ಕಾಮಿಡಿ ಕಿಲಾಡಿಗಳು ಖ್ಯಾತಿಯ ಮಡೆನೂರು ಮನು ವಿರುದ್ಧದ ಅತ್ಯಾಚಾರ ಕೇಸ್ ವಾಪಸ್

ಕಾಮಿಡಿ ಕಿಲಾಡಿಗಳು ಶೋ ಸ್ಪರ್ಧಿ ಮಡೆನೂರು ಮನು ( Madenur Manu ) ವಿರುದ್ಧ ಸಹನಟಿಯೋರ್ವರು ಅ*ತ್ಯಾಚಾರ ಆರೋಪ ಮಾಡಿದ್ದರು. ಆ ಬಳಿಕ ಮನು ಆಡಿಯೋ ರಿಲೀಸ್ ಆಗಿ ಒಂದಷ್ಟು ಸಂಚಲನ ಸೃಷ್ಟಿಸಿತ್ತು. ಇದಾದ ನಂತರ ಮನು ಅವರನ್ನು ಚಿತ್ರರಂಗದಿಂದ ಬ್ಯಾನ್ ಮಾಡಬೇಕು ಎಂಬ ಮಾತು ಕೇಳಿ ಬಂದಿತ್ತು.

ಈಗ ಈ ಅತ್ಯಾ*ಚಾರ ಕೇಸ್‌ನ್ನು ಸಂತ್ರಸ್ತೆಯು ಹಿಂಪಡೆದಿದ್ದಾರೆ.
ಅಂದಹಾಗೆ ಧಾರವಾಡ ಹೈಕೋರ್ಟ್‌ನಲ್ಲಿ ಈ ಬಗ್ಗೆ ವಿಚಾರಣೆ ಆಗಬೇಕಿತ್ತು. ಆ ವೇಳೆ ಸಂತ್ರಸ್ಥೆಯು ವಕೀಲರ ಸಾಕ್ಷಿಯಾಗಿ ಮಡೆನೂರು ಮನು ಮುಂದೆಯೇ “ನಾನು ಖುಷಿಯಿಂದ ಕೇಸ್ ಹಿಂಪಡೆಯುತ್ತಿದ್ದೇನೆ” ಎಂದು ಹೇಳಿದ್ದಾರೆ.
ಸಂತ್ರಸ್ತೆ ಹೇಳಿದ್ದೇನು?
ಹೌದು, ಕೆಲ ತಿಂಗಳುಗಳ ಹಿಂದೆ ಆ ಸಂತ್ರಸ್ಥೆಯು ಮಾಧ್ಯಮದ ಮುಂದೆ ಬಂದು, “ಮನು ನನ್ನ ಮದುವೆ ಆಗ್ತೀನಿ ಅಂತ ಹೇಳಿದ್ದನು. ಕುಡಿದು ಬಂದು ನನ್ನ ಮೇಲೆ ಅತ್ಯಾಚಾರ ಮಾಡಿದ್ದನು. ಅಷ್ಟೇ ಅಲ್ಲದೆ ಸಿಕ್ಕಾಪಟ್ಟೆ ನಿಂದಿಸಿದ್ದಾನೆ, ನನಗೆ ಕುಡಿಸಿ ಬಲವಂತದಿಂದ ಅತ್ಯಾಚಾರ ಮಾಡಿದ್ದಾನೆ” ಎಂದು ಹೇಳಿದ್ದರು. ಅದಾದ ಬಳಿಕ ನಟ ಶಿವರಾಜ್‌ಕುಮಾರ್, ಧ್ರುವ ಸರ್ಜಾ, ದರ್ಶನ್ ಬಗ್ಗೆ ಮನು ಹೇಳಿರುವ ಆಡಿಯೋವನ್ನು ರಿಲೀಸ್ ಮಾಡಲಾಗಿತ್ತು. ಇದನ್ನು ನೋಡಿ ಈ ನಟರ ಫ್ಯಾನ್ಸ್ ಆಕ್ರೋಶಗೊಂಡಿದ್ದರು.
ಸುದ್ದಿಗೋಷ್ಠಿಯಲ್ಲಿ ಮಡೆನೂರು ಮನು ಹೇಳಿದ್ದೇನು?
