ರಾಜೇಶ್ ಕಾಕಡೆ: ಪತ್ನಿಯ ಒಡವೆ ಮಾರಿಕೊಂಡು ಹಳ್ಳಿಗೆ ನೀರಿನ ಸಮಸ್ಯೆ ಪರಿಹರಿಸಿದ ಸಹೃದಯ ವ್ಯಕ್ತಿ

ಮಹಾರಾಷ್ಟ್ರ : ಜನಪರ ಕೆಲಸ ಮಾಡಬೇಕಿರುವ ರಾಜಕಾರಣಿಗಳು ತಂತಮ್ಮ ಆಸ್ತಿ ಹೆಚ್ಚಳ ಮಾಡಿಕೊಳ್ಳುವ ಕೆಲಸದಲ್ಲಿ ನಿರತರಾಗಿರುವಾಗ ಇಲ್ಲೊಬ್ಬ ವ್ಯಕ್ತಿ ಐದು ಹಳ್ಳಿಗಳ ಜಲಕ್ಷಾಮಕ್ಕೆ ಮನ ಮಿಡಿದಿದ್ದಾರೆ. ಬೀಡ್ ಜಿಲ್ಲೆಯ ರಾಜೇಶ್ ಕಾಕಡೆ ಎಂಬ ವ್ಯಕ್ತಿ ತನ್ನ ಪತ್ನಿಯ ಒಡವೆ ಮಾರಿ ಬೋರ್ ಕೊರೆಸಿದ್ದು, ಇದರಿಂದ ಐದು ಹಳ್ಳಿಗಳಿಗೆ ಕುಡಿಯುವ ನೀರಿನ ಬರ ನೀಗಿದಂತಾಗಿದೆ.

ಮಹಾರಾಷ್ಟ್ರದ ಬೀಡ್ ಜಿಲ್ಲೆಯಲ್ಲಿ ಭಾಗಶಃ ಪ್ರದೇಶದಲ್ಲಿ ನೀರಿನ ಕೊರತೆ ಮಿತಿ ಮೀರಿತ್ತು. ಒಂದು ಕೊಡ ನೀರಿಗಾಗಿ ಹಳ್ಳಿಗರು ಕಿಮೀಗಟ್ಟಲೆ ನಡೆಯಬೇಕಾದ ಪರಿಸ್ಥಿತಿ ಉಂಟಾಗಿತ್ತು. ಕುಡಿಯುವ ನೀರಿಗಂತೂ ಭಾರೀ ತತ್ವಾರ ಉಂಟಾಗಿತ್ತು. ರೈತರು ನೀರಾವರಿಯ ಬಗ್ಗೆ ಯೋಚಿಸಲೂ ಸಹ ಆಸ್ಪದವಿಲ್ಲದಂತಾಗಿತ್ತು.
ಹಳ್ಳಿಗರ ಸಂಕಷ್ಟಕ್ಕೆ ಮನ ಮಿಡಿದ ರಾಜೇಶ್ ತಮ್ಮ ಸ್ವಂತ ಹಣದಿಂದ ಬೋರ್ ಕೊರೆಸಿ ದಾಹ ನೀಗಿಸಿದ್ದಾರೆ. ಕಾಕಡೆ ಅವರ ಕಾರ್ಯಕ್ಕೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.
