Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ರಾಜಸ್ಥಾನ ಅಂಗಡಿಯಲ್ಲಿ ಪಾಕ್ ಧ್ವಜವಿರುವ ಬಲೂನ್‌ಗಳು ಪತ್ತೆ: ಮಧ್ಯಪ್ರದೇಶಕ್ಕೂ ತನಿಖೆ ವಿಸ್ತರಣೆ

Spread the love

ಇಂದೋರ್‌: ರಾಜಸ್ಥಾನದ ಝಾಲಾವರ್‌ನ ಅಂಗಡಿಯೊಂದರಲ್ಲಿ ಪಾಕಿಸ್ತಾನದ ಧ್ವಜ ಮತ್ತು ಆಗಸ್ಟ್‌ 14 ಎಂದು ಮುದ್ರಿತವಿರುವ ಬಲೂನ್‌ಗಳು ಬಿಸ್ಕತ್‌ ಪ್ಯಾಕೆಟ್‌ಗಳೊಂದಿಗೆ ಪತ್ತೆಯಾಗಿದೆ.

ಈ ಪ್ರಕರಣದಲ್ಲಿ ಮಧ್ಯಪ್ರದೇಶದ ಸಂಪರ್ಕವೂ ಇರುವ ಬಗ್ಗೆ ಶಂಕೆ ವ್ಯಕ್ತವಾಗಿದ್ದು, ಎರಡೂ ರಾಜ್ಯಗಳ ಪೊಲೀಸರು ತನಿಖೆ ಆರಂಭಿಸಿದ್ದಾರೆ.

ಬಲೂನ್‌ನಲ್ಲಿ ಪಾಕ್‌ ಧ್ವಜ ಕಂಡುಬಂದ ನಂತರ ಸ್ಥಳೀಯರ ಆಕ್ರೋಶ ವ್ಯಕ್ತಪಡಿಸಿ ದೂರು ನೀಡಿದ್ದಾರೆ. ಹೀಗಾಗಿ ಪೊಲೀಸರು ತನಿಖೆಯನ್ನು ಚುರುಕುಗೊಳಿಸಿದ್ದು, ಈ ವಿವಾದಾತ್ಮಕ ವಸ್ತುಗಳನ್ನು ರತ್ಲಂ ಜಿಲ್ಲೆಯ ಆಲೋಟ್‌ ಪಟ್ಟಣದ ಸಗಟು ವ್ಯಾಪಾರಿಯೊಬ್ಬ ಪೂರೈಕೆ ಮಾಡಿರುವುದಾಗಿ ತಿಳಿದುಬಂದಿದೆ.

ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ, ಬಲೂನ್‌ಗಳನ್ನು ಇಂದೋರ್‌ನ ಮಾರಾಟಗಾರನಿಂದ ಖರೀದಿಸಿರುವುದಾಗಿ ತಿಳಿಸಿದ್ದಾನೆ. 2 ರಾಜ್ಯಗಳಲ್ಲೂ ತನಿಖೆ ಆರಂಭಿಸಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *