ಬಂಟ್ವಾಳ ತಾಲೂಕಿನಾದ್ಯಂತ ಮಳೆ ಅವಾಂತರ: ಹಲವು ಮನೆಗಳಿಗೆ ಹಾನಿ

ಬಂಟ್ವಾಳ:ತಾಲೂಕಿನಾದ್ಯಂತ ಗುರುವಾರ ದಿನವಿಡೀ ಸಾಧಾರಣ ಮಳೆಯಾಗಿದ್ದು, ಮಳೆಹಾನಿ ಮುಂದುವರಿದಿದೆ. ಬಾಳ್ತಿಲ ಗ್ರಾಮದ ಯಶೋದರವರ ಮನೆಯ ಹಿಂದೆ ಬರೆಯ ಮಣ್ಣು ಜರಿದು ಬಿದ್ದು ನಷ್ಟ ಸಂಭವಿಸಿದೆ.

ಮೇರಮಜಲು ಗ್ರಾಮದ ತೇವುಕಾಡು ನಿವಾಸಿ ರೇವತಿ ಯವರ ಮನೆಗೆ ತಾಗಿದ ಆವರಣ ಗೋಡೆ ಕುಸಿದಿದ್ದು ಮನೆಗೆ ಹಾನಿ ಸಂಭವ ಇದೆ. ಕಡೇಶ್ವಾಲ್ಯ ಗ್ರಾಮದ ಪಾರ್ವತಿ ಯವರ ಮನೆಗೆ ಭಾಗಶಃ ಹಾನಿಯಾಗಿದೆ.
ಪಾಣೆಮಂಗಳೂರು ಗ್ರಾಮದ ತೆಕ್ಕಿಗುಡ್ಡೆ ಎಂಬಲ್ಲಿ ಮೋಕ್ಷಿತ ರವರ ವಾಸ್ತವ್ಯದ ಮನೆಗೆ ಮಳೆಗಾಳಿಯಿಂದ ಹಾನಿಯಾಗಿದ್ದು, ಕಂದಾಯ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿ ನಷ್ಟ ಅಂದಾಜಿಸಿದ್ದಾರೆ.