Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಪುಷ್ಪ 2: ಕಾಲ್ತುಳಿತ ದುರಂತ – ಬಾಲಕನ ಸ್ಥಿತಿ ಗಂಭೀರ

Spread the love

Pushpa 2 : ಅಲ್ಲು ಅರ್ಜುನ್ ನಟನೆಯ ಸೂಪರ್​ ಹಿಟ್​ ಸಿನಿಮಾ ಪುಷ್ಪ- 2 ಬಿಡುಗಡೆಯ ಸಂದರ್ಭದಲ್ಲಿ ಆಯೋಜಿಸಲಾದ ಪ್ರೀಮಿಯರ್ ಶೋ ವೇಳೆ ಕಾಲ್ತುಳಿತ ಸಂಭವಿಸಿದ್ದು ಎಲ್ಲರಿಗೂ ತಿಳಿದೇ ಇದೆ. ಈ ದುರಂತ ಘಟನೆಯಲ್ಲಿ ಮಹಿಳೆಯೊಬ್ಬಳು ಮೃತಪಟ್ಟಳು. ಅಲ್ಲದೆ, ಆಕೆಯ ಮಗ ಶ್ರೀ ತೇಜ್ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾದರು. ಆ ಬಾಲಕನಿಗೆ ಆರಂಭದಲ್ಲಿ ಬೇರೆ ಬೇರೆ ಆಸ್ಪತ್ರೆಗಳಲ್ಲಿ ಚಿಕಿತ್ಸೆ ನೀಡಲಾಯಿತು. ಆದರೆ, ಅಂತಿಮವಾಗಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಿದ್ದು, ಇಂದಿಗೆ 100 ದಿನವಾಗಿದೆ. ಈ ಸಂದರ್ಭದಲ್ಲಿ, ಅಲ್ಲಿನ ವೈದ್ಯರು ಬಾಲಕನ ಆರೋಗ್ಯ ಸ್ಥಿತಿಯ ಬಗ್ಗೆ ಮಾಹಿತಿ ನೀಡಿದರು. ಆ ಬಾಲಕನಿಗೆ ಇನ್ನೂ ನರವೈಜ್ಞಾನಿಕ ಸಮಸ್ಯೆಗಳಿವೆ ಎಂದು ಹೇಳಿದ್ದಾರೆ.

ಆ ಬಾಲಕನಿಗೆ ಇನ್ನೂ ಸ್ಪರ್ಶದ ಅನುಭವ ಆಗುತ್ತಿಲ್ಲ. ಯಾರಾದರೂ ಮುಟ್ಟಿದರೆ ಅದಕ್ಕೆ ಪ್ರತಿಕ್ರಿಯಿಸುತ್ತಿಲ್ಲ. ಅಲ್ಲದೆ, ಆತನಿಗೆ ಯಾರನ್ನೂ ಗುರುತಿಸಲು ಸಾಧ್ಯವಾಗುತ್ತಿಲ್ಲ. ಅದೇ ರೀತಿ, ನಾವು ಮಾತನಾಡುವ ಪದಗಳನ್ನು ಸಹ ಅರ್ಥಮಾಡಿಕೊಳ್ಳಲು ಆತನಿಗೆ ಸಾಧ್ಯವಾಗುತ್ತಿಲ್ಲ ಎಂದು ವೈದ್ಯರು ಹೇಳಿದ್ದಾರೆ.

ಈ ವಿಚಾರವನ್ನು ಕೇಳಿ ಬಾಲಕನ ತಂದೆ ಮತ್ತು ಕುಟುಂಬಸ್ಥರು ದುಃಖದಲ್ಲಿ ಮುಳುಗಿದ್ದಾರೆ. ಮಗನ ಚೇತರಿಕೆಗಾಗಿ ಎಲ್ಲಾ ದೇವರ ಬಳಿ ಪ್ರಾರ್ಥನೆ ಸಲ್ಲಿಸುತ್ತಿದ್ದಾರೆ. ಇನ್ನು ಆ ಬಾಲಕನ ಆಸ್ಪತ್ರೆಯ ವೆಚ್ಚವನ್ನು ಅಲ್ಲು ಅರ್ಜುನ್ ತಂಡವು ಭರಿಸುತ್ತಿದೆ ಎಂದು ಆತನ ತಂದೆ ಭಾಸ್ಕರ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.

