ಹನಿಮೂನ್ ನಲ್ಲಿ ಕೊಲೆಯಾದ ರಾಜ ರಘುವಂಶಿ ಪರ್ವತ ಹತ್ತುತ್ತಿದ್ದ ‘ಕೊನೆಯ ಕ್ಷಣ’

ಶಿಲ್ಲಾಂಗ್: ಇಂದೋರ್ ಮೂಲದ ಉದ್ಯಮಿ ರಾಜ ರಘುವಂಶಿಯ (Raja Raghuvanshi) ಹತ್ಯೆಗೂ ಕೆಲವು ಗಂಟೆಗಳ ಮೊದಲು, ರಾಜ ತಮ್ಮ ಪತ್ನಿ ಸೋನಮ್ (ಪ್ರಮುಖ ಆರೋಪಿ) ಜೊತೆ ಮೇಘಾಲಯದ ಹಚ್ಚ ಹಸಿರಿನ ಪರ್ವತಗಳ ಕಡಿದಾದ ಶಿಖರದ ಮೇಲೆ ಚಾರಣ ಮಾಡುತ್ತಿದ್ದರು. ಈ ವೇಳೆ ಬೇರೆ ಪ್ರಯಾಣಿಕರು ಅದೇ ಮಾರ್ಗದಲ್ಲಿ ಹೋಗುವಾಗ ಅವರಿಬ್ಬರ ವಿಡಿಯೋವನ್ನು ಚಿತ್ರೀಕರಿಸಿದ್ದಾರೆ. ಈ ದೃಶ್ಯವನ್ನು ಮೇ 23ರಂದು ಬೆಳಿಗ್ಗೆ 9.45ರ ಸುಮಾರಿಗೆ ರಾಜ ರಘುವಂಶಿ ಬೆಟ್ಟವನ್ನು ಹತ್ತುತ್ತಿರುವುದನ್ನು ಪ್ರವಾಸಿಗರೊಬ್ಬರು “ಆಕಸ್ಮಿಕವಾಗಿ” ಚಿತ್ರೀಕರಿಸಿದ ವಿಡಿಯೋ ಸೆರೆಹಿಡಿದಿದೆ. ಅದೇ ದಿನ ಮಧ್ಯಾಹ್ನ ಸೋನಮ್ ಮತ್ತು ಆಕೆಯ ಪ್ರೇಮಿ ರಾಜ್ ಕುಶ್ವಾಹ ನೇಮಿಸಿಕೊಂಡಿದ್ದ ಮೂವರು ಹಂತಕರು ರಾಜ ಅವರನ್ನು ಕೊಲೆ ಮಾಡಿ ಕಣಿವೆಗೆ ಎಸೆದಿದ್ದಾರೆ.
ಶಿಲ್ಲಾಂಗ್‌ನಲ್ಲಿದ್ದ ಪ್ರವಾಸಿಗರೊಬ್ಬರು ರಾಜ ರಘುವಂಶಿ ಅವರ ಸಾವಿಗೆ ಮುನ್ನ ಅವರ ಕೊನೆಯ ಕ್ಷಣಗಳನ್ನು ಆಕಸ್ಮಿಕವಾಗಿ ಸೆರೆಹಿಡಿದಿದ್ದಾರೆ. ಅವರು ಇತ್ತೀಚೆಗೆ ಸಾಮಾಜಿಕ ಮಾಧ್ಯಮದಲ್ಲಿ ಈ ವೀಡಿಯೊವನ್ನು ಹಂಚಿಕೊಂಡಿದ್ದಾರೆ. ಡಬಲ್ ಡೆಕ್ಕರ್ ಸೇತುವೆಗೆ ಭೇಟಿ ನೀಡುವಾಗ ರಾಜಾ ಮತ್ತು ಸೋನಂ ರಘುವಂಶಿಯನ್ನು ತಿಳಿಯದೆ ತಮ್ಮ ಕ್ಯಾಮೆರಾದಲ್ಲಿ ಸೆರೆಹಿಡಿದಿದ್ದಾರೆ ಎಂದು ಹೇಳಿಕೊಂಡಿದ್ದಾರೆ.