ನಕಲಿ ನೋಟುಗಳ ನಿಯಂತ್ರಣಕ್ಕೆ ಆರ್‌ಬಿಐ ಹೆಜ್ಜೆ: ಎಟಿಎಂಗಳಲ್ಲಿ ಸಣ್ಣ ನೋಟುಗಳ ಲಭ್ಯತೆಗೆ ಒತ್ತು, ಶುಲ್ಕ ಹೆಚ್ಚಳದ ಬಿಸಿ

ಆರ್‌ಬಿಐ ಸದಾ ಒಂದಿಲ್ಲೊಂದು ನಿಯಮ ಜಾರಿಗೆ ತರುತ್ತಲೇ ಇರುತ್ತದೆ. ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಹೊಸ ಹೊಸ ರೂಲ್ಸ್ ಬರುತ್ತವೆ. ಇತ್ತೀಚೆಗೆ ನಕಲಿ ನೋಟುಗಳ ಹಾವಳಿ ಹೆಚ್ಚಾಗಿರುವುದರಿಂದ ಆರ್‌ಬಿಐ (RBI) ಜನರಿಗೆ ಎಚ್ಚರಿಕೆಯನ್ನು ನೀಡಿದೆ. ಇದೀಗ ಕೇಂದ್ರ ಬ್ಯಾಂಕ್ ಮತ್ತೊಂದು ಸೂಚನೆಯನ್ನು ನೀಡಿದೆ.

ಎಟಿಎಂ ಇಂಟರ್‌ಚೇಂಜ್ ಶುಲ್ಕವನ್ನು ಪರಿಷ್ಕರಿಸಿದೆ. 100 ರೂಪಾಯಿ ಮತ್ತು 200 ರೂಪಾಯಿ ನೋಟು ಇದ್ದವರು ತಪ್ಪದೇ ಈ ಸುದ್ದಿ ಓದಲೇಬೇಕು. ಈ ಬಗ್ಗೆ ಇಲ್ಲಿದೆ ಮಾಹಿತಿ.
ಹೌದು,ಭಾರತದ ಅತಿದೊಡ್ಡ ನಗದು ನಿರ್ವಹಣಾ ಕಂಪನಿಯಾದ ಸಿಎಮ್‌ಎಸ್ ಇನ್ಫೋ ಸಿಸ್ಟಮ್ಸ್ ಪ್ರಕಾರ ದೇಶದಲ್ಲಿ ಸುಮಾರು 215,000 ಎಟಿಎಂಗಳಲ್ಲಿ ಪ್ರಸುತ್ತ 73,000 ಎಟಿಎಂಗಳು ಕಾರ್ಯನಿರ್ವಹಿಸುತ್ತಿವೆ. ಕಳೆದ ವರ್ಷದ ಡಿಸೆಂಬರ್ ನಲ್ಲಿ ಶೇ 65 ರಷ್ಟು ಎಟಿಎಂ ವಾಹಿವಾಟುಗಳ ಸಂಖ್ಯೆ ಏರಿಕೆಯನ್ನು ಕಂಡಿತ್ತು.
ಸಾರ್ವಜನಿಕರು ಪ್ರತಿನಿತ್ಯ ಬಳಕೆ ಮಾಡುವಂತಹ ವೆಚ್ಚದ ನಗದು ರೂಪ ಶೇಕಡಾ 60 ರಷ್ಟು ಇದೆ ಇದರಿಂದ 100 ಮತ್ತು 200 ನೋಟುಗಳ ಲಭ್ಯತೆಯು ದಿನನಿತ್ಯದ ವಹಿವಾಟಿನ ಅಗತ್ಯಗಳನ್ನು ನೇರವಾಗಿ ಪೂರೈಸುತ್ತದೆ ಎಂದು ಹೇಳಿದ್ದಾರೆ. ಇದು ವಿಶೇಷವಾಗಿ ಅರೆ ನಗರ ಮತ್ತು ಗ್ರಾಮೀಣ ಮಾರುಕಟ್ಟೆಗಳಲ್ಲಿ ಹೆಚ್ಚಾಗಿ ಇರುತ್ತದೆ ಎಂದು ಸಿಎಂಎಸ್ ಇನ್ಫೋ ಸಿಸ್ಟಮ್ಸ್‌ನ ನಗದು ನಿರ್ವಹಣೆಯ ಅಧ್ಯಕ್ಷ ಅನುಷ್ ರಾಘವನ್ ಹೇಳಿದ ವರದಿಯಲ್ಲಿ ಈ ಮಾಹಿತಿ ಬಹಿರಂಗಗೊಂಡಿದೆ.
