ರೀಲ್ಸ್ ಹುಚ್ಚು ಬಲಿ: ಟ್ರ್ಯಾಕ್ಟರ್ ಓಡಿಸುತ್ತಿದ್ದ ಯುವಕ ಸಾವು

ಹಾಸನ : ರೀಲ್ಸ್ ಗಾಗಿ 19 ವರ್ಷ ವಯಸ್ಸಿನ ಯುವಕನೊಬ್ಬ ತನ್ನ ಜೀವವನ್ನೆ ಕಳೆದುಕೊಂಡ ಘಟನೆ ಹಾಸನ ಜಿಲ್ಲೆಯಲ್ಲಿ ನಡೆದಿದೆ.

ಮೃತ ಯುವಕನನ್ನು ವಿ.ಜಿ.ಕೊಪ್ಪಲು ಗ್ರಾಮದ ಕಿರಣ್ (19) ಎಂದು ಗುರುತಿಸಲಾಗಿದೆ. ಕಿರಣ್ ರೀಲ್ಸ್ ಮಾಡುವುದಕ್ಕೆಂದು ಕಡಿದಾದ ಇಳಿಜಾರಿನ ತಿರುವಿನಲ್ಲಿ ವೇಗವಾಗಿ ಟ್ರ್ಯಾಕ್ಟರ್ ಚಲಾಯಿಸಿದ್ದಾನೆ. ಈ ವೇಳೆ ನಿಯಂತ್ರಣ ತಪ್ಪಿದ ಟ್ರ್ಯಾಕ್ಟರ್ ಪಲ್ಟಿಯಾಗಿದೆ. ಈ ವೇಳೆ ಕಿರಣ್ ಅದರಡಿ ಸಿಲುಕಿ ಮೃತಪಟ್ಟಿದ್ದಾನೆ. ಹಾಸನ ಜಿಲ್ಲೆಯ ಅರಕಲಗೂಡು ತಾಲ್ಲೂಕಿನ ಕಬ್ಬಳ್ಳಿಗೆರೆ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಸದ್ಯ, ಟ್ರ್ಯಾಕ್ಟರ್ ಪಲ್ಟಿಯ ವಿಡಿಯೋ ವೈರಲ್ ಆಗುತ್ತಿದೆ.