ನೀರಿನ ರಭಸದ ನಡುವೆಯೂ ಅಚಲವಾಗಿ ನಿಂತ ರಾಧಾ-ಕೃಷ್ಣ ವಿಗ್ರಹ: ಭಕ್ತರಲ್ಲಿ ಅಚ್ಚರಿ

ಭಾರೀ ಮಳೆಯ ತೀವ್ರತೆಗೆ ಮನೆಗಳು, ರಸ್ತೆ-ಮಾರ್ಗಗಳು ಹಾನಿಗೊಳಗಾದರೂ, ರಾಧಾ-ಕೃಷ್ಣರ ವಿಗ್ರಹವು ಒಂದು ಇಂಚೂ ಸ್ಥಳಾಂತರಗೊಳ್ಳದೇ ಅಚ್ಚರಿ ಮೂಡಿಸಿದೆ. ನೀರಿನ ರಭಸ ಸುತ್ತಮುತ್ತಲಿನ ಎಲ್ಲವನ್ನೂ ಹೊತ್ತೊಯ್ದರೂ, ದೇವರ ವಿಗ್ರಹ ಅಚಲವಾಗಿ ಉಳಿದಿದ್ದು, ಭಕ್ತರ ಮನಸ್ಸಲ್ಲಿ ಇದು ಅಚ್ಚಳಿಯದ ಕ್ಷಣವಾಗಿದೆ. “ಇದು ದೈವ ಪವಾಡವೆಂದು ನಂಬಲಾಗಿದೆ. ಈ ದೃಶ್ಯವನ್ನು ಕಂಡು ಭಕ್ತರು ಮಾತ್ರ ದೇವರ ಲೀಲೆಯ ಅರ್ಥವನ್ನು ಗ್ರಹಿಸುವಂತಾಗಿದೆ.

