ಪುತ್ತೂರು: ಸಹಪಾಠಿ ಜೊತೆಗಿನ ಪ್ರಕರಣ, ಆರೋಪಿ, ಸಂತ್ರಸ್ತೆ, ಮಗುವಿನ ಡಿಎನ್‌ಎ ಪರೀಕ್ಷೆ

ಪುತ್ತೂರು : ಸಹಪಾಠಿ ಯುವತಿಯನ್ನು ಲೈಂಗಿಕವಾಗಿ ಬಳಸಿ ಬಳಿಕ ಮಗು ಕರುಣಿಸಿ ಬಳಿಕ ಮದುವೆಯಾಗಲು ನಿರಾಕರಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಸಂತ್ರಸ್ತೆ, ಮಗು ಮತ್ತು ಆರೋಪಿ ಮೂವರ ಡಿಎನ್ಎ ಪರೀಕ್ಷೆ ನಡೆಸಲಾಗಿದೆ.

ಬಿಜೆಪಿ ಮುಖಂಡನ ಮಗ ಶ್ರೀಕೃಷ್ಣ ಜೆ.ರಾವ್ ತನ್ನ ಸಹಪಾಠಿ ಯುವತಿಯನ್ನು ಲೈಂಗಿಕವಾಗಿ ಬಳಸಿಕೊಂಡು ಬಳಿಕ ಆಕೆ ಗರ್ಭವತಿಯಾದ ಬಳಿಕ ಮದುವೆಯಾಗಲು ನಿರಾಕರಿಸಿದ್ದ, ಇದೀಗ ಯುವತ ಮಗುವಿಗೆ ಜನ್ಮ ನೀಡಿದ್ದು, ಆರೋಪಿ ಕೃಷ್ಣ ಜೈಲಿನಲ್ಲಿದ್ದಾನೆ. ಇದೀಗ ಮಗುವಿಗೆ ಮೂರು ತಿಂಗಳಾದ ಹಿನ್ನಲೆ ಸಂತ್ರಸ್ತೆ, ಮಗು ಮತ್ತು ಆರೋಪಿ ಮೂವರ ಡಿಎನ್ಎ ಪರೀಕ್ಷೆ ನಡೆಸಲಾಗಿದೆ. ನ್ಯಾಯಾಧೀಶರ ಮುಂದೆಯೇ ಮೂವರ ರಕ್ತದ ಮಾದರಿ ಸಂಗ್ರಹಿಸುವ ಪ್ರಕ್ರಿಯೆ ನಡೆದಿದ್ದು, ಮೂವರ ರಕ್ತದ ಮಾದರಿಯನ್ನು ಬೆಂಗಳೂರಿನ ಪರಿಕ್ಷಾಲಯಕ್ಕೆ ಇಂದು ಸಂಜೆಯೇ ಪೊಲೀಸರು ಕಳುಹಿಸಲಿದ್ದಾರೆ.
ವಿವಿಧ ಸಂಘಟನೆಗಳ ಮುಖಂಡರು ರಾಜಕೀಯ ನಾಯಕರು ಯುವಕನ ಮನವೊಲಿಸುವ ಕೆಲಸ ಮಾಡುತ್ತಿದ್ದರು ಆರೋಪಿ ಯುವಕ ಮಾತ್ರ ಮದುವೆಯಾಗುವುದಿಲ್ಲ ಎಂದು ಹೇಳಿದ್ದಾನೆ ಎಂದು ತಿಳಿದು ಬಂದಿದೆ. ಇದೀಗ ಡಿಎನ್ ಎ ಪರೀಕ್ಷೆಯ ಮೂಲಕ ಎಲ್ಲಾ ಪ್ರಶ್ನೆಗಳಿಗೆ ಉತ್ತರ ಸಿಗಲಿದೆ.