ಆರ್‌ಬಿಐ ಮಾರ್ಗಸೂಚಿಗಳು
ಕಳದ ತಿಂಗಳು ಏಪ್ರಿಲ್ 2025ರಲ್ಲಿ ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಹೊರಡಿಸಲಾದ ಸುತ್ತೋಲೆ ಪ್ರಕಾರ ಎಲ್ಲಾ ಬ್ಯಾಂಕುಗಳಿಗೆ ಸೆಪ್ಟೆಂಬರ್ 30, 2025 ರೊಳಗೆ ಕನಿಷ್ಠ ಶೇ.75ರಷ್ಟು ಎಟಿಎಂಗಳು ಕನಿಷ್ಠ ಒಂದು ಕ್ಯಾಸೆಟ್‌ನಿಂದ 100 ಅಥವಾ 200 ನೋಟುಗಳನ್ನು ವಿತರಿಸುವುದನ್ನು ಖಚಿತ ಮಾಹಿತಿಯನ್ನು ಪಡೆದುಕೊಳ್ಳುವಂತೆ ಆದೇಶವನ್ನು ನೀಡಲಾಗಿತ್ತು.
ಪ್ರತಿನಿತ್ಯದ ವಹಿವಾಟುಗಳಲ್ಲಿ ಅತಿ ಹೆಚ್ಚಾಗಿ ಬಳಕೆಯಾಗುವ ಕಡಿಮೆ ಮೌಲ್ಯದ ನೋಟುಗಳ ನಕಲಿ ನೋಟುಗಳ ಪ್ರವೇಶವನ್ನು ಸುಧಾರಿಸುವುದು ಕೇಂದ್ರ ಬ್ಯಾಂಕಿನ ಗುರಿಯಾಗಿದೆ. ಮಾರ್ಚ್ 31, 2026ರ ವೇಳೆಗೆ ಈ ಆದೇಶವು ಮತ್ತಷ್ಟು ಬಿಗಿಭದ್ರತೆಗಳನ್ನು ಒಲಗೊಂಡಿತ್ತು.ಆಗ ಶೇಕಡಾ 90ರಷ್ಟು ಎಟಿಎಂಗಳು ಈ ಅಗತ್ಯವನ್ನು ಪೂರೈಸುವ ನಿರೀಕ್ಷೆಯನ್ನು ಒಳಗೊಂಡಿದೆ.
ATM ಇಂಟರ್‌ಚೇಂಜ್ ಶುಲ್ಕವನ್ನು ಪರಿಷ್ಕರಣೆ
ಭಾರತೀಯ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ (ಆರ್‌ಬಿಐ) ಎಟಿಎಂ ಇಂಟರ್‌ಚೇಂಜ್ ಶುಲ್ಕವನ್ನು ಮೇ 1 ರಿಂದ ಎಲ್ಲಾ ಬ್ಯಾಂಕ್‌ಗಳ ಎಟಿಎಂ ಇಂಟರ್‌ಚೇಂಜ್ ಶುಲ್ಕ ಹೆಚ್ಚಳ ಮಾಡಿದೆ. ಇದರಿಂದ ನಗದು ಹಣವನ್ನು ಪಡೆಯಲು ಸಾರ್ವಜನಿಕರು ಶುಲ್ಲದ ಬರೆ ಬಿದ್ದಿದೆ.
ಇಂಟರ್ಚೇಂಜ್ ಶುಲ್ಕ ಎಂದರೆ ಎಟಿಎಂ ವಹಿವಾಟುಗಳನ್ನು ಪ್ರಕ್ರಿಯೆಗೊಳಿಸಲು ಒಂದು ಬ್ಯಾಂಕ್ ಮತ್ತೊಂದು ಬ್ಯಾಂಕ್‌ಗೆ ಪಾವತಿಸುವ ಶುಲ್ಕ. ಈ ಶುಲ್ಕಗಳನ್ನು ಸಾಮಾನ್ಯವಾಗಿ ಗ್ರಾಹಕರೇ ಪಾವತಿಯನ್ನು ಮಾಡಬೇಕಾಗುತ್ತದೆ.
