ಮಂಗಳೂರಿನಲ್ಲಿ ರವಿ ಪೂಜಾರಿ ಸಹಚರ ಕರಾಡ್ ಗಣೇಶ್ ಸಕಟ್ ಬಂಧನ: 10 ವರ್ಷಗಳ ಬಳಿಕ ಸಿಕ್ಕಿಬಿದ್ದ ಭೂಗತ ಪಾತಕಿ!

ಮಂಗಳೂರು : ಬಿಜೈ ನಲ್ಲಿರುವ ಭಾರತಿ ಬಿಲ್ಡರ್ಸ್ ಕಛೇರಿ ಮೇಲೆ ಶೂಟೌಟ್ ನಡೆಸಿ ಸುಮಾರು 10 ವರ್ಷದಿಂದ ನಾಪತ್ತೆಯಾಗಿದ್ದ ಭೂಗತ ಪಾತಕಿ ರವಿ ಪೂಜಾರಿ ಸಹಚರ ನ್ನು ಉರ್ವಾ ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಬಂಧಿತನನ್ನು ಕರಾಡ್ ಗಣೇಶ್ ಲಕ್ಷ್ಮಣ್ ಸಕಟ್ ಎಂದು ಗುರುತಿಸಲಾಗಿದ್ದು, ಈತ ಭೂಗತ ಪಾತಕಿ ರವಿಪೂಜಾರಿಯ ಸಹಚರನಾಗಿದ್ದು, ಆತನ ಆಣತಿ ಮೇಲೆ ಶೂಟೌಟ್ ನಡೆಸಿದ್ದು. ಈತನ ಮೇಲೆ ಉರ್ವಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಹಾರಾಷ್ಟ್ರ ಕರಾಡ್ ಗಣೇಶ್ ಲಕ್ಷ್ಮಣ್ ಸಕಟ್ 2015 ರಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದ.
ಈತನ ವಿರುದ್ದ ಮಾನ್ಯ ಜೆಎಂಎಫ್ ಸಿ 3ನೇ ನ್ಯಾಯಾಲಯ ಮಂಗಳೂರು ವಾರಂಟ್ ಹೊರಡಿಸಿದ್ದು, ಈತನನ್ನು ಮಹಾರಾಷ್ಟ್ರ ರಾಜ್ಯದ ಪಂಡರಾಪುರ ಎಂಬಲ್ಲಿ, ಮಾನ್ಯ ಪೊಲೀಸ್ ಆಯುಕ್ತರ ಮಾರ್ಗದರ್ಶನದಂತೆ ಉರ್ವಾ ಪೊಲೀಸ್ ಠಾಣಾ ನಿರೀಕ್ಷಕರ ತಂಡ ಅರೆಸ್ಟ್ ಮಾಡಿ ನ್ಯಾಯಾಲಯಕ್ಕೆ ಹಾಜರುಪಡಿಸಿದೆ. ಈತನ ವಿರುದ್ದ ಮಹಾರಾಷ್ಟ್ರ ರಾಜ್ಯದ ಸತಾರ ಜಿಲ್ಲೆ ಕರಾಡ್ ನಲ್ಲಿಯೂ ಆರ್ಮ್ಸ ಆ್ಯಕ್ಟ್ ಪ್ರಕರಣ ಇರುತ್ತದೆ