ಪುತ್ತೂರು ನಗರಸಭೆ ಸದಸ್ಯ ರಮೇಶ್ ರೈ ಪಾಣೆಮಂಗಳೂರು ಸೇತುವೆ ಬಳಿ ನಾಪತ್ತೆ

ಬಂಟ್ವಾಳ : ಪಾಣೆಮಂಗಳೂರು ನೇತ್ರಾವತಿ ಸೇತುವೆ ಬಳಿ ಬೈಕ್ ಮತ್ತು ಮೊಬೈಲ್ ಇಟ್ಟು ಪುತ್ತೂರು ನಗರಸಭೆ ಸದಸ್ಯ ನಾಪತ್ತೆಯಾಗಿರುವ ಘಟನೆ ನಡೆದಿದೆ. ನಾಪತ್ತೆಯಾಗಿರುವವರನ್ನು ಪುತ್ತೂರು ನಗರಸಭೆಯ ನೆಲ್ಲಿಕಟ್ಟೆ ವಾರ್ಡ್ ಸದಸ್ಯ ರಮೇಶ್ ರೈ ಎಂದು ಗುರುತಿಸಲಾಗಿದೆ.

ಪ್ರಾಥಮಿಕ ತನಿಖೆಯಲ್ಲಿ ಇದು ಪುತ್ತೂರು ನಗರ ಸಭಾ ಸದಸ್ಯ ರಮೇಶ್ ರೈ ನೆಲ್ಲಿಕಟ್ಟೆ ಅವರಿಗೆ ಸೊತ್ತುಗಳು ಎಂದು ಗೊತ್ತಾಗಿದೆ. ರಮೇಶ್ ರೈ, ಇತ್ತೀಚಿಗೆ ಉಪ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿ ಸ್ಪರ್ಧಿಸಿ ಆಯ್ಕೆಯಾಗಿದ್ದರು. ಇಂದು ಬೆಳಗ್ಗೆ ಸುಮಾರು 11 ಗಂಟೆಯಿಂದ ಬೈಕ್ ಹಾಗೂ ಸೊತ್ತುಗಳು ಇಲ್ಲಿ ಅನಾಥವಾಗಿ ಕಂಡು ಬಂದಿವೆ ಎಂದು ಸ್ಥಳೀಯರು ಪೋಲೀಸರಿಗೆ ತಿಳಿಸಿದ್ದಾರೆ.