ಈ ಕುರಿತು ಉದಾಹರಣೆ ನೋಡುವುದ್ದರೆ ಎಚ್‌ಡಿಎಫ್‌ಸಿ ಬ್ಯಾಂಕ್ ತನ್ನ ಗ್ರಾಹಕರಿಗೆ ತಿಂಗಳಿಗೆ ಮೂರು ಉಚಿತ ವಹಿವಾಟುಗಳ ನಂತರ ಎಸ್‌ಬಿಐ ಎಟಿಎಂನಿಂದ ಹಣವನ್ನು ಹಿಂತೆಗೆದುಕೊಂಡರೆ, ಎಚ್‌ಡಿಎಫ್‌ಸಿ ಹೆಚ್ಚುವರಿ ಹಿಂಪಡೆಯುವಿಕೆಗೆ ಶುಲ್ಕವನ್ನು ಕಟ್ಟಬೇಕಾಗುತ್ತದೆ.
ಮೇ 1 ರಿಂದ ನವೀಕರಿಸಿದ ಶುಲ್ಕದ ವಿವರ
ನಗದು ಹಿಂಪಡೆಯುವಿಕೆಗಾಗಿ: ಪ್ರತಿ ವಹಿವಾಟಿಗೆ 19 ರೂ. (17 ರೂ. ರಿಂದ ಏರಿಕೆ)
ಹಣಕಾಸೇತರ ವಹಿವಾಟುಗಳಿಗೆ: ಪ್ರತಿ ವಹಿವಾಟಿಗೆ 7 ರೂ (ಈ ಹಿಂದೆ 6 ರೂಪಾಯಿ ಇದ್ದಿದ್ದು ಈಗ 7 ರೂ ಏರಿಕೆ)
RBI ಉಚಿತ ವಹಿವಾಟು ನೀತಿ
ಆರ್‌ಬಿಐ ನಿಯಮದ ಪ್ರಕಾರ ಎಟಿಎಂ ಇಂಟರ್‌ಚೇಂಜ್ ಶುಲ್ಕವನ್ನುಮುಂಬೈ, ದೆಹಲಿ, ಚೆನ್ನೈ, ಕೋಲ್ಕತ್ತಾ, ಬೆಂಗಳೂರು ಮತ್ತು ಹೈದರಾಬಾದ್‌ಗಳ ಮೆಟ್ರೋ ನಗರಗಳ ಗ್ರಾಹಕರಿಗೆ ಇತರ ಬ್ಯಾಂಕುಗಳ ಎಟಿಎಂಗಳಲ್ಲಿ ತಿಂಗಳಿಗೆ ಮೂರು ಉಚಿತ ವಹಿವಾಟುಗಳಿಗೆ ಯಾವುದೇ ಶೂಲ್ಲವಿರುವುದಿಲ್ಲ. ಮೆಟ್ರೋ ಅಲ್ಲದ ಪ್ರದೇಶಗಳಿಗೆ ಶುಲ್ಕ ಮಿತಿಯನ್ನು ಐದುಕ್ಕೆ ಇರಿಸಲಾಗಿದೆ. ಈದು ಮಿತಿಯನ್ನು ಮೀರಿದ್ದರೆ ಶುಲ್ಕವನ್ನು ಕಟ್ಟಬೇಕಾಗುತ್ತದೆ.
ತಾಂತ್ರಿಕ ದೋಷಗಳಿಂದಾಗಿ ನಗದು ಕೊರತೆಯಂತಹ ಯಾವುದೇ ವಹಿವಾಟು ವಿಫಲವಾದರೆ, ಉಚಿತ ಮಿತಿಯಲ್ಲಿ ಎಣಿಕೆಯಾಗುವುದಿಲ್ಲ ಮತ್ತು ಶುಲ್ಕಗಳನ್ನು ವಿಧಿಸುವಂತಿಲ್ಲ ಎಂದು ಆರ್‌ಬಿಐ ಹೇಳಿದೆ.
