ವೆಜ್ ಬದಲಿಗೆ ಚಿಕನ್ ಬಿರಿಯಾನಿ ಡೆಲಿವರಿ-ರೆಸ್ಟೋರೆಂಟ್ ಮಾಲೀಕನ ಬಂಧನ

ನೊಯಿಡಾ :ಗ್ರೇಟರ್ ನೊಯಿಡಾದ ಚಾಯಾ ಶರ್ಮಾ ನವರಾತ್ರಿ ದಿನ ಸ್ವಿಗಿ ಆ್ಯಪ್‌ನಲ್ಲಿ ವೆಜ್ ಬಿರಿಯಾನಿ ಆರ್ಡರ್ ಮಾಡಿದ್ದರು. ಆದರೆ ಆಹಾರ ತಲುಪಿದ ಬಳಿಕ ಅದು ಚಿಕನ್ ಬಿರಿಯಾನಿ ಎಂದು ಪತ್ತೆಯಾದ ಘಟನೆ ತೀವ್ರ ಹತಾಶೆ ತರಿಸಿತು. ನವರಾತ್ರಿ ವೇಳೆ ಮಾಂಸಾಹಾರದಿಂದ ದೂರವಿರುವ ಜನರ ಭಾವನೆಗಳಿಗೆ ಇದು ಅಪಮಾನವಾಗಿದೆ ಎಂದು ಆಕೆ ಆರೋಪಿಸಿದ್ದಾರೆ.

ಇದಕ್ಕೆ ಸಂಬಂಧಿಸಿದಂತೆ ಚಾಯಾ ಶರ್ಮಾ ಪೊಲೀಸರಿಗೆ ದೂರು ನೀಡಿದ್ದು, ತನಿಖೆ ನಡೆಸಿದ ನೊಯಿಡಾ ಪೊಲೀಸರು ಲಕ್ನೋವಿ ಕಬಾಬ್ ಪರೋಟಾ ರೆಸ್ಟೋರೆಂಟ್ ಮಾಲಿಕ ರಾಹುಲ್ ರಾಜವಂಶಿ ಅವರನ್ನು ಬಂಧಿಸಿದ್ದಾರೆ. ಅವರೇ ತಪ್ಪಾಗಿ ಚಿಕನ್ ಬಿರಿಯಾನಿ ಪ್ಯಾಕ್ ಮಾಡಿ ಕಳುಹಿಸಿದ್ದಾರಂತೆ.
