ಕೆಆರ್ಎಸ್ ಡ್ಯಾಂ ಮೇಲೆ ರೀಲ್ಸ್: ಕಾಂಗ್ರೆಸ್ ಶಾಸಕರ ಬೆಂಬಲಿಗನ ಅವಿವೇಕ ಮನರಂಜನೆ

ಮಂಡ್ಯ: ಕೆಆರ್ಎಸ್ ಡ್ಯಾಂ ಮೇಲೆ ಕಾಂಗ್ರೆಸ್ ಶಾಸಕ ರಮೇಶ್ ಬಂಡಿಸಿದ್ದೇಗೌಡ ಬೆಂಬಲಿಗ ಹಾಗೂ ಕಾಂಗ್ರೆಸ್ ಕಾರ್ಯಕರ್ತ ರೀಲ್ಸ್ ಮಾಡಿದ್ದಾನೆ.

ಕೆಆರ್ಎಸ್ ಡ್ಯಾಂ ಮೇಲ್ಭಾಗದಲ್ಲಿ ನಿರ್ಬಂಧವಿದ್ರೂ ಲೆಕ್ಕಿಸದೆ ಡ್ಯಾಂ ಮೇಲೆ ರೀಲ್ಸ್ ಮಾಡಲಾಗಿದೆ. ಸಾರ್ವಜನಿಕರಿಗೆ ನಿರ್ಬಂಧವಿರುವ ಪ್ರದೇಶದಲ್ಲಿ ಕಾಂಗ್ರೆಸ್ ಶಾಸಕನ ಬೆಂಲಿಗರಿಗೆ ನಿರ್ಬಂಧ ಇಲ್ವಾ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ವ್ಯಕ್ತವಾಗಿದೆ.

ಶಾಸಕ ರಮೇಶ್ ಬಂಡಿಸಿದ್ದೇಗೌಡ ಬೆಂಬಲಿಗ ಮಧು ಎಂಬಾತ ಡ್ಯಾಂ ಮೇಲೆ ರೀಲ್ಸ್ ಮಾಡಿದ್ದಾನೆ. ಭದ್ರತಾ ಸಿಬ್ಬಂದಿ ಈ ಧೋರಣೆಯಿಂದ ಸಾಕಷ್ಟು ಅನುಮಾನಗಳು ವ್ಯಕ್ತವಾಗುತ್ತಿವೆ.

ಇತ್ತೀಚಿಗೆ ಕೆಆರ್ಎಸ್ ಗೇಟ್ ಬಳಿ ತೆರಳಿ ಯುವಕರು ಹುಚ್ಚಾಟವಾಡಿದ್ದರು. ಆ ಘಟನೆ ಮಾಸುವ ಮುನ್ನವೇ ಮತ್ತೊಂದು ಯಡವಟ್ಟು ಬಯಲಯಾಗಿದೆ.
