ವಿವಾದಕ್ಕೀಡಾದ ರೆಹಮಾನ್ ಮಾತು: ನೆಟ್ಟಿಗರ ಆಕ್ರೋಶಕ್ಕೆ ತುತ್ತಾದ ಆಸ್ಕರ್ ವಿಜೇತ ಸಂಗೀತಗಾರ.”

ಭಾರತದ ಪ್ರಖ್ಯಾತ ಸಂಗೀತ ನಿರ್ದೇಶಕ ಎ.ಆರ್.ರೆಹಮಾನ್ (A. R. Rahman) ಹೇಳಿಕೆ ವಿವಾದ ಹುಟ್ಟುಹಾಕಿದೆ. ಧರ್ಮದ ಕಾರಣಕ್ಕೇನೆ ಹಿಂದಿ ಚಿತ್ರರಂಗದಲ್ಲಿ ಅವಕಾಶ ಕಡಿಮೆ ಆಗಿವೆ ಅಂತಲೂ ಹೇಳಿದ್ದರು. ಛಾವಾ ಚಿತ್ರದ (Chaava Movie) ಬಗ್ಗೆನೂ ಬೇಸರ ವ್ಯಕ್ತಪಡಿಸಿದ್ದರು.

ಈ ಒಂದು ವಿಚಾರವೇ ಇದೀಗ ಎ.ಆರ್.ರೆಹಮಾನ್ (A. R. Rahman) ಅವರಿಗೆ ಬ್ಯಾಕ್ ಫೈರ್ ಆದಂತೆ ಇದೆ. ಈ ಮಾತುಗಳನ್ನ ಹೇಳಿದ್ಮೇಲೆ ಸಿಕ್ಕಾಪಟ್ಟೆ ಟೀಕೆಗಳು ಬರುತ್ತಿವೆ. ಎಲ್ಲರೂ ಎ.ಆರ್.ರೆಹಮಾನ್ (A. R. Rahman) ಅವರಿಗೆ ಬುದ್ಧಿ ಹೇಳುವಂತೆ ಆಗಿದೆ. ಅದೇ ರೀತಿನೇ ಇದೀಗ ಸೋಷಿಯಲ್ ಮೀಡಿಯಾದಲ್ಲಿ ಈಗೊಂದು ಪೋಸ್ಟ್ ಗಮನ ಸೆಳೆಯುತ್ತಿದೆ. ಅದು ಅಷ್ಟೆ ಇಂಟ್ರಸ್ಟಿಂಗ್ ಆಗಿದೆ. ಎ.ಆರ್.ರೆಹಮಾನ್ ಅವರಿಗೆ ಬುದ್ಧಿ ಹೇಳುವಂತೆ ಇದೆ. ಅದರ ವಿವರ ಇಲ್ಲಿದೆ .