ಅಂದಹಾಗೆ ಅಲ್ಲು ಅರ್ಜುನ್ ನಾಯಕನಾಗಿ ನಟಿಸಿದ ಪುಷ್ಪ ಭಾಗ 2, 1800 ಕೋಟಿಗೂ ಹೆಚ್ಚು ಸಂಗ್ರಹದೊಂದಿಗೆ ಸೂಪರ್​ ಹಿಟ್ ಆಯಿತು. ಈ ಸಿನಿಮಾ ಟಾಲಿವುಡ್‌ನಲ್ಲಿ ಮಾತ್ರವಲ್ಲದೆ ಬಾಲಿವುಡ್‌ನಲ್ಲೂ ಅನೇಕ ದಾಖಲೆಗಳನ್ನು ಮುರಿಯಿತು.

ಅಂದು ನಡೆದಿದ್ದೇನು?

ಡಿಸೆಂಬರ್​ 4ರಂದು ಪುಷ್ಪ 2 ಸಿನಿಮಾದ ಪ್ರೀಮಿಯರ್​ ಶೋ ಆಯೋಜಿಸಲಾಗಿತ್ತು. ಈ ವೇಳೆ ಸಂಧ್ಯಾ ಚಿತ್ರಮಂದಿರಕ್ಕೆ ಅಲ್ಲು ಅರ್ಜುನ್​ ಭೇಟಿ ನೀಡಿದರು. ಹೀಗಾಗಿ ಅವರನ್ನು ನೋಡಲು ಅಭಿಮಾನಿಗಳು ಕಿಕ್ಕಿರಿದು ಸೇರಿದ್ದರಿಂದ ಕಾಲ್ತುಳಿತ ಸಂಭವಿಸಿತು. ಈ ವೇಳೆ ಕುಟುಂಬ ಸಮೇತ ಸಿನಿಮಾ ವೀಕ್ಷಿಸಲು ಬಂದಿದ್ದ ರೇವತಿ ಕಾಲ್ತುಳಿತಕ್ಕೆ ಸಿಲುಕಿ ಮೃತಪಟ್ಟರು. ಅವರ ಮಗ ಶ್ರೀತೇಜ್​ ಗಂಭೀರ ಗಾಯಗೊಂಡರು. ಚಿತ್ರಮಂದಿರಕ್ಕೆ ಭೇಟಿ ನೀಡುವ ವೇಳೆ ಅಲ್ಲು ಅರ್ಜುನ್​ ಅವರು ಯಾವುದೇ ಮುನ್ನೆಚ್ಚರಿಕೆ ತೆಗೆದುಕೊಂಡಿಲ್ಲ ಎಂಬ ಆರೋಪದ ಮೇಲೆ ಅವರನ್ನು ಬಂಧಿಸಲಾಗಿತ್ತು. ಹೈದರಬಾರದ್​​ ಪೊಲೀಸರು ನೇರವಾಗಿ ಅಲ್ಲು ಅರ್ಜುನ್​ ಮನೆಗೆ ಹೋಗಿ ಬಂಧನ ಮಾಡಿದ್ದರು. ಇದಕ್ಕೆ ಸಂಬಂಧಿಸಿದ ವಿಡಿಯೋಗಳು ಸಹ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಬಂಧನದ ಬಳಿಕ ಅಧೀನ ನ್ಯಾಯಾಲಯ ಅಲ್ಲು ಅರ್ಜುನ್​ಗೆ ನ್ಯಾಯಾಂಗ ಬಂಧನ ವಿಧಿಸಿತ್ತು. ಆದರೆ, ಅಲ್ಲು ಅರ್ಜುನ್​ ಫ್ಯಾಮಿಲಿ ಹೈಕೋರ್ಟ್​ ಮೆಟ್ಟಿಲೇರಿ ಜಾಮೀನು ಪಡೆದುಕೊಂಡಿತು. ಆದಾಗ್ಯೂ ನಮಗೆ ಯಾವುದೇ ಆರ್ಡರ್​ ಬಂದಿಲ್ಲ ಎಂದು ಹೇಳಿ ಅಲ್ಲು ಅರ್ಜುನ್​ ಅವರನ್ನು ಪೊಲೀಸರು ಒಂದು ರಾತ್ರಿ ಜೈಲಿನಲ್ಲೇ ಇರಿಸಿಕೊಂಡು ಮಾರನೇ ದಿನ ಬಿಡುಗಡೆ ಮಾಡಿದರು. ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಂಡು ಪರ-ವಿರೋಧ ಚರ್ಚೆಯನ್ನು ಹುಟ್ಟುಹಾಕಿತ್ತು.


Spread the love
Share:

administrator

Leave a Reply

Your email address will not be published. Required fields are marked *