‘ದೇವ್ವ ಪಾಠ’ ಕಲಿಯೋಕೆ ಸಿದ್ಧನಾ? ಭೂತ, ಆತ್ಮ, ಜಾದೂ ಕುರಿತು ಕೋರ್ಸ್ ಕಲಿಸುತ್ತಿರುವ ವಿಶ್ವವಿದ್ಯಾನಿಲಯಗಳ ಪರಿಚಯ!

ನಿಮ್ಮ ಮನೆಯಲ್ಲಿ ಆತ್ಮ ಇದೆ, ಆ ಜಾಗ ಸರಿಯಾಗಿಲ್ಲ, ಭೂತಗಳ ಕಾಟ ಹೆಚ್ಚು ಅಂತ ಕೆಲವರು ಜಾಗ, ಪರಿಸರ ನೋಡಿ ಹೇಳ್ತಿರ್ತಾರೆ. ಭೂತ ಬಿಡಿಸುವ ಕೆಲ್ಸ ಮಾಡ್ತಾರೆ. ಅದು ಹೇಗೆ ಸಾಧ್ಯ? ನಮ್ಮ ಕಣ್ಣಿಗೆ ಎಂದೂ ಈ ಭೂತ – ಪಿಶಾಚಿ ಕಂಡೇ ಇಲ್ವಲ್ಲ, ಜಾಗ ನೋಡಿ ಅದನ್ನು ಪತ್ತೆ ಮಾಡೋದು ಹೇಗೆ, ಅದ್ರ ಜೊತೆ ಮಾತನಾಡೋದು ಹೇಗೆ?.

ಭೂತಗಳ ಸಿನಿಮಾ ನನ್ನ ಫೆವರೆಟ್, ಅಲೌಕಿಕ ಜಗತ್ತಿನ ಬಗ್ಗೆ ತಿಳಿದುಕೊಳ್ಳೋಕೆ ಆಸಕ್ತಿ ಇದೆ, ಭೂತಗಳಿರುವ ಜಾಗಕ್ಕೆ ಹೋಗ್ಬೇಕು, ನಿಜವಾಗ್ಲೂ ಆತ್ಮ, ಭೂತಗಳಿದ್ಯಾ ತಿಳಿದುಕೊಳ್ಬೇಕು ಎನ್ನುವವರಿಗೆ ಸಾಕಷ್ಟು ಅವಕಾಶವಿದೆ. ಅಲೌಕಿಕ ಜಗತ್ತಿನ ಬಗ್ಗೆ ಸಂಪೂರ್ಣ ಮಾಹಿತಿ ತಿಳಿಯುವ ಅವಕಾಶ ನಿಮಗಿದೆ. ವಿಶ್ಚದ ಕೆಲ ಪ್ರಸಿದ್ಧ ವಿಶ್ವವಿದ್ಯಾನಿಲಯಗಳಲ್ಲಿ ಭೂತದ ಬಗ್ಗೆ ಸ್ಪೇಷಲ್ ಕೋರ್ಸ್ ಗಳಿವೆ. ನಾವಿಂದು ಯಾವ ವಿವಿಯಲ್ಲಿ ಪ್ಯಾರಾನಾರ್ಮಲ್ ಸೈನ್, ಪ್ಯಾರಾಸೈಕಾಲಜಿ, ಜಾದು, ಮಂತ್ರಗಳ ಬಗ್ಗೆ ಕಲಿಸ್ತಾರೆ ಅನ್ನೋದ್ರ ಮಾಹಿತಿ ನೀಡ್ತೇವೆ.
ಥಾಮಸ್ ಫ್ರಾನ್ಸಿಸ್ ವಿಶ್ವವಿದ್ಯಾಲಯ : ಪ್ಯಾರನಾರ್ಮಲ್ ವಿಜ್ಞಾನ ಅಥವಾ ಪ್ಯಾರಸೈಕಾಲಜಿಯಂತಹ ಕೋರ್ಸ್ಗಳನ್ನು ಬ್ರಿಟನ್ನ ಥಾಮಸ್ ಫ್ರಾನ್ಸಿಸ್ ವಿಶ್ವವಿದ್ಯಾಲಯದಲ್ಲಿ ಕಲಿಸಲಾಗುತ್ತದೆ. ಈ ವಿಶ್ವವಿದ್ಯಾಲಯವು ಮೆಟಾಫಿಸಿಕ್ಸ್ ಶಾಲೆಯಾಗಿದ್ದು, ಅಲ್ಲಿ ಆಧ್ಯಾತ್ಮಿಕ ಆಧಾರಿತ ಪದವಿ, ಸ್ನಾತಕೋತ್ತರ ಮತ್ತು ಪಿಎಚ್ಡಿ ಮೆಟಾಫಿಸಿಕಲ್ ವಿಜ್ಞಾನ ಪದವಿ ಲಭ್ಯವಿದೆ. ದೆವ್ವ ಹಿಡಿಯೋದನ್ನೇ ನೀವು ವೃತ್ತಿ ಮಾಡಿಕೊಳ್ತೀರಿ ಎಂದಾದ್ರೆ ಈ ಕೋರ್ಸ್ಗಳನ್ನು ಅಧ್ಯಯನ ಮಾಡಬಹುದು. ಅಲೌಕಿಕ ಚಟುವಟಿಕೆಯ ಕುರಿತು ಪುಸ್ತಕ ಬರೀಬೇಕು, ಉಪನ್ಯಾಸ ನೀಡ ಬಯಸುವ ಜನರು ಕೂಡ ಈ ಕೋರ್ಸ್ ಮಾಡ್ಬಹುದು.
ಎಡಿನ್ಬರ್ಗ್ ವಿಶ್ವವಿದ್ಯಾಲಯ : ಪ್ಯಾರಸೈಕಾಲಜಿಯನ್ನು ಬ್ರಿಟನ್ನ ಎಡಿನ್ಬರ್ಗ್ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಬಹುದು. ಮನೋವಿಜ್ಞಾನದ ಪಿಎಚ್ಡಿ ವಿದ್ಯಾರ್ಥಿಗಳಿಗೆ ಪ್ಯಾರಸೈಕಾಲಜಿ ಸ್ಟಡಿ ಮಾಡುವ ಆಯ್ಕೆ ನೀಡಲಾಗುತ್ತದೆ. ಅಧಿಸಾಮಾನ್ಯ ಚಟುವಟಿಕೆಯ ಬಗ್ಗೆ ನಂಬಿಕೆ ಇರುವವರು ಇದ್ರ ಅಧ್ಯಯನ ಮಾಡ್ಬಹುದು.
ಓಸ್ಲೋ ವಿಶ್ವವಿದ್ಯಾಲಯ : ನಾರ್ವೆಯ ರಾಜಧಾನಿಯಲ್ಲಿರುವ ಓಸ್ಲೋ ವಿಶ್ವವಿದ್ಯಾಲಯದಲ್ಲಿ ಅನೇಕ ಕೋರ್ಸ್ಗಳನ್ನು ಇಂಗ್ಲಿಷ್ನಲ್ಲಿ ಕಲಿಸಲಾಗುತ್ತದೆ. ಈ ಕೋರ್ಸ್ಗಳಲ್ಲಿ ಒಂದು ವಿಚ್ಕ್ರಾಫ್ಟ್ ಮತ್ತು ಮ್ಯಾಜಿಕ್ ಮಾಡ್ಯೂಲ್. ಈ ಕೋರ್ಸ್ ವಿದ್ಯಾರ್ಥಿಗಳಿಗೆ ಮ್ಯಾಜಿಕ್ನ ಸಾಂಸ್ಕೃತಿಕ ಇತಿಹಾಸವನ್ನು ಅಧ್ಯಯನ ಮಾಡಲು ಸಹಾಯ ಮಾಡುತ್ತದೆ.
