Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಖತರ್: ಭಾರತೀಯರಿಗಾಗಿ ದೋಹಾದಲ್ಲಿ 24/7 ಸಹಾಯವಾಣಿ ಆರಂಭಿಸಿದ ರಾಯಭಾರ ಕಚೇರಿ

Spread the love

ದೋಹಾ: ಮಧ್ಯಪ್ರಾಚ್ಯ ಪ್ರಕ್ಷುಬ್ಧ ಸ್ಥಿತಿಯಿಂದಾಗಿ ಯುದ್ಧಪೀಡಿತ ಪ್ರದೇಶಗಳಲ್ಲಿ ಸಿಲುಕಿಕೊಂಡಿರುವ ಭಾರತೀಯರ ಸುರಕ್ಷತೆಗೆ ಇಲ್ಲಿರುವ ಭಾರತೀಯ ರಾಯಭಾರ ಕಚೇರಿ ಮುಂದಾಗಿದ್ದು, 24/7 ಸಹಾಯವಾಣಿ ಸಂಖ್ಯೆಗಳನ್ನು ಆರಂಭಿಸಲಾಗಿದೆ. ಭಾರತೀಯ ರಾಯಭಾರ ಕಚೇರಿ ಎಕ್ಸ್ ಪೋಸ್ಟ್ ನಲ್ಲಿ ಈ ಕೆಳಗಿನ ವಿವರಗಳನ್ನು ನೀಡಿದೆ:

phone number :+974 55647502, +974 55362508, +974 55384683
email -: cons.doha@mea.gov.in
ಇದರ ಜತೆಗೆ ಇಂಡಿಯನ್ ಕಲ್ಬರಲ್ ಸೆಂಟರ್ (ಐಸಿಸಿ) ಮತ್ತು ಇಂಡಿಯನ್ ಕಮ್ಯುನಿಟಿ ಬೆನೊವಲೆಂಟ್ ಫೋರಂ (ಐಸಿಬಿಎಫ್‌ನಂಥ ಸಮುದಾಯ ನೇತೃತ್ವದ ಉಪಕ್ರಮಗಳನ್ನು ಕೂಡಾ ಕಚೇರಿ ಉಲ್ಲೇಖಿಸಿದ್ದು, ಮುಂಜಾನೆ 9 ರಿಂದ ರಾತ್ರಿ 9ರವರೆಗೂ ಹೆಲ್ಸ್ ಡೆಸ್ಕ್ ಗಳನ್ನು ನಿರ್ವಹಿಸಲಾಗುತ್ತಿದೆ ಎಂದು ವಿವರಿಸಿದೆ.

ಏತನ್ಮಧ್ಯೆ ಕುವೈತ್ನಲ್ಲಿರುವ ಭಾರತೀಯ ರಾಯಭಾರ ಕಚೇರಿ ಭಾರತೀಯರಿಗೆ ಸಲಹೆ ನೀಡಿ, ಮನೆಗಳ ಒಳಗೆಯೇ ಇರುವಂತೆ ಸೂಚಿಸಿದೆ. ಜತೆಗೆ ಸಶಸ್ತ್ರ ಪಡೆಗಳ ಮುಖ್ಯಸ್ಥರು ನೀಡುವ ಸಲಹೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಸಲಹೆ ಮಾಡಿದೆ. ಅದರಲ್ಲೂ ಮುಖ್ಯವಾಗಿ ಕ್ಷಿಪಣಿಗಳು ಹಾಗೂ ಪತ್ತೆಯಾಗದ ಸಾಧನಗಳು ಪತನಗೊಂಡಲ್ಲಿ ಎಚ್ಚರ ವಹಿಸುವಂತೆ ಸೂಚಿಸಲಾಗಿದೆ. ಕುವೈತ್‌ನ ವಾಯುಪ್ರದೇಶವನ್ನು ಫೆಬ್ರುವರಿ 28ರಿಂದಲೇ ಮುಚ್ಚಲಾಗಿದ್ದು, ಹಲವು ಸಿಬಿಎಸ್‌ಇ ಪರೀಕ್ಷೆಗಳನ್ನು ಕೂಡಾ ರದ್ದುಪಡಿಸಿದ ಬೆನ್ನಲ್ಲೇ ಈ ಸಲಹೆಗಳನ್ನು ನೀಡಲಾಗಿದೆ.


Spread the love
Share:

administrator

Leave a Reply

Your email address will not be published. Required fields are marked *