ಪೂಜ್ಯ ರೆಹಮಾನ್ ಅವರೇ
ಪೂಜ್ಯ ರೆಹಮಾನ್ ಅವರೇ? ನೀವು ಸುಖಾಸುಮ್ಮನೆ ವಿವಾದವನ್ನ ಮೈ ಮೇಲೆ ಎಳೆದುಕೊಳ್ಳುತ್ತಿದ್ದೀರಿ. ಇದು ನಿಮಗೆ ಯಾಕೆ ಬೇಕಿತ್ತು. ಈ ರೀತಿ ಮಾತನಾಡಿ ಕಷ್ಟಕ್ಕೆ ಸುಲುಕ ಬೇಡಿ.
ರೆಹಮಾನ್ ವಿಡಿಯೋದಲ್ಲಿ ಏನಿದೆ..?
ಈ ಹೇಳಿಕೆಯಲ್ಲಿ ನಿಮಗೆ ಯಾವುದೇ ವಿವಾದ ಮಾಡ್ಬೇಕು ಅನ್ನುವ ಇರಾದೆ ಇದ್ದಂತೆ ಇಲ್ಲ. ಆದರೆ, ಇಂತಹ ವಿವಾದಗಳು ಮಾಧ್ಯಮಗಳಿಗೆ ಬೇಕಾಗುತ್ತದೆ. ಹಾಗಾಗಿಯೇ ಇದರ ಬಗ್ಗೆ ತಲೆ ಕೆಡೆಸಿಕೊಳ್ಳಬೇಡಿ ಅಂತಲೇ ಈ ಒಂದು ಪೋಸ್ಟ್ ಅಲ್ಲಿ ಬರೆಯಲಾಗಿದೆ. ಅದರ ಇಂಗ್ಲಿಷ್ ಸಾಲು ಹೀಗೆ ಇವೆ .
The pushback’s made ARR realize that giving into resentment always backfires. Dear sir, don’t get pulled into needless controversies, the media wants it more than you do. Jai Hind, remain undistracted & always carry the spirit of tricolor within you
ಇದರ ಕನ್ನಡದ ಅರ್ಥ ಹೀಗಿದೆ
ರೆಹಮಾನ್ ಅವರಿಗೆ ಒಂದು ವಿಷಯ ಅರ್ಥ ಆಗಿದೆ. ದ್ವೇಷ ಇಲ್ಲವೆ ಅಸಮಾಧಾನದಿಂದ ಮಾತ್ ಆಡಿದ್ರೆ ಮುಗಿತು. ಅದಕ್ಕೆ ಜನರ ವಿರೋಧ ಇದ್ದೇ ಇರುತ್ತದೆ ಅನ್ನೋದು ರೆಹಮಾನ್ ಅವರಿಗೆ ಗೊತ್ತಾಗಿದೆ.
ಪೂಜ್ಯ ರೆಹಮಾನ್ ಅವರೇ
ಹಾಗಾಗಿಯೇ ಡಿಯರ್ ಸರ್, ಅನಗತ್ಯವಾಗಿಯೇ ವಿವಾದ ಮಾಡಬೇಡಿ. ಇದು ನಿಮಗಿಂತಲೂ ಮಾಧ್ಯಮಗಳಿಗೆ ಹೆಚ್ಚು ಬೇಕಾಗುತ್ತದೆ. ಅದಕ್ಕೇನೆ ಯಾವುದಕ್ಕೂ ವಿಚಲಿತರಾಗಬೇಡಿ. ನಿಮ್ಮ ಗುರಿಯತ್ತ ಗಮನಹರಿಸಿ, ನಿಮ್ಮೊಳಗೆ ಸದಾ ತ್ರಿವರ್ಣ ಧ್ವಜದ ಚೈತನ್ಯವನ್ನ ಉಳಿಸಿಕೊಳ್ಳಿ ಅಂತಲೇ ಈ ಸಾಲುಗಳ ಅರ್ಥ ಅಂತಲೆ ಹೇಳಬಹುದು.
ತಮಿಳು ಲ್ಯಾಬ್ 2.0 ಪೇಜ್
ರೆಹಮಾನ್ ಅವರ ಬಗೆಗಿನ ಒಂದು ಪೋಸ್ಟ್ ಟ್ವಿಟರ್ ಅಲ್ಲಿಯೇ ಇದೆ. ತಮಿಳು ಲ್ಯಾಬ್ 2.0 ಅನ್ನೋ ಪೇಜ್ ಅಲ್ಲಿಯೇ ಈ ಒಂದು ಪೋಸ್ಟ್ ಇದೆ. ಇದರೊಟ್ಟಿಗೆ ರೆಹಮಾನ್ ಅವರ ಒಂದು ವಿಡಿಯೋ ಕೂಡ ಇದರಲ್ಲಿದೆ. ಇದು ರೆಹಮಾನ್ ರಾಷ್ಟ್ರಭಕ್ತಿಯನ್ನೂ ಸಾರುವಂತೆ ಇದೆ ಅಂತಲೇ ಹೇಳಬಹುದು.

ರೆಹಮಾನ್ ವಿಡಿಯೋದಲ್ಲಿ ಏನಿದೆ..?
ಎ.ಆರ್.ರೆಹಮಾನ್ ಈ ಎಲ್ಲ ವಿವಾದ ಬಳಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ಅದರಲ್ಲಿ ರೆಹಮಾನ್ ಹೀಗೆ ಹೇಳಿಕೊಂಡಿದ್ದಾರೆ.
ನನ್ನ ಮಾತನ್ನ ತಪ್ಪಾಗಿಯೇ ಅರ್ಥ ಮಾಡಿಕೊಂಡಿದ್ದಾರೆ. ಭಾರತವೇ ನನ್ನ ಸ್ಫೂರ್ತಿ ಆಗಿದೆ. ನನ್ನ ಗುರು ಸಹ ಆಗಿದೆ. ನನ್ನ ಮನೆ ಕೂಡ ಹೌದು. ಆದರೆ, ನನ್ನ ಮಾತುಗಳನ್ನು ಸಂದರ್ಭಕ್ಕೆ ತಕ್ಕಂತೆ ಬಳಸದೆ, ತಪ್ಪಾಗಿ ಅರ್ಥೈಸಲಾಗಿದೆ ಅಂತಲೇ ರೆಹಮಾನ್ ಹೇಳಿದ್ದಾರೆ ಅಂತಲೇ ಹೇಳಬಹುದು.