ಶಿಲ್ಪಾ ಶೆಟ್ಟಿ ಬಾಂದ್ರಾ ರೆಸ್ಟೋರೆಂಟ್ ಮುಚ್ಚುವ ನಿಜವಾದ ಕಾರಣ ಬಹಿರಂಗ

ಬಾಲಿವುಡ್‌ನ ಖ್ಯಾತ ನಟಿ ಶಿಲ್ಪಾ ಶೆಟ್ಟಿ ಆರ್ಥಿಕ ಸಮಸ್ಯೆಯಿಂದಾಗಿ ಬಾಂದ್ರಾದಲ್ಲಿರುವ ತಮ್ಮ ರೆಸ್ಟೋರೆಂಟ್ ಅನ್ನು ಮುಚ್ಚಲಿದ್ದಾರೆ ಎಂಬ ಮಾಹಿತಿ ಹೊರಬಿದ್ದಿತ್ತು. ಆದರೆ ಇದರ ಹಿಂದಿನ ನಿಜವಾದ ಸತ್ಯವೇನು? ಶಿಲ್ಪಾ ಈ ಬಗ್ಗೆ ಮೌನ ಮುರಿದಿದ್ದಾರೆ. ಶಿಲ್ಪಾ ರೆಸ್ಟೋರೆಂಟ್ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ್ದಾರೆ. ನಟಿ ಪ್ರಸ್ತುತ ರೆಸ್ಟೋರೆಂಟ್ ಅನ್ನು ಮುಚ್ಚುವುದರ ಹಿಂದಿನ ಕಾರಣ ಹೇಳಿದ್ದಾರೆ. ಅದನ್ನು ನಡೆಸುವಲ್ಲಿ ಯಾವುದೇ ಆರ್ಥಿಕ ಸಮಸ್ಯೆ ಇಲ್ಲ ಎಂದು ಹೇಳಿದ್ದಾರೆ.

‘ಹಳೆಯ ರೆಸ್ಟೋರೆಂಟ್ ಮುಚ್ಚಿದ ಜಾಗದಲ್ಲೇ, ಶೀಘ್ರದಲ್ಲೇ ಹೊಸ ದಕ್ಷಿಣ ಭಾರತೀಯ ರೆಸ್ಟೋರೆಂಟ್ ತೆರೆಯಲಾಗುವುದು. ಮತ್ತೊಂದೆಡೆ, ಜುಹುದಲ್ಲಿ ‘ಬಾಸ್ಟಿಯನ್’ ಹೆಸರಿನ ಮತ್ತೊಂದು ರೆಸ್ಟೋರೆಂಟ್ ತೆರೆಯಲಾಗುವುದು ಎಂದು ಶಿಲ್ಪಾ ತಿಳಿಸಿದ್ದಾರೆ.
‘ನೀವು ಕಷ್ಟಪಟ್ಟು ಕೆಲಸ ಮಾಡಿ ಖ್ಯಾತಿಯನ್ನು ಗಳಿಸಿದಾಗ, ಕೆಲವು ವದಂತಿಗಳು ನಿಮ್ಮ ಜೊತೆ ತಳುಕು ಹಾಕಿಕೊಳ್ಳುತ್ತವೆ. ನಮ್ಮ ನಿಜವಾದ ಆರಂಭವು ಬಾಂದ್ರಾದಿಂದ. ಈ ಅಧ್ಯಾಯವು ಮುಕ್ತಾಯಗೊಳ್ಳುತ್ತದೆ, ಇನ್ನೂ ಎರಡು ಅಧ್ಯಾಯಗಳು ಪ್ರಾರಂಭವಾಗಲಿವೆ. ಅವು ನಿಮಗಾಗಿ ಕಾಯುತ್ತಿವೆ. ನಮ್ಮ ಬ್ರ್ಯಾಂಡ್ ಹೊಸ ಪ್ರಯಾಣವನ್ನು ಪ್ರಾರಂಭಿಸಲಿದೆ… ಶೀಘ್ರದಲ್ಲೇ ಅದರ ಬಗ್ಗೆ ನಿಮಗೆ ತಿಳಿಸಲಾಗುವುದು’ ಎಂದು ಹೇಳಿಕೆಯಲ್ಲಿ ತಿಳಿಸಲಾಗಿದೆ.
ಬಾಸ್ಟಿಯನ್ ಬಾಂದ್ರಾ ಔಟ್ಲೆಟ್ ಅನ್ನು ಈಗ ‘ಅಮ್ಮಕೈ’ ಎಂಬ ದಕ್ಷಿಣ ಭಾರತೀಯ ರೆಸ್ಟೋರೆಂಟ್ ಆಗಿ ಪರಿವರ್ತಿಸಲಾಗುತ್ತಿದೆ ಎಂದು ಶಿಲ್ಪಾ ಶೆಟ್ಟಿ ಹೇಳಿದರು. ಬ್ರ್ಯಾಂಡ್ ಜುಹುಗೆ ಸ್ಥಳಾಂತರಗೊಳ್ಳುತ್ತಿದ್ದು, ಬಾಸ್ಟಿಯನ್ ಬೀಚ್ ಕ್ಲಬ್ ಮತ್ತೆ ತೆರೆಯಲಿದೆ ಎಂದು ನಟಿ ಹೇಳಿದರು.
ಶಿಲ್ಪಾ ಕಳೆದ ಕೆಲವು ದಿನಗಳಿಂದ ವಿವಾದದಲ್ಲಿ ಸಿಲುಕಿದ್ದಾರೆ. ನಟಿ ಮೋಸ ಮಾಡಿದಂತಹ ಗಂಭೀರ ಆರೋಪಗಳನ್ನು ಹಲವರು ಮಾಡಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ನಟಿ ಬಡವರಾಗಿದ್ದಾರೆ. ಇದು ಅಭಿಮಾನಿಗಳಲ್ಲಿ ಚರ್ಚೆಗೂ ಆರಂಭವಾಗಿದೆ. ಆದರೆ ಅಂತಹದ್ದೇನೂ ಇಲ್ಲ, ಶಿಲ್ಪಾ ಶೀಘ್ರದಲ್ಲೇ ಎರಡು ರೆಸ್ಟೋರೆಂಟ್‌ಗಳನ್ನು ಪ್ರಾರಂಭಿಸಲಿದ್ದಾರೆ. ನಟಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇದಲ್ಲದೆ, ಅನೇಕ ಜನರು ನಟಿಗೆ ಕರೆ ಮಾಡಿ ಕೇಳುತ್ತಿದ್ದಾರೆ. ಶಿಲ್ಪಾಗೆ ಲುಕ್ಔಟ್ ನೋಟಿಸ್ ಕೂಡ ನೀಡಲಾಗಿದೆ. 60 ಕೋಟಿ ವಂಚನೆ ಪ್ರಕರಣದಲ್ಲಿ ಇವರು ಸಂಕಷ್ಟ ಎದುರಿಸಿದ್ದಾರೆ.
