Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಕತಾರ್ ಏರ್‌ವೇಸ್ ದುರಂತ: ಸಸ್ಯಾಹಾರಿ ಆಹಾರ ಸಿಗದೆ, ಮಾಂಸಾಹಾರ ಸೇವಿಸಲು ಯತ್ನಿಸಿ ಪ್ರಯಾಣಿಕ ಸಾವು

Spread the love

ವಿಮಾನದಲ್ಲಿ ಮೊದಲೇ ಆರ್ಡರ್ ಮಾಡಿದ್ರು ಸಿಗದ ಸಸ್ಯಹಾರ

ಲಾಸ್ ಏಂಜಲೀಸ್‌: ಸಸ್ಯಹಾರಿಗಳಲ್ಲಿ ಕೆಲವರಿಗೆ ಮಾಂಸಹಾರದ ವಾಸನೆ ಕೇಳಿದರೆ ಆಗುವುದಿಲ್ಲ. ಆದರೆ ಕೆಲವರು ಮಾಂಸಹಾರಿಗಳ ಜೊತೆಗೆ ಕುಳಿತು ಆಹಾರ ಸೇವಿಸುತ್ತಾರೆ. ಆದರೆ ಇಲ್ಲೊಂದು ಕಡೆ ಸಸ್ಯಹಾರಿ ವ್ಯಕ್ತಿಗೆ ವಿಮಾನದಲ್ಲಿ ಸಸ್ಯಹಾರ ಸಿಗದ ಕಾರಣ ಮಾಂಸಹಾರ ಸೇವಿಸುವಂತೆ ಹೇಳಿದ್ದರಿಂದ ಅವರು ಆಘಾತಗೊಂಡು ಸಾವನ್ನಪ್ಪಿದ್ದ ಘಟನೆ ಕತಾರ್ ಏರ್‌ವೇಸ್‌ನಲ್ಲಿ ನಡೆದಿದ್ದು, ತಡವಾಗಿ ಪ್ರಕರಣ ಬೆಳಕಿಗೆ ಬಂದಿದೆ.

ಮಾಂಸಹಾರ ತಿನ್ನುವಂತೆ ಒತ್ತಾಯ: ಸಸ್ಯಹಾರಿ ಪ್ರಯಾಣಿಕ ಸಾವು

85 ವರ್ಷದ ಸಸ್ಯಹಾರಿ ಪ್ರಯಾಣಿಕ, ವೈದ್ಯ ಡಾ. ಅಶೋಕ್ ಜಯವೀರಾ ವಿಮಾನದಲ್ಲೇ ಸಾವನ್ನಪ್ಪಿದವರು. ಡಾ ಅಶೋಕ ಜಯವೀರಾ ಅವರು ದಕ್ಷಿಣ ಕ್ಯಾಲಿಫೋರ್ನಿಯಾದ ನಿವೃತ್ತ ಹೃದಯತಜ್ಞರಾಗಿದ್ದರು. ಇವರು ತಮ್ಮ 15.5 ಗಂಟೆಗಳ ವಿಮಾನ ಪ್ರಯಾಣದಲ್ಲಿ ಸಸ್ಯಹಾರಿ ಆಹಾರವನ್ನು ಮೊದಲೇ ಆರ್ಡರ್ ಮಾಡಿದ್ದರೂ, ಆದರೂ ಅವರಿಗೆ ವಿಮಾನದಲ್ಲಿ ಸಸ್ಯಹಾರಿ ಆಹಾರ ಸಿಗಲಿಲ್ಲ, ಈ ಹಿನ್ನೆಲೆಯಲ್ಲಿ ವಿಮಾನದ ಸಿಬ್ಬಂದಿ ಅವರಿಗೆ ಮಾಂಸಹಾರಿ ಆಹಾರದ ಸುತ್ತಲಿರುವ ಆಹಾರವನ್ನು ಸೇವಿಸುವಂತೆ ಸೂಚಿಸಿದರು. ಸಿಬ್ಬಂದಿಯ ಸಲಹೆಯಂತೆ ಅವರು ಮಾಂಸಾಹಾರದ ಸುತ್ತಲಿದ್ದ ಆಹಾರವನ್ನು ಸೇವಿಸಲು ಮುಂದಾಗಿದ್ದು, ಈ ವೇಳೆ ಅವರಿಗೆ ಉಸಿರುಕಟ್ಟಿ ಅವರು ಸಾವನ್ನಪ್ಪಿದ್ದಾರೆ.

ಕೊಲಂಬೋಗೆ ಹೋಗುತ್ತಿದ್ದ ಕತಾರ್ ಏರ್‌ವೇಸ್‌ನಲ್ಲಿ ದುರಂತ

2023ರ ಜೂನ್ 30ರಂದು ಲಾಸ್‌ ಏಂಜಲೀಸ್‌ನಿಂದ ಶ್ರೀಲಂಕಾದ ಕೊಲಂಬೋಗೆ ಹೋಗುತ್ತಿದ್ದ ಕತಾರ್ ಏರ್‌ವೇಸ್‌ನಲ್ಲಿ ಈ ದುರಂತ ನಡೆದಿದೆ. ಹದಿನೈದುವರೆ ಗಂಟೆಗಳ ಪ್ರಯಾಣದ ಅವಧಿಯಲ್ಲಿ ತಿನ್ನುವುದಕ್ಕಾಗಿ ಅಶೋಕ್ ಜಯವೀರಾ ಅವರು ಸಸ್ಯಹಾರಿ ಆಹಾರವನ್ನೇ ಆರ್ಡರ್ ಮಾಡಿದ್ದರು. ಆದರೆ ವಿಮಾನದಲ್ಲಿ ಅವರಿಗೆ ಸಸ್ಯಹಾರಿ ಆಹಾರ ಲಭ್ಯವಿಲ್ಲ ಎಂದು ಹೇಳಲಾಯ್ತು. ಅಲ್ಲದೇ ಅವರಿಗೆ ವಿಮಾನದಲ್ಲಿ ನೀಡುವ ಮಾಂಸಹಾರಿ ಆಹಾರವನ್ನು ನೀಡಿ ಮಾಂಸವನ್ನು ಹೊರತುಪಡಿಸಿ ಪಕ್ಕದಲ್ಲಿರುವ ಆಹಾರವನ್ನು ಸೇವಿಸುವಂತೆ ಹೇಳಲಾಯ್ತು.

