ಅಣ್ಣವರ ಹೆಸರು ಉಲ್ಲೇಖಿಸಿ ವಿವಾದ ಸೃಷ್ಟಿಸಿದ ರಾಮ್‌ಗೋಪಾಲ್ ವರ್ಮಾ

ಥಗ್ ಲೈಫ್ ಸಿನಿಮಾ ಆಡಿಯೋ ರಿಲೀಸ್ ಕಾರ್ಯಕ್ರಮದ ವೇಳೆ ನಟ ಕಮಲ್ ಹಾಸನ್ (Kamal Haasan) ಕನ್ನಡದ ಬಗ್ಗೆ ನೀಡಿದ ವಿವಾದಾತ್ಮಕ ಹೇಳಿಕೆಯಿಂದ ಅವರ ಸಿನಿಮಾ ಕರ್ನಾಟಕದಲ್ಲಿ ಎಲ್ಲಿಯೂ ಬಿಡುಗಡೆಯಾಗಿಲ್ಲ. ಅಲ್ಲದೇ ಕಮಲ್ ಕನ್ನಡಿಗರ ಕ್ಷಮೆ ಸಹ ಕೇಳದೇ ಉದ್ಧಟತನ ಮೆರೆದಿದ್ದರು.

ಕರ್ನಾಟಕ ಹೈಕೋರ್ಟ್ ಸಹ ಕಮಲ್ ಹಾಸನ್‌ಗೆ ಛೀಮಾರಿ ಹಾಕಿತ್ತು. ಇದೀಗ ಕಮಲ್ ಹಾಸನ್ ಬಳಿಕ ಮತ್ತೊಬ್ಬ ಸ್ಟಾರ್ ನಿರ್ದೇಶಕ ಕನ್ನಡ ಹಾಗೂ ಕನ್ನಡದವರನಟ ರಾಜ್‌ಕುಮಾರ್‌ಗೆ ಬಗ್ಗೆ ಮಾತನಾಡಿದ್ದು, ಕನ್ನಡಿಗರ ಕೋಪಕ್ಕೆ ಕಾರಣರಾಗಿದ್ದಾರೆ.
ಅಣ್ಣವ್ರ ಬಗೆ ವಿವಾದಾತ್ಮಕ ಹೇಳಿಕೆ:
ಹೌದು, ಕಮಲ್ ಹಾಸನ್ ಕನ್ನಡದ ಬಗ್ಗೆ ವಿವಾದತ್ಮಕ ಹೇಳಿಕೆ ನೀಡಿದ ಬಗ್ಗೆ ಕ್ಷಮೆ ಕೇಳದಿದ್ದರೆ ಕರ್ನಾಟಕದಲ್ಲಿ ಥಗ್ ಲೈಫ್ ಸಿನಿಮಾ ಬ್ಯಾನ್ ಮಾಡುವ ಬೆದರಿಕೆ ಹಾಕುವ ಮೂಲಕ ಹೊಸ ಥರದ ಗೂಂಡಾಗಿರಿ ಎಂದು ವಿವಾದಾತ್ಮಕ ಹೇಳಿಕೆ ನೀಡುವ ಮೂಲಕ ಕನ್ನಡಿಗರ ಕೋಪಕ್ಕೆ ಕಾರಣರಾಗಿದ್ದ ರಾಮ್‌ಗೋಪಾಲ್ ವರ್ಮಾ ಇದೀಗ ಈ ಹೇಳಿಕೆ ಬೆನ್ನಲ್ಲೇ ವರನಟ ಡಾ.ರಾಜ್‌ಕುಮಾರ್‌ಅವರ ಬಗ್ಗೆ ಮಾತನಾಡಿರುವುದು ಇನ್ನೊಂದು ವಿವಾದಕ್ಕೆ ಕಾರಣವಾಗಿದೆ. ಹೌದು, RGV ಅಣ್ಣವ್ರ ಬಗ್ಗೆ ಮಾತನಾಡುವಾಗ, ಅಮಿತಾಭ್ ಬಚ್ಚನ್ ಅವರ ಚಿತ್ರಗಳನ್ನು ರಿಮೇಕ್ ಮಾಡುವ ಮೂಲಕ ರಾಜ್‌ಕುಮಾರ್ ಅವರುಯಶಸ್ಸು ಕಂಡರು ಎಂದು ಹೇಳಿದ್ದಾರೆ. ಅಲ್ಲದೇ ಈ ವಿಚಾರ ಇದೀಗ ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ.
ರಿಮೇಕ್ ಸಿನಿಮಾದಿಂದಲೇ ಖ್ಯಾತರಾದರು:
ರಾಮ್‌ಗೋಪಾಲ್ ವರ್ಮಾ ಮಾತನಾಡುವಾಗ, ಅಂದು 70-80ರ ದಶಕದ ವೇಳೆ ಅನೇಕರು ಅಮಿತಾಬ್ ಬಚ್ಚನ್ ಅವರ ಸಿನಿಮಾಗಳನ್ನು ರಿಮೇಕ್ ಮಾಡುವ ಮೂಲಕ ಖ್ಯಾತರಾದರು. ಅದರಲ್ಲಿಯೂ ರಾಜ್‌ಕುಮಾರ್, ಚಿರಂಜೀವಿ, ರಜನಿಕಾಂತ್‌ರಂತಹ ನಟರುಗಳು ರಿಮೇಕ್ ಮೂಲಕವೇ ಜನಪ್ರಿಯರಾದರು. ಅಲ್ಲದೇ ಒಮ್ಮೆ ಅಮಿತಾಬ್ ಬಚ್ಚನ್ 90ರ ದಶಕದ ವೇಳೆ 5 ವರ್ಷಗಳ ಕಾಲ ಸಿನಿಮಾದಿಂದ ಬ್ರೇಕ್ ತೆಗೆದುಕೊಂಡಿದ್ದರು. ಆದರೆ ದಕ್ಷಿಣದ ನಿರ್ದೇಶಕರು ಮಾತ್ರ ಆಗಲೂ ಸಹ ಅಮಿತಾಬ್ ಅವರ ರೀತಿಯಲ್ಲಿಯೇ ಮಾಸ್ ಕಥೆಗಳನ್ನೇ ಮುಂದುವರೆಸಿದ್ದರು ಎಂದು ಹೇಳಿದ್ದಾರೆ. ಸದ್ಯ RGV ಅವರ ಈ ಹೇಳಿಕೆ ಕನ್ನಡಿಗರ ಕೋಪಕ್ಕೆ ಕಾರಣವಾಗಿದೆ.
ಥಗ್ ಲೈಫ್ ಬಾಕ್ಸ್ ಆಫೀಸ್ ಕಲೆಕ್ಷನ್:
ಮೊದಲ ದಿನ, ಥಗ್ ಲೈಫ್ ಭಾರತದಲ್ಲಿ 15.50 ಕೋಟಿ ರೂ.ಗಳನ್ನು ಗಳಿಸಿತು. ಮನರಂಜನಾ ಟ್ರ್ಯಾಕಿಂಗ್ ಪೋರ್ಟಲ್ ಸ್ಯಾಕ್ನಿಲ್ಕ್‌ನ ಆರಂಭಿಕ ಅಂದಾಜಿನ ಪ್ರಕಾರ, ಜೂನ್ 6, ಶುಕ್ರವಾರದಂದು ಈ ಚಿತ್ರವು 7.50 ಕೋಟಿ ರೂ. ಗಳಿಸಿದೆ. ಇದರರ್ಥ ಕಮಲ್ ಹಾಸನ್ (Kamal Hassan) ಅಭಿನಯದ ಈ ಚಿತ್ರ ಬಿಡುಗಡೆಯಾದ ಎರಡನೇ ದಿನದಂದು ಶೇ. 50 ರಷ್ಟು ಭಾರಿ ಕುಸಿತ ಕಂಡಿದ್ದು, ಎರಡು ದಿನಗಳ ಒಟ್ಟು ಗಳಿಕೆ ಭಾರತದಲ್ಲಿ 23 ಕೋಟಿ ರೂ.ಗಳಿಗೆ ತಲುಪಿದೆ. ಈ ಮೂಲಕ ಕರ್ನಾಟಕದಲ್ಲಿ ಸಿನಿಮಾ ಬ್ಯಾನ್ ಮಾಡಿದ್ದರ ಜೊತೆಗೆ ಸಿನಿಮಾದ ಕಥೆ ಸಹ ಜನರಿಗೆ ಇಷ್ಟವಾಗದೇ ಚಿತ್ರಕ್ಕೆ ತಮಿಳುನಾಡಿನಲ್ಲಿ ಉತ್ತಮ ಪ್ರತಿಕ್ರಿಯೆ ಸಿಕ್ಕಿರಲಿಲ್ಲ.
