ರಾಜ ಬಿ ಶೆಟ್ಟಿಯವರ ಸರಳತೆ ಮತ್ತು ಯಶಸ್ಸು: ಹೊರರಾಜ್ಯದ ಪ್ರೇಕ್ಷಕರ ಹೃದಯ ಗೆದ್ದ ಕನ್ನಡದ ನಟ

ನಟಿಸಿ ನಿರ್ಮಾಣ ಮಾಡಿರುವ ರಾಜ್ ಬಿ ಶೆಟ್ಟಿಯವರ ಸು ಫ್ರಮ್ ಸೋ ಸಿನಿಮಾ ಇದೀಗ 100ಕೋಟಿ ಕಲೆಕ್ಷನ್ ಅತ್ತ ಸಾಗುತ್ತಿದೆ. ಕೇರಳ ಹಾಗೂ ಹೈದರಾಬಾದ್‌ದಲ್ಲಿ ಬಿಡುಗಡೆಗೊಂಡ ಸಿನಿಮಾಗೆ ಪ್ರೇಕ್ಷಕರು ಫಿದಾ ಆಗಿ, ಭಾರೀ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದೀಗ ಸಾಮಾಜಿಕ ಜಾಲತಾಣದಲ್ಲಿ ರಾಜ್ ಬಿ ಶೆಟ್ಟಿ ಅವರ ಸರಳತೆ ಭಾರೀ ಮೆಚ್ಚುಗೆ ಪಾತ್ರವಾಗಿದೆ. ಸು ಫ್ರಮ್ ಸೋ ಸಿನಿಮಾದ ಹೈದರಾಬಾದ್ ಪ್ರದರ್ಶನದ ವೇಳೆಯಲ್ಲಿ ಆಡಿಯನ್ಸ್ ಪ್ರತಿಕ್ರಿಯೆಯನ್ನು ಪಡೆಯಲು ಮೆಟ್ಟಿಲ ಬಳಿಯ ನೆಲದಲ್ಲಿ ಕಾದು ಕುಳಿತ ರೀತಿ ಎಲ್ಲರ ಮನಸ್ಸು ಗೆದ್ದಿದೆ.
ಸಾಲು ಸಾಲು ಹಿಟ್ ಸಿನಿಮಾಗಳನ್ನು ನೀಡಿ, ಕನ್ನಡ ಸಿನಿಮಾ ರಂಗದಲ್ಲಿ ತಮ್ಮ ವಿಭಿನ್ನ ಕಥಾ ಹಂದರದಿಂದಲೇ ಗಮನ ಸೆಳೆಯುತ್ತಿರುವ ರಾಜ್ ಬಿಶೆಟ್ಟಿಗೆ ಹೊರ ರಾಜ್ಯದ ಜನತೆಯೂ ಮೆಚ್ಚುಗೆಯ ಸುರಿಮಳೆ ಸುರಿಯುತ್ತಿದ್ದಾರೆ.
JP ತೂಮಿನಾಡು ಬರೆದು ನಿರ್ದೇಶಿಸಿದ ಮತ್ತು ನಟಿಸಿದ ಕನ್ನಡದ ಹಾರರ್-ಹಾಸ್ಯ ಚಿತ್ರ ‘ಸು ಫ್ರಮ್ ಸೋ’ ಈ ವರ್ಷದ ಅತಿದೊಡ್ಡ ಅಚ್ಚರಿಯ ಹಿಟ್‌ಗಳಲ್ಲಿ ಒಂದಾಗಿ ಹೊರಹೊಮ್ಮಿದೆ.
₹5.50 ಕೋಟಿ ಬಜೆಟ್‌ನಲ್ಲಿ ನಿರ್ಮಾಣವಾಗಿ ₹75ಕೋಟಿ ಬಾಚಿಕೊಂಡು ₹100 ಕೋಟಿಯತ್ತ ದಾಪುಗಾಲು ಹಾಕುತ್ತಿರುವ ಸಿನಿಮಾಗೆ ಮಲಯಾಳಂ ಹಾಗೂ ತೆಲುಗು ಪ್ರೇಕ್ಷಕರು ಫಿದಾ ಆಗಿದ್ದಾರೆ.
