ರಕ್ಷಿತ್ ಮತ್ತು ರುಕ್ಮಿಣಿ: ಇಬ್ಬರು ಸ್ಟಾರ್ಗಳ ನಡುವೆ ಇರುವ ಆ ಅಚ್ಚರಿಯ ಸಾಮ್ಯತೆಗಳೇನು?

ರಕ್ಷಿತ್ ಶೆಟ್ಟಿ ಅವರು ಯಾವುದೇ ವೇದಿಕೆ ಬೇಕಿದ್ದರೂ ಏರಲಿ. ಅಲ್ಲಿ, ಅವರು ಮಾತಿನ ಮಧ್ಯೆ ‘ಅ..’ ‘ಅ..’ ಎಂದು ಮಾತನಾಡುತ್ತಾರೆ. ಅಂದರೆ ಅವರು ಪ್ರತಿ ಮಾತಿನ ಮಧ್ಯೆ ಸ್ಪೇಸ್ ಕೊಡುತ್ತಾರೆ. ಅವರು ಮೊದಲಿನಿಂದ ಮಾತನಾಡೋದೇ ಹಾಗೆಯೇ. ಈಗ ರುಕ್ಮಿಣಿ ವಸಂತ್ ಕೂಡ ಹಾಗೆಯೇ ಮಾತನಾಡೋದು ಕಂಡು ಬಂದಿದೆ.

ರಕ್ಷಿತ್ ಶೆಟ್ಟಿ ಹಾಗೂ ರುಕ್ಮಿಣಿ ವಸಂತ್ (Rukmini Vasanth) ಅವರು ಒಟ್ಟಾಗಿ ನಟಿಸಿದ ಸಿನಿಮಾ ಎಂದರೆ ಅದು ‘ಸಪ್ತ ಸಾಗರಾದಚೆ ಎಲ್ಲೋ’ ಪಾರ್ಟ್ ಎ ಹಾಗೂ ಬಿ. ಈ ಚಿತ್ರದಲ್ಲಿ ರಕ್ಷಿತ್ ಮನು ಆಗಿ ಕಾಣಿಸಿಕೊಂಡರೆ ರುಕ್ಮಿಣಿ ವಸಂತ್ ಅವರು ಪ್ರಿಯಾ ಹೆಸರಿನ ಪಾತ್ರ ಮಾಡಿದ್ದರು. ಈ ಪಾತ್ರ ಸಾಕಷ್ಟು ಗಮನ ಸೆಳೆಯಿತು. ಈಗ ಇವರಿಬ್ಬರ ಮಧ್ಯೆ ಇರುವ ಒಂದು ದೊಡ್ಡ ಸಾಮ್ಯತೆಯನ್ನು ಫ್ಯಾನ್ಸ್ ಕಂಡು ಹಿಡಿದಿದ್ದಾರೆ. ಆ ಸಂದರ್ಭದ ವಿಡಿಯೋ ವೈರಲ್ ಆಗಿ ಗಮನ ಸೆಳೆದಿದೆ.
ರಕ್ಷಿತ್ ಶೆಟ್ಟಿ ಅವರು ಯಾವುದೇ ವೇದಿಕೆ ಬೇಕಿದ್ದರೂ ಏರಲಿ. ಅಲ್ಲಿ, ಅವರು ಮಾತಿನ ಮಧ್ಯೆ ‘ಅ..’ ‘ಅ..’ ಎಂದು ಮಾತನಾಡುತ್ತಾರೆ. ಅಂದರೆ ಅವರು ಪ್ರತಿ ಮಾತಿನ ಮಧ್ಯೆ ಸ್ಪೇಸ್ ಕೊಡುತ್ತಾರೆ. ಅವರು ಮೊದಲಿನಿಂದ ಮಾತನಾಡೋದೇ ಹಾಗೆಯೇ. ಈಗ ರುಕ್ಮಿಣಿ ವಸಂತ್ ಕೂಡ ಹಾಗೆಯೇ ಮಾತನಾಡೋದು ಕಂಡು ಬಂದಿದೆ.
ರುಕ್ಮಿಣಿ ವಸಂತ್ ಅವರು ‘ಕಾಂತಾರ: ಚಾಪ್ಟರ್ 1’ ಚಿತ್ರದ ಭಾಗ ಆಗಿದ್ದಾರೆ. ಈ ಚಿತ್ರದ ಟ್ರೇಲರ್ ಇತ್ತೀಚೆಗೆ ರಿಲೀಸ್ ಆಯಿತು. ಈ ಸಿನಿಮಾದಲ್ಲಿ ರುಕ್ಮಿಣಿ ವಸಂತ್ ಅವರು ನಾಯಕಿ ಪಾತ್ರ ಮಾಡಿದ್ದಾರೆ. ಅವರು ಯುವ ರಾಣಿ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ. ಟ್ರೇಲರ್ ಲಾಂಚ್ ಈವೆಂಟ್ನಲ್ಲಿ ಅವರು ವೇದಿಕೆ ಏರಿದ್ದಾರೆ. ಆಗ ಅವರು ಮಾತನಾಡುವಾಗ, ‘ಅ..’, ‘ಅ..’ ಎಂದು ಸ್ಪೇಸ್ ಕೊಟ್ಟು ಮಾತನಾಡಿದ್ದಾರೆ.
ಸದ್ಯ ಈ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಅನೇಕರು ರಕ್ಷಿತ್ ಹಾಗೂ ರುಕ್ಮಿಣಿ ವಸಂತ್ ಮಧ್ಯೆ ಸಾಮ್ಯತೆ ಇದೆ ಎಂದು ಹೇಳುತ್ತಿದ್ದಾರೆ. ಇದಕ್ಕೆ ಫ್ಯಾನ್ಸ್ ಕೂಡ ನಾನಾ ರೀತಿಯಲ್ಲಿ ಕಮೆಂಟ್ ಮಾಡುತ್ತಿದ್ದಾರೆ.
ಸಿನಿಮಾ ವಿಚಾರಕ್ಕೆ ಬರೋದಾದರೆ ರುಕ್ಮಿಣಿ ವಸಂತ್ ವೃತ್ತಿ ಜೀವನಕ್ಕೆ ಮೈಲೇಜ್ ಸಿಕ್ಕಿದೆ. ಅವರು ಹಲವು ದೊಡ್ಡ ಪ್ರಾಜೆಕ್ಟ್ಗಳ ಭಾಗ ಆಗುತ್ತಿದ್ದಾರೆ. ರಕ್ಷಿತ್ ಶೆಟ್ಟಿ ಅವರು ಯಾವುದೇ ಹೊಸ ಸಿನಿಮಾ ಅಧಿಕೃತವಾಗಿ ಘೋಷಣೆ ಆಗಿಲ್ಲ. ‘ರಿಚರ್ಡ್ ಆ್ಯಂಟನಿ’ ಸಿನಿಮಾದ ಕೆಲಸಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ ಎನ್ನಲಾಗಿದೆ.