ಈ ವೇಳೆ ಅಶೋಕ್ ಜಯವೀರಾ ಅವರು ಮಾಂಸಹಾರಿ ಆಹಾರವನ್ನು ಸುತ್ತಲಿಂದ ತಿನ್ನಲು ಪ್ರಯತ್ನಿಸಿದಾಗ ಮಾಂಸಹಾರದ ಅಭ್ಯಾಸವಿಲ್ಲದ ಅವರಿಗೆ ಉಸಿರುಕಟ್ಟಲು ಆರಂಭಿಸಿದೆ. ಕೂಡಲೇ ವಿಮಾನದ ಸಿಬ್ಬಂದಿ ಅವರ ಸಹಾಯಕ್ಕೆ ಧಾವಿಸಿ ಬಂದಿದ್ದಾರೆ. ವಿಮಾನದಲ್ಲಿ ಮೆಡ್‌ಏರ್‌ನ(MedAire)ವೈದ್ಯಕೀಯ ಸಲಹೆಗಾರರನ್ನು ಸಂಪರ್ಕಿಸಲಾಯಿತು, ಆದರೆ ಜಯವೀರ ಅವರ ಸ್ಥಿತಿ ಹದಗೆಟ್ಟಿತು. ನಂತರ ವಿಮಾನವನ್ನು ಅಂತಿಮವಾಗಿ ಸ್ಕಾಟ್ಲೆಂಡ್‌ನ ಎಡಿನ್‌ಬರ್ಗ್‌ನಲ್ಲಿ ತುರ್ತಾಗಿ ಇಳಿಸಲಾಯ್ತು. ಕೂಡಲೇ ಜಯವೀರ ಅವರನ್ನು ಆಸ್ಪತ್ರೆಗೆ ಸಾಗಿಸಲಾಯಿತು ಮತ್ತು ಆಗಸ್ಟ್ 3, 2023 ರಂದು ಅವರು ಸಾವನ್ನಪ್ಪಿದರು ಎಂದು ಘೋಷಿಸಲಾಯಿತು. ಅವರು ಆಸ್ಪಿರೇಷನ್ ನ್ಯುಮೋನಿಯಾದಿಂದ ನಿಧನರಾದರು, ಇದು ಆಕಸ್ಮಿಕವಾಗಿ ಆಹಾರ ಅಥವಾ ದ್ರವವನ್ನು ಉಸಿರಾಡುವುದರಿಂದ ಉಂಟಾದ ಶ್ವಾಸಕೋಶದ ಸೋಂಕು ಎಂದು ಮರಣೋತ್ತರ ಪರೀಕ್ಷೆಯಿಂದ ತಿಳಿದು ಬಂದಿದೆ.

ಘಟನೆಯ ಬಳಿಕ ಅವರ ಮಗ ಸೂರ್ಯ ಜಯವೀರ ಅವರು ಕತಾರ್ ಏರ್‌ವೇಸ್ ವಿರುದ್ಧ ತಮ್ಮ ತಂದೆಯ ಸಾವಿಗೆ ಸಂಬಂಧಿಸಿದಂತೆ ಕೇಸ್ ದಾಖಲಿಸಿದರು. ತಮ್ಮ ತಂದೆಗೆ ಊಟದ ಸೇವೆ ಮತ್ತು ವೈದ್ಯಕೀಯ ಪ್ರತಿಕ್ರಿಯೆಯಲ್ಲಿ ನಿರ್ಲಕ್ಷ್ಯ ಮಾಡಲಾಯ್ತು ಎಂದು ಆರೋಪಿಸಿದರು. ವಿಮಾನಯಾನ ಸಂಸ್ಥೆಯು ಮೊದಲೇ ಆರ್ಡರ್ ಮಾಡಿದ ಸಸ್ಯಾಹಾರಿ ಊಟವನ್ನು ಒದಗಿಸಲು ವಿಫಲವಾಗಿದೆ ಮತ್ತು ಜಯವೀರ ಅವರ ವೈದ್ಯಕೀಯ ತುರ್ತುಸ್ಥಿತಿಗೆ ಸೂಕ್ತವಾಗಿ ಸ್ಪಂದಿಸಲಿಲ್ಲ ಎಂದು ಮೊಕದ್ದಮೆಯಲ್ಲಿ ಹೇಳಲಾಗಿದೆ. ನಿರ್ಲಕ್ಷ್ಯದಿಂದ ಸಂಭವಿಸಿದ ಸಾವಿಗೆ ಶಾಸನಬದ್ಧ ಕನಿಷ್ಠ ಮೊತ್ತವಾದ $128,821 (1,14,36,036 ಭಾರತೀಯ ರೂಪಾಯಿ) ಡಾಲರ್‌ ಹಣವನ್ನು ಪಾವತಿ ಮಾಡಬೇಕು ಎಂದು ಅವರು ಆಗ್ರಹಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *