಂಜೂರು ಮಾಡಲು ಅಥವಾ ನವೀಕರಿಸಲು ಸಾಧ್ಯವಿಲ್ಲ. ಹೊಸ ಠೇವಣಿಗಳನ್ನು ಸ್ವೀಕರಿಸುವುದು ಸೇರಿದಂತೆ ಯಾವುದೇ ಹೂಡಿಕೆ, ಸಾಲ ಪಡೆಯುವುದು ಮತ್ತು ಇತರ ವಹಿವಾಟುಗಳಿಂದ ಅವುಗಳನ್ನು ನಿರ್ಬಂಧಿಸಲಾಗಿದೆ.
ಡೆಲ್ಲಿ ಇನ್ನೋವೇಟಿವ್ ಕೋ-ಆಪರೇಟಿವ್ ಅರ್ಬನ್ ಬ್ಯಾಂಕ್ ಲಿಮಿಟೆಡ್ ಮತ್ತು ಗುವಾಹಟಿ ದಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಬ್ಯಾಂಕ್ ಲಿಮಿಟೆಡ್‌ನ ಗ್ರಾಹಕರು 35000 ರೂ. ವರೆಗೆ ಹಣವನ್ನು ಹಿಂಪಡೆಯಬಹುದು. ಆದರೆ, ಭವಾನಿ ಸಹಕಾರಿ ಬ್ಯಾಂಕ್ ಲಿಮಿಟೆಡ್ ಮುಂಬೈನ ಗ್ರಾಹಕರಿಗೆ ಈ ಸೌಲಭ್ಯವಿರುವುದಿಲ್ಲ.
ಬ್ಯಾಂಕಿನ ಕಾರ್ಯವನ್ನು ಸುಧಾರಿಸಲು ಆರ್‌ಬಿಐ ಇತ್ತೀಚೆಗೆ ಮಂಡಳಿ ಮತ್ತು ಹಿರಿಯ ಆಡಳಿತದೊಂದಿಗೆ ಮಾತುಕತೆ ನಡೆಸಿತ್ತು. ಬ್ಯಾಂಕ್ ತನ್ನ ಠೇವಣಿದಾರರ ಹಿತಾಸಕ್ತಿಗಳನ್ನು ರಕ್ಷಿಸಲು ದೃಢವಾದ ಪ್ರಯತ್ನಗಳನ್ನು ಮಾಡದ ಕಾರಣ ಈ ಕ್ರಮ ಕೈಗೊಳ್ಳಲಾಗಿದೆ.
