Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಅರಣ್ಯ ಅಧಿಕಾರಿಯ ಮನೆಗೆ ದಾಳಿ-ಹಣ ಎಣಿಸಿ ಎಣಿಸಿ ಅಧಿಕಾರಿಗಳಿಗೆಯೇ ಸುಸ್ತು

Spread the love

ಭುವನೇಶ್ವರ: ಭ್ರಷ್ಟ ಅಧಿಕಾರಿಗಳ ಹೆಡೆಮುರಿ ಕಟ್ಟಲು ಒಡಿಶಾ ವಿಜಿಲೆನ್ಸ್ ಅಧಿಕಾರಿಗಳು ಮುಂದಾಗಿದ್ದು ಇದರ ಭಾಗವಾಗಿ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿಯೊಬ್ಬರ ಮನೆಯ ಮೇಲೆ ಶುಕ್ರವಾರ(ಜು.25) ವಿಜಿಲೆನ್ಸ್ ಅಧಿಕಾರಿಗಳು ದಾಳಿ ನಡೆಸಿದ್ದಾರೆ, ಈ ವೇಳೆ ಅಧಿಕಾರಿಯ ಮನೆಯಲ್ಲಿ ಚಿನ್ನದ ನಾಣ್ಯ ಸೇರಿದಂತೆ ಕೋಟ್ಯಾಂತರ ಮೌಲ್ಯದ ನಗದು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.

ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಸಿರುವ ಆರೋಪದ ಮೇಲೆ ವಿಜಿಲೆನ್ಸ್ ಅಧಿಕಾರಿಗಳು ಶುಕ್ರವಾರ ಕೊರಾಪುಟ್ ಜಿಲ್ಲೆಯ ಜೆಪೋರ್ ಅರಣ್ಯ ವಿಭಾಗದ ಜೇಪೋರ್ ಅರಣ್ಯ ಶ್ರೇಣಿಯ ಉಪ ರೇಂಜರ್ ರಾಮ ಚಂದ್ರ ನೇಪಕ್ ಅವರ ಒಡೆತನದ ಮನೆ ಸೇರಿದಂತೆ ಭುವನೇಶ್ವರ ಮತ್ತು ಕೊರಾಪುಟ್‌ನಲ್ಲಿರುವ ಕಚೇರಿಗಳಿಗೆ ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ, ಈ ವೇಳೆ ಅವರ ಮನೆ ಹಾಗೂ ಕಚೇರಿಗಳಲ್ಲಿ ಆದಾಯಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಆಸ್ತಿ ಗಳಿಸಿರುವುದು ಬೆಳಕಿಗೆ ಬಂದಿದೆ ಅಲ್ಲದೆ ಅಧಿಕಾರಿಯ ಮನೆಯ ಲಾಕರ್ ನಲ್ಲಿದ್ದ ಹಣದ ಕಂತೆ ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ.

ದಂಗಾದ ಅಧಿಕಾರಿಗಳು:
ಅರಣ್ಯ ಅಧಿಕಾರಿಯ ಆಸ್ತಿಗೆ ಸಂಬಂಧಿಸಿ ಜೈಪೋರ್ ಮತ್ತು ಭುವನೇಶ್ವರದ ಆರು ಸ್ಥಳಗಳಲ್ಲಿ ಶೋಧ ಕಾರ್ಯಾಚರಣೆ ನಡೆಸಿದ ಅಧಿಕಾರಿಗಳು ದಾಖಲೆಗಳನ್ನು ಪರಿಶೀಲನೆ ನಡೆಸುತ್ತಿದೆ, ಈ ವೇಳೆ ಜೇಪೋರ್ ನಲ್ಲಿರುವ ಅಪಾರ್ಟ್‌ಮೆಂಟ್‌ ನಲ್ಲಿರುವ ಮನೆಯ ರಹಸ್ಯ ಖಜಾನೆಯಲ್ಲಿ ಬಚ್ಚಿಟ್ಟಿದ್ದ 1.44 ಕೋಟಿ ರೂ. ಮೊತ್ತದ ನಗದು ಪತ್ತೆಯಾಗಿದೆ. ಅಷ್ಟು ಮಾತ್ರವಲ್ಲದೆ ನಾಲ್ಕು ಚಿನ್ನದ ಬಿಸ್ಕತ್ತುಗಳು ಮತ್ತು 16 ಚಿನ್ನದ ನಾಣ್ಯಗಳನ್ನು ಪತ್ತೆಹಚ್ಚಲಾಗಿದೆ. ಇದನ್ನು ಕಂಡು ಅಧಿಕಾರಿಗಳೇ ದಂಗಾಗಿದ್ದಾರೆ,


Spread the love
Share:

administrator

Leave a Reply

Your email address will not be published. Required fields are marked *