ಅಷ್ಟೇ ಅಲ್ಲದೆ ಮನು ಅವರನ್ನು ಕಿರುತೆರೆ, ಹಿರಿತೆರೆಯಿಂದ ಬ್ಯಾನ್ ಮಾಡಬೇಕು ಎಂದು ಕೂಡ ಒತ್ತಾಯಿಸಲಾಗಿತ್ತು. ಇನ್ನು ಮನು ನಟನೆಯ ʼಕುಲದಲ್ಲಿ ಕೀಳ್ಯಾವುದೋʼ ಸಿನಿಮಾ ರಿಲೀಸ್‌ಗೆ ಒಂದು ದಿನ ಮುಂಚೆ ಅವರು ಜೈಲು ಸೇರಿದ್ದರು. ಈ ಮೂಲಕ ಅವರ ವರ್ಷಗಳ ಕನಸು ಕಮರಿತ್ತು. ಕೆಲ ದಿನಗಳ ಕಾಲ ಜೈಲಿನಲ್ಲಿದ್ದು, ಆ ಬಳಿಕ ಹೊರಬಂದ ಅವರು ಸುದ್ದಿಗೋಷ್ಠಿ ಕರೆದು, ” ನನ್ನ ಕುಲದಲ್ಲಿ ಕೀಳ್ಯಾವುದೋ ಸಿನಿಮಾ ರಿಲೀಸ್‌ಗಿಂತ ಮುಂಚೆಯೇ ನಾನು ಜೈಲಿಗೆ ಹೋದೆ. ಆಮೇಲೆ ಏನೇನು ಆಯ್ತು ಅನ್ನೋದು ನಾನು ಜೈಲಿನಿಂದ ಹೊರಗಡೆ ಬಂದಮೇಲೆ ಗೊತ್ತಾಯ್ತು. ನಮ್ಮ ಸಿನಿಮಾ ಚೆನ್ನಾಗಿದೆ ಅಂತ ನನ್ನ ಬಗ್ಗೆ ಆಡಿಯೋ ರಿಲೀಸ್ ಮಾಡ್ತಾರೆ. ನನಗೆ ಮದ್ಯ ಕುಡಿಸಿ ಆಡಿಯೋ ಮಾಡಿದ್ದಾರೆ. ಇದು ನನ್ನ ಅರಿವಿಗೆ ಬಂದಿಲ್ಲ. ನಾನು ಶಿವರಾಜ್‌ಕುಮಾರ್, ಧ್ರುವ ಸರ್ಜಾ ಅವರ ಬಳಿ ಕ್ಷಮೆ ಕೇಳಿದ್ದೀನಿ” ಎಂದು ಹೇಳಿದ್ದರು.
“ನಾನು, ನನ್ನ ಹೆಂಡತಿ ಜೊತೆ ಏನಾದರೂ ಈ ಬಗ್ಗೆ ದೂರು ಕೊಟ್ಟಿದ್ರೆ ಬೇರೆ ಥರ ಆಗೋದು. ಇದೆಲ್ಲವನ್ನು ಜನರು ನಮ್ಮ ಸಿನಿಮಾಕ್ಕೆ ಮಾಡಿದ ಗಿಮಿಕ್ ಅಂತ ಹೇಳ್ತಾರೆ. ನಾನು ಯಾವುದೇ ಪೊಲೀಸ್ ಠಾಣೆ, ಕೋರ್ಟ್ ಅಂತ ಹೋಗಿರಲಿಲ್ಲ. ಆರಂಭದಲ್ಲಿ ಆಡಿಯೋ ಕೇಳಿದಾಗ ಆ ಆಡಿಯೋದು ನಂದಲ್ಲ ಅಂತ ಅನಿಸಿತ್ತು. 50000 ರೂಪಾಯಿ ಕೊಟ್ಟು ನನ್ನ ಆಡಿಯೋ ಖರೀದಿ ಮಾಡಿದ್ದಾರಂತೆ. ಈ ಕೇಸ್ ಕೋರ್ಟ್‌ನಲ್ಲಿ ಇರೋದಿಕ್ಕೆ ಈ ಬಗ್ಗೆ ಹೆಚ್ಚು ಮಾತನಾಡಲ್ಲ, ಆ ಆಡಿಯೋ ರಿಲೀಸ್ ಮಾಡಿದವರು ಯಾರು ಅಂತ ಗೊತ್ತಾಗಿದೆ” ಎಂದು ಮನು ಹೇಳಿದ್ದರು.
ಸಂತ್ರಸ್ತೆಗೆ ಇನ್ನೊಂದು ಲವ್
ಅಲೋಕ್ ಹಾಗೂ ಆ ಸಂತ್ರಸ್ಥೆ ಪ್ರೀತಿ ಮಾಡುತ್ತಿದ್ದರು. ಅವರೇ ನನ್ನ ಮಾತುಗಳನ್ನು ರೆಕಾರ್ಡ್ ಮಾಡಿದ್ದನು. ಇದರ ಹಿಂದೆ ಓರ್ವ ಲೇಡಿ ಇದ್ದಾರೆ. ಅವರು ಯಾರು ಎಂದು ಇಷ್ಟರಲ್ಲೇ ಗೊತ್ತಾಗುವುದು” ಎಂದು ಹೇಳಿದ್ದರು. ಅಂದಹಾಗೆ ಕೃಷಿ, ನಟನೆ ನಂಬಿಕೊಂಡಿರುವ ಮನು ಅವರು ಮುಂದಿನ ದಿನಗಳಲ್ಲಿ ಇನ್ನಷ್ಟು ಸಿನಿಮಾದಲ್ಲಿ ನಟಿಸುವ ಆಸೆ ಹೊಂದಿದ್ದಾರಂತೆ.
