ಮಧ್ಯಪ್ರದೇಶದಲ್ಲಿ ಅಪರೂಪದ ವಜ್ರಗಳ ಪತ್ತೆ- ಲಕ್ಷಧಿಪತಿಗಳಾದ ದಂಪತಿ

ಭೋಪಾಲ್:ಅದೃಷ್ಟ ಕೈ ಹಿಡಿದರೆ ಕಡು ಬಡವನೂ ಶ್ರೀಮಂತನಾಗುತ್ತಾನೆ ಎನ್ನುವ ಮಾತಿಗೆ ಈ ಘಟನೆಯೇ ಉತ್ತಮ ಉದಾಹರಣೆ. ಕಾರ್ಮಿಕ ದಂಪತಿಗೆ ಬೆಲೆ ಬಾಳುವ 8 ವಜ್ರ ಲಭಿಸಿದ್ದು, ಆ ಮೂಲಕ ಲಕ್ಷಾಧಿಪತಿಯಾಗಿ ಬದಲಾಗಿದ್ದಾರೆ (Diamonds Found In Field). ಮಧ್ಯ ಪ್ರದೇಶದ ಛತರ್‌ಪುರ್ ಜಿಲ್ಲೆಯ ಚಿಕ್ಕ ಗ್ರಾಮವೊಂದರ ಹರ್‌ಗೋವಿಂದ್ ಯಾದವ್ ಮತ್ತು ಪವನ್ ದೇವಿ ಯಾದವ್ ಅವರಿಗೆ ಈ ಅದೃಷ್ಟ ಒಲಿದಿದೆ.
ಹಾಗಂತ ಇದು ಒಂದೇ ದಿನದಲ್ಲಿ ಒಲಿದ ಸಂಪತ್ತಲ್ಲ. ಇವರು ಸತತ 5 ವರ್ಷಗಳಿಂದ ಪನ್ನಾದ (Panna) ವಜ್ರದ ಗಣಿಯಲ್ಲಿ ಹುಡುಕಾಟ ನಡೆಸುತ್ತಲೇ ಬಂದಿದ್ದರು. ಕೊನೆಗೂ ಅವರ ಶ್ರಮಕ್ಕೆ ಫಲ ದೊರೆತಿದೆ.

ಕಳೆದ 5 ವರ್ಷಗಳಿಂದ ಹರ್‌ಗೋವಿಂದ್ ಯಾದವ್ ಮತ್ತು ಅವರ ಪತ್ನಿ ಪವನ್ ದೇವಿ ಯಾದವ್ ಗಣಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದಾರೆ. ಇದೀಗ 8 ವಜ್ರ ಪತ್ತೆಯಾಗಿದ್ದು, ಈ ಪೈಕಿ ಕೆಲವು ಉತ್ಕೃಷ್ಟ ಗುಣಮಟ್ಟದ್ದಾದರೆ ಇನ್ನು ಕೆಲವು ಕಡಿಮೆ ಗುಣಮಟ್ಟ ಹೊಂದಿವೆ ಎಂದು ಮೂಲಗಳು ತಿಳಿಸಿದೆ ಅನುಪಮ್ ಸಿಂಗ್ ಇದು ಸುಮಾರು 80 ಲಕ್ಷ ರೂ. ಬೆಲೆಬಾಳುತ್ತದೆ ಎಂದು ತಿಳಿಸಿದ್ದರು. ʼʼಇಲ್ಲಿ 1961ರಲ್ಲಿ 54.55 ಕ್ಯಾರಟ್‌ನ ವಜ್ರ ದೊರೆತಿದ್ದರೆ, 2018ರಲ್ಲಿ 42 ಕ್ಯಾರಟ್‌ನ ವಜ್ರವನ್ನು ಹೊರ ತೆಗೆಯಲಾಗಿತ್ತು. ಇದೀಗ 19.22 ಕ್ಯಾರಟ್ ವಜ್ರ ಪತ್ತೆಯಾಗಿದೆʼʼ ಎಂದು ವಿವರಿಸಿದ್ದರು.
ಮಧ್ಯ ಪ್ರದೇಶದ ಉತ್ತರ ಜಿಲ್ಲೆಯಾದ ಪನ್ನಾದಲ್ಲಿ ಅಪರೂಪದ ವಜ್ರ ಲಭಿಸುತ್ತಿದ್ದು, ಇಲ್ಲಿ ಶತಮಾನಗಳಿಂದ ಗಣಿಗಾರಿಕೆ ನಡೆಯುತ್ತಿದೆ.