ಉತ್ತರ ಪ್ರದೇಶದಲ್ಲಿಅತ್ಯಾಚಾರ ಆರೋಪಿಯನ್ನುಎತ್ತಿನ ಗಾಡಿಗೆ ಕಟ್ಟಿ, ಬೆತ್ತಲೆ ಮೆರವಣಿಗೆ

ಬಹ್ರೈಚ್: ಉತ್ತರ ಪ್ರದೇಶದ ಬಹ್ರೈಚ್ನ ವಿಶೇಷ್‌ಗಂಜ್ ಪ್ರದೇಶದಲ್ಲಿಅತ್ಯಾಚಾರ ನಡೆಸಿದ ಆರೋಪಿಯನ್ನು ಎತ್ತಿನ ಗಾಡಿಗೆ ಕಟ್ಟಿ, ಸ್ಥಳೀಯರು ಆತನ ಮೇಲೆ ಹಲ್ಲೆ ಮಾಡಿ ಬೆತ್ತಲೆಯಾಗಿ ಮೆರವಣಿಗೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹರಿದಾಡಿದ ನಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ. ಈ ವಿಡಿಯೋದಲ್ಲಿ 22 ವರ್ಷದ ಯುವಕನ ದೇಹವನ್ನು ಬೆತ್ತಲೆಯಾಗಿಸಿ, ಎತ್ತಿನ ಗಾಡಿಗೆ ಕಟ್ಟಿ ಹಾಕಲಾಗಿದೆ. ಕೆಲವರು ನಾಯಿಯನ್ನು ಅವನ ಮೇಲೆ ದಾಳಿ ಮಾಡಲು ಪ್ರಚೋದಿಸುತ್ತಿರುವುದನ್ನು ಕೂಡ ವಿಡಿಯೋದಲ್ಲಿ ನೋಡಬಹುದು.
ಗುರುವಾರ ಈ ವೀಡಿಯೊ ವೈರಲ್ ಆದ ನಂತರ ಆತನ ಕುಟುಂಬವು ಸ್ಥಳೀಯ ಪೊಲೀಸರಿಗೆ ದೂರು ನೀಡಿತು. “ಮಹಿಳೆಯೊಬ್ಬರ ಲಿಖಿತ ದೂರಿನ ಆಧಾರದ ಮೇಲೆ, ಭಾರತೀಯ ನ್ಯಾಯ ಸಂಹಿತಾ ಸೆಕ್ಷನ್‌ಗಳ ಅಡಿಯಲ್ಲಿ ಅಪರಿಚಿತ ವ್ಯಕ್ತಿಗಳ ವಿರುದ್ಧ ಹಲ್ಲೆ ಮತ್ತು ಹಾನಿಗಾಗಿ ಎಫ್‌ಐಆರ್ ದಾಖಲಿಸಲಾಗಿದೆ” ಎಂದು ಉಪ ಪೊಲೀಸ್ ವರಿಷ್ಠಾಧಿಕಾರಿ ರಮೇಶ್ ಪಾಂಡೆ ತಿಳಿಸಿದ್ದಾರೆ.