Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪುತ್ತೂರು ಲಂಚ ಪ್ರಕರಣದಲ್ಲಿ ತಹಶೀಲ್ದಾರ್ ನಾಪತ್ತೆ – ಲೋಕಾಯುಕ್ತ ನೋಟಿಸ್ ಜಾರಿ

Spread the love

ಪುತ್ತೂರು : ಭೂ ದಾಖಲೆ ಮಾಡಿಕೊಡಲು ಲಂಚ ಕೇಳಿ ಲೋಕಾಯುಕ್ತ ಪೊಲೀಸರ ಕೈಗೆ ಪುತ್ತೂರು ತಹಶಿಲ್ದಾರ್‌ ಕಚೇರಿಯ ಪ್ರಥಮ ದರ್ಜೆ ಸಹಾಯಕ ಸುನಿಲ್‌ ಸಿಕ್ಕಿಹಾಕಿಕೊಂಡಿದ್ದ, ಈ ವೇಳೆ ಆತ ಪುತ್ತೂರು ತಹಶಿಲ್ದಾರ್ ಗೂ ಲಂಚದ ಹಣ ನೀಡಬೇಕು ಎಂದು ಹೇಳಿದ್ದ, ಇದರಿಂದಾಗಿ ಲೋಕಾಯುಕ್ತ ಪೊಲೀಸರು ಪುತ್ತೂರು ತಹಶಿಲ್ದಾರ್ ಎಸ್.ಬಿ. ಕೂಡಲಗಿ ಅವರ ವಿಚಾರಣೆಗೆ ಮುಂದಾಗಿದ್ದರು, ಆದರೆ ತಹಶಿಲ್ದಾರ್ ಕೈಗೆ ಸಿಗದೆ ನಾಪತ್ತೆಯಾಗಿದ್ದರು.

ಇದೀಗ ಮಂಗಳೂರು ಲೋಕಾಯುಕ್ತ ಪೊಲೀಸ್ ಕಚೇರಿಯಲ್ಲಿ ಸೆಪ್ಟೆಂಬರ್ 1ರಂದು ವಿಚಾರಣೆಗೆ ಬರುವಂತೆ ಪುತ್ತೂರು ತಹಶೀಲ್ದಾರ್‌ ಎಸ್.ಬಿ. ಕೂಡಲಗಿಗೆ ನೋಟಿಸ್ ನೀಡಲಾಗಿದೆ. ತಹಶೀಲ್ದಾರ್ ಕಚೇರಿಗೂ ಗೈರುಹಾಜರಾಗಿದ್ದು, ತಲೆಮರೆಸಿಕೊಂಡಿದ್ದಾರೆ. ಅಕ್ರಮ– ಸಕ್ರಮ ಜಮೀನು ಪರಭಾರೆಗೆ ಎನ್ಒಸಿ ನೀಡಲು ಲಂಚ ಪಡೆದಿದ್ದ ಪುತ್ತೂರು ತಾಲ್ಲೂಕು ಕಚೇರಿ ಭೂಸುಧಾರಣೆ ಶಾಖೆ ಕೇಸ್ ವರ್ಕರ್ ಸುನಿಲ್‌ರನ್ನು ಲೋಕಾಯುಕ್ತ ಪೊಲೀಸರು ಈಚೆಗೆ ಬಂಧಿಸಿದ್ದರು. ಆ ನಂತರ ತಹಶೀಲ್ದಾರ್ ತಲೆಮರೆಸಿಕೊಂಡಿದ್ದಾರೆ.

ಎನ್‌ಒಸಿಗೆ ತಹಶೀಲ್ದಾರ್‌ ಸಹಿ ಬಾಕಿ ಇತ್ತು. ಸಹಿ ಹಾಕಲು ತಹಶೀಲ್ದಾರ್‌ಗೆ ₹10 ಸಾವಿರ ಹಾಗೂ ನನಗೂ ಹಣ ಕೊಡಬೇಕು’ ಎಂದು ಸುನಿಲ್ ಹೇಳಿದ್ದರು. ಗುರುವಾರ ಅಜಿತ್ ಎಂಬುವರಿಂದ ₹12 ಸಾವಿರ ಲಂಚ ಪಡೆಯುವಾಗ ಸುನಿಲ್‌ರನ್ನು ಬಂಧಿಸಲಾಗಿತ್ತು. ತಹಶೀಲ್ದಾರ್‌ಗೆ ರಜೆ ಪಡೆದಿಲ್ಲ. ರಜೆ ಮಂಜೂರಾತಿಗೆ ಅರ್ಜಿ ಸಲ್ಲಿಸಿರುವ ವಿಚಾರ ನನ್ನ ಗಮನಕ್ಕೆ ಬಂದಿಲ್ಲ’ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ತಿಳಿಸಿದ್ದಾರೆ.


Spread the love
Share:

administrator

Leave a Reply

Your email address will not be published. Required fields are marked *