ಮ್ಯಾಸಚೂಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯ : ಯುಎಸ್ನಲ್ಲಿರುವ ಮ್ಯಾಸಚೂಸೆಟ್ಸ್ ಅಮ್ಹೆರ್ಸ್ಟ್ ವಿಶ್ವವಿದ್ಯಾಲಯವು ದಿ ಪ್ಯಾರನಾರ್ಮಲ್: ವೇಸ್ ಆಫ್ ಥಿಂಕಿಂಗ್ ಎಬೌಟ್ ದಿ ಅಜ್ಞಾತ ಎಂಬ ಮೂರು ಆನ್ಲೈನ್ ಕೋರ್ಸ್ ಕಲಿಸಲಾಗುತ್ತದೆ. ಈ ಕೋರ್ಸ್ ನಂಬಿಕೆ ಮತ್ತು ವಿಜ್ಞಾನದ ನಡುವಿನ ಅಂತರದ ಬಗ್ಗೆ ತಿಳಿಸುತ್ತದೆ. ಈ ಕೋರ್ಸ್ ಅನ್ನು ಬರಹಗಾರರಾದ ಸ್ಟೀಫನ್ ಪೆಟ್ರುಚಾ ಕಲಿಸುತ್ತಾರೆ. ಅವರು ಯುವಕರಿಗಾಗಿ ಕಾಮಿಕ್ಸ್ ಮತ್ತು ರೋಮಾಂಚಕ ಕಥೆಗಳನ್ನು ಬರೆಯುತ್ತಾರೆ. ತರ್ಕ ಮತ್ತು ಸಂಶೋಧನೆಯ ದೃಷ್ಟಿಕೋನದಿಂದ ಅಧಿಸಾಮಾನ್ಯ ಚಟುವಟಿಕೆಯನ್ನು ಅರ್ಥಮಾಡಿಕೊಳ್ಳಲು ಬಯಸುವವರಿಗೆ ಈ ಕೋರ್ಸ್ ಬೆಸ್ಟ್.
ಒಟ್ಟಾವಾ ವಿಶ್ವವಿದ್ಯಾಲಯ : ಕೆನಡಾದ ಒಟ್ಟಾವಾ ವಿಶ್ವವಿದ್ಯಾಲಯದ ವಿದ್ಯಾರ್ಥಿಗಳು ಮಾಟ, ಮ್ಯಾಜಿಕ್ ಮತ್ತು ಅತೀಂದ್ರಿಯ ಸಂಪ್ರದಾಯಗಳನ್ನು ಕಲಿಯಬಹುದು. ಮಾಡ್ಯೂಲ್ ಅಧಿಸಾಮಾನ್ಯ ವಿದ್ಯಮಾನಗಳಲ್ಲಿನ ನಂಬಿಕೆಯ ಆಧಾರದ ಮೇಲೆ ಸಂಪ್ರದಾಯಗಳು ಮತ್ತು ಆಚರಣೆಗಳ ಐತಿಹಾಸಿಕ, ಮಾನಸಿಕ ಮತ್ತು ಸಾಂಸ್ಕೃತಿಕ ಪರಿಶೋಧನೆಯನ್ನು ಒಳಗೊಂಡಿದೆ. ಇದು ಧಾರ್ಮಿಕ ಆಚರಣೆಯ ಸಾಂಪ್ರದಾಯಿಕ ಕಲ್ಪನೆಗಳಿಗೆ ಸಂಬಂಧಿಸಿದಂತೆ ವಾಮಾಚಾರ, ಮ್ಯಾಜಿಕ್, ಅತೀಂದ್ರಿಯ ಮತ್ತು ಸಂಬಂಧಿತ ಅನುಭವಗಳನ್ನು ಒಳಗೊಂಡಿದೆ.
