ದಾನಿ ವೀರ್ಯದಲ್ಲಿ ಅಪರೂಪದ ಕ್ಯಾನ್ಸರ್ ಜೀನ್ ಪತ್ತೆ: 67 ಮಕ್ಕಳಲ್ಲಿ 10ಕ್ಕೂ ಹೆಚ್ಚು ಸೋಂಕು

ಯುರೋಪ್ : ತಂತ್ರಜ್ಞಾನ ಹೆಚ್ಚಿದಂತೆ ಅಪಾಯಗಳು ಹೆಚ್ಚುತ್ತದೆ ಎನ್ನುವುದಕ್ಕೆ ಯುರೋಪ್‌ನಲ್ಲಿ ದಾನಿಯ ವೀರ್ಯದೊಂದಿಗೆ ಜನಿಸಿದ 67 ಮಕ್ಕಳು ಕ್ಯಾನ್ಸರ್ ಅಪಾಯದಲ್ಲಿರುವ ಆಘಾತಕಾರಿ ಬೆಳವಣಿಗೆ ಸಾಕ್ಷಿಯಾಗಿದೆ.
ಯುರೋಪ್‌ನಲ್ಲಿ ಅಪರೂಪದ ಕ್ಯಾನ್ಸರ್ ಉಂಟುಮಾಡುವ ಜೀನ್ ಹೊಂದಿದ್ದ ವ್ಯಕ್ತಿ ದಾನ ಮಾಡಿದ ವೀರ್ಯದಿಂದ ಕನಿಷ್ಠ 67 ಮಕ್ಕಳು ಜನಿಸಿದ್ದಾರೆ.
ಈ ಪೈಕಿ 23 ಮಕ್ಕಳಲ್ಲಿ ಈ ಅಪಾಯಕಾರಿ ಜೀನ್ ಪತ್ತೆಯಾಗಿದ್ದು, 10 ಮಕ್ಕಳಿಗೆ ಕ್ಯಾನ್ಸರ್ ಇರುವುದು ಈಗಾಗಲೇ ದೃಢಪಟ್ಟಿದೆ. ಇನ್ನೂ ಕೆಲವರು ಲ್ಯುಕೇಮಿಯಾ ಮತ್ತು ಹಾಡ್ಗ್ಕಿನ್ ಅಲ್ಲದ ಲಿಂಫೋಮಾದಂತಹ ಕ್ಯಾನ್ಸರ್‌ಗಳಿಂದ ಬಳಲುತ್ತಿದ್ದಾರೆ.
2008ರಲ್ಲಿ ವೀರ್ಯ ದಾನ ಮಾಡುವ ಸಂದರ್ಭದಲ್ಲಿ ಈ ರೂಪಾಂತರ ಇತ್ತು. ಆದರೆ ಕ್ಯಾನ್ಸರ್‌ಗೂ ಅದಕ್ಕೂ ಸಂಬಂಧ ಇರಲಿಲ್ಲ ಎಂದು ದೃಢಪಡಿಸಿದ ಯುರೋಪಿಯನ್ ವೀರ್ಯ ಬ್ಯಾಂಕ್, ದಾನಿ ವೀರ್ಯದ ಬಳಕೆಯ ಮೇಲೆ ಮಿತಿ ಇಲ್ಲದ ಬಗ್ಗೆ ಕಳವಳ ವ್ಯಕ್ತಪಡಿಸಿದೆ.