ರಾಯಚೂರಿನಲ್ಲಿ ಡಿಜೆ ನಿಷೇಧದ ನಡುವೆಯೂ ಪಿಎಸ್‌ಐ ಡಿಜೆ ಹಾಡಿಗೆ ನೃತ್ಯ: ವಿಡಿಯೋ ವೈರಲ್

ರಾಯಚೂರು: ಗಣೇಶ ವಿಸರ್ಜನೆಯ ಸಂದರ್ಭದಲ್ಲಿ ಡಿ.ಜೆ ಬಳಸುವುದರಿಂದ ಶಬ್ದ ಮಾಲಿನ್ಯ ಉಂಟಾಗುತ್ತದೆ ಎಂದು ಜಿಲ್ಲಾ ಪೊಲೀಸ್ ಇಲಾಖೆ ಡಿಜೆಯನ್ನು ನಿಷೇಧ ಮಾಡಿದೆ. ಆದರೆ, ಆದೇಶ ಪಾಲನೆ ಮಾಡಬೇಕಾದ ಪಿಎಸ್‌ಐ ಅವರೇ ಡಿಜೆ ಹಾಡಿಗೆ ಕುಣಿದಿದ್ದಾರೆ ಎಂಬ ವೀಡಿಯೊ ವೈರಲ್ ಆಗಿದೆ.

ರಾಯಚೂರು ನಗರ ಸೇರಿ ಜಿಲ್ಲೆಯಾದ್ಯಂತ ರಾತ್ರಿ ಶುರುವಾಗ ವಿಸರ್ಜನಾ ಮೆರವಣಿಗೆ ಮಾರನೇ ದಿನ ಮಧ್ಯಾಹ್ನದವರೆಗೆ ನಡೆಯುತ್ತದೆ. ರಾತ್ರಿ ವಿಸರ್ಜಿಸಬೇಕಾದ ಗಣೇಶ ವಿಗ್ರಹಗಳನ್ನು ಬೆಳಗಿನ ಜಾವ, ಮಧ್ಯಾಹ್ನದ ವೇಳೆ ವಿಸರ್ಜನೆ ಮಾಡಲಾಗುತ್ತದೆ. ಹರಿಜನವಾಡ ಬಡಾವಣೆಯ ಗಣೇಶ 9ನೇ ದಿನಕ್ಕೆ ವಿಸರ್ಜನೆಯಾಗಬೇಕಿದ್ದು, ಆದರೆ ವಿಸರ್ಜನೆಗೆ ಸೂಚಿಸಿದ ಖಾಸಭಾವಿಯಿಂದ ತೀನ್ ಖಂದಿಲ್ ವರೆಗೆ ಸರಿತಿ ಸಾಲು ಇರುವುದರಿಂದ 9ನೇ ದಿನದ ಗಣೇಶ 10ನೇ ದಿನ ವಿಸರ್ಜನೆ ಮಾಡಲಾಯಿತು.