Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಆರ್‌ಸಿಬಿ ಭವಿಷ್ಯ ಅಸ್ಪಷ್ಟ? ಮದ್ಯ ಜಾಹೀರಾತು ನಿಷೇಧ ಮುಂದಿಟ್ಟ ಸರ್ಕಾರ, ಮಾರಾಟದ ಸಾಧ್ಯತೆ

Spread the love

ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಕಠಿಣ ನಿಯಮವೊಂದು ಜಾರಿಯಾಗುವ ಸಾಧ್ಯತೆಯಿದೆ. ಈ ನಿಯಮ ಜಾರಿಯಾದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸಂಕಷ್ಟ ಎದುರಾಗುವುದು ಖಚಿತ. ಅದಕ್ಕೂ ಮುನ್ನವೇ ಆರ್​ಸಿಬಿ ಫ್ರಾಂಚೈಸಿಯನ್ನು ಮಾರಾಟ ಮಾಡಲು ಡಿಯಾಜಿಯೋ ಕಂಪೆನಿ ಸಮಾಲೋಚಿಸಿದೆ ಎಂದು ವರದಿಯಾಗಿದೆ.

ಅಷ್ಟಕ್ಕೂ ಐಪಿಎಲ್​ನಲ್ಲಿ ಜಾರಿಯಾಗಲಿರುವ ಹೊಸ ನಿಯಮವೆಂದರೆ… ತಂಬಾಕು ಮತ್ತು ಆಲ್ಕೋಹಾಲ್ ಬ್ರ್ಯಾಂಡ್​​ಗಳ ಜಾಹೀರಾತು ನಿಷೇಧ. ಅಂದರೆ ಟೂರ್ನಿಯಲ್ಲಿ ತಂಬಾಕು ಮತ್ತು ಮದ್ಯ ಜಾಹೀರಾತಿನ ಪ್ರಚಾರ ನಿಷೇಧಿಸಲು ಆರೋಗ್ಯ ಸಚಿವಾಲಯ ಚಿಂತಿಸುತ್ತಿದೆ. ಈ ನಿಯಮ ಜಾರಿಯಾದರೆ ಆರ್​ಸಿಬಿ ತಂಡಕ್ಕೆ ಸಮಸ್ಯೆ ಎದುರಾಗಲಿದೆ.

ಏಕೆಂದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ಡಿಯಾಜಿಯೋ ಕಂಪೆನಿಯ ಒಡೆತನದಲ್ಲಿದೆ. ಬ್ರಿಟನ್ ಮೂಲದ ಡಿಯಾಜಿಯೋ ತನ್ನ ಭಾರತೀಯ ಘಟಕವಾದ ಯುನೈಟೆಡ್ ಸ್ಪಿರಿಟ್ಸ್ ಲಿಮಿಟೆಡ್ ಎಂಬ ಆಲ್ಕೋಹಾಲ್ ಕಂಪನಿಯ ಮೂಲಕ ಆರ್​ಸಿಬಿ ಫ್ರಾಂಚೈಸಿಯನ್ನು ಹೊಂದಿದೆ. ಇತ್ತ ಐಪಿಎಲ್​ನಲ್ಲಿ ಅನಾರೋಗ್ಯಕರ ವಸ್ತುಗಳನ್ನು ನೇರವಾಗಿ ಅಥವಾ ಪರೋಕ್ಷವಾಗಿ ಪ್ರಚಾರ ಮಾಡದಂತಹ ನಿಯಮವನ್ನು ಜಾರಿಗೆ ತರುವ ಬಗ್ಗೆ ಚಿಂತಿಸಲಾಗಿದೆ.

ಈ ನಿಯಮ ಜಾರಿಯಾದರೆ, ಆರ್​ಸಿಬಿ ಫ್ರಾಂಚೈಸಿಯು ಐಪಿಎಲ್​ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಏಕೆಂದರೆ ಆರ್​ಸಿಬಿ ಫ್ರಾಂಚೈಸಿಯ ಮಾಲೀಕತ್ವ ಹೊಂದಿರುವುದು ಆಲ್ಕೋಹಾಲ್ ಕಂಪೆನಿಯ ಒಡೆತನದಲ್ಲಿ. ಇದೇ ಕಾರಣದಿಂದಾಗಿ ಇದೀಗ ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯು ತನ್ನ ಷೇರು ಮಾರಾಟ ಮಾಡಲು ಅಥವಾ ಸಂಪೂರ್ಣ ಫ್ರಾಂಚೈಸಿಯನ್ನು ಸೇಲ್ ಮಾಡಲು ಚರ್ಚಿಸಿದೆ ಎಂದು ವರದಿಯಾಗಿದೆ.

ಪ್ರಸ್ತುತ ವರದಿ ಪ್ರಕಾರ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿಯ ಮೌಲ್ಯ ಸುಮಾರು 2 ಬಿಲಿಯನ್ ಡಾಲರ್. ಅಂದರೆ ಭಾರತೀಯ ರೂಪಾಯಿ ಮೌಲ್ಯ ಬರೋಬ್ಬರಿ 17 ಸಾವಿರ ಕೋಟಿ ರೂ. ಈ ಮೊತ್ತಕ್ಕೆ ಆರ್​ಸಿಬಿ ತಂಡವನ್ನು ಖರೀದಿಸಲು ಯಾರಾದರೂ ಮುಂದಾದರೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ರಾಂಚೈಸಿ ಹೊಸ ಮಾಲೀಕರ ಪಾಲಾಗುವ ಸಾಧ್ಯತೆಯನ್ನು ತಳ್ಳಿಹಾಕುವಂತಿಲ್ಲ.


Spread the love
Share:

administrator

Leave a Reply

Your email address will not be published. Required fields are marked *