Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪುತ್ತೂರು: ಸವಣೂರು–ಎಡಮಂಗಲದಲ್ಲಿ ಭಾರೀ ಬಿರುಗಾಳಿ, ಅಡಿಕೆ ತೋಟಗಳು ನಾಶ

Spread the love

ಪುತ್ತೂರು : ಮುಂಜಾನೆ ವೇಳೆ ಏಕಾಏಕಿ ಬೀಸಿದ ಭಾರೀ ಬಿರುಗಾಳಿಗೆ ಕಡಬ ತಾಲೂಕಿನ ಸವಣೂರು ಎಡಮಂಗಲ ದಲ್ಲಿ ಅಡಿಕೆ ತೋಟಗಳು ಸಂಪೂರ್ಣ ನಾಶವಾದ ಘಟನೆ ನಡೆದಿದೆ.

ಮುಂಜಾನೆ ವೇಳೆ ಏಕಾಏಕಿ ಬಿರುಗಾಳಿ ಬೀಸಿದ್ದು, ಸವಣೂರು ಮೆಸ್ಕಾಂ ಉಪವಿಭಾಗದ ಸವಣೂರು ಗ್ರಾಮದ ಕೆಡೆಂಜಿ, ಆರೇಲ್ತಡಿ, ಕುದ್ಮನಮಜಲು ಪಟ್ಟೆ ಮಡಕೆ, ಕುದ್ಮಾರು ಗ್ರಾಮದ ಅನ್ಯಾಡಿ ಪರಿಸರದಲ್ಲಿ ಮರ ಬಿದ್ದು ಸುಮಾರು ವಿದ್ಯುತ್ ಕಂಬಗಳು ಮುರಿದು ವಿದ್ಯುತ್ ಸಂಪರ್ಕ ಕಡಿತವಾಗಿದೆ.

ಆರೇಲ್ತಡಿ ಕೊರಗಜ್ಜನ ಕಟ್ಟೆ, ದೈವಸ್ಥಾನದ ಪ್ರದೇಶ, ಹಲವರ ವಾಸದ ಮನೆಗಳು, ಅಡಿಕೆ ತೋಟ,ತೆಂಗಿನ‌ ಮರಗಳು ಸೇರಿದಂತೆ ಲಕ್ಷಾಂತರ ನಷ್ಠ ಉಂಟಾಗಿದೆ.

 ಎಡಮಂಗಲ ಗ್ರಾಮದ ಎಡಮಂಗಲ ಪೇಟೆ ಅಲಕ್ಕೆ, ಮುಳಿಯ, ಪಾದೆ ಸೇರಿದಂತೆ ವಿವಿಧೆಡೆ ಮನೆಗಳ ಮೇಲ್ಛಾವಣಿ, ಕೃಷಿ ತೋಟಗಳಿಗೆ ಅಪಾರ ಹಾನಿ ಸಂಭವಿಸಿದೆ. ಬಿರುಗಾಳಿಯ ಭೀಕರತೆಗೆ ಎಡಮಂಗಲ ಗ್ರಾಮ ಪಂಚಾಯತ್ ಮೇಲ್ಛಾವಣಿ ಶೀಟು ಸುಮಾರು 200 ಮೀಟರ್ ದೂರಕ್ಕೆ ಹಾರಿ ಬಿದ್ದಿದೆ. ಹಾನಿ ಸ್ಥಳಗಳಿಗೆ ಗ್ರಾಮ ಪಂಚಾಯತ್ ಚುನಾಯಿತರು, ಅಧಿಕಾರಿಗಳು, ಮತ್ತಿತರರು ಭೇಟಿ ನೀಡಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *