ಬೆಂಗಳೂರಿನಲ್ಲಿ ಪಿಎಸ್ಐ ಲೋಕಾಯುಕ್ತ ಬಲೆಗೆ: ₹1.25 ಲಕ್ಷ ಲಂಚ ಪಡೆಯುವಾಗ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದ ಅಧಿಕಾರಿ!

ಬೆಂಗಳೂರು : ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ (Bengaluru) ಭ್ರಷ್ಟ ಪೊಲೀಸ್ ಅಧಿಕಾರಿಯೊಬ್ಬರು ಲೋಕಾಯುಕ್ತ (lokayukta) ಬಲೆಗೆ ಬಿದ್ದಿದ್ದು, ಕೇಸ್ ವೊಂದರಲ್ಲಿ ಬಿ ರಿಪೋರ್ಟ್ ಹಾಕಲು ಹಣ ಪಡೆಯುವಾಗ ಅಧಿಕಾರಿಗಳ ಕೈಗೆ ಸಿಕ್ಕಿ ಬಿದ್ದಿದ್ದಾರೆ.

ಬೆಂಗಳೂರಿನ ಗೋವಿಂದಪುರ ಪೊಲೀಸ್ ಠಾಣೆಯ ಪಿಎಸ್ಐ ಸಾವಿತ್ರಿ ಬಾಯಿ ಎಂಬುವವರು ಕೇಸ್ ವೊಂದರಲ್ಲಿ ಬಿ ರಿಪೋರ್ಟ್ ಹಾಕುವುದಕ್ಕೆ ಮೊಹಮ್ಮದ್ ಯೂನಸ್ ಎಂಬುವವರ ಬಳಿ 1.25 ಲಕ್ಷ ಲಂಚ ನೀಡುವಂತೆ ಬೇಡಿಕೆ ಇಟ್ಟಿದ್ದರು.
ಆದರೆ ಮೊಹಮ್ಮದ್ ಯೂನಸ್ ಅವರು ಈ ಬಗ್ಗೆ ಲೋಕಾಯುಕ್ತಗೆ ದೂರು ನೀಡಿದ್ದರು. ಅದರಂತೆ ಇದೀಗ ಯೂನಸ್ ನೀಡಿರುವ ದೂರಿನ ಮೇರೆಗೆ ಸಾವಿತ್ರಿ ಬಾಯಿಯವರನ್ನು ಟ್ರ್ಯಾಪ್ ಮಾಡಲಾಗಿದೆ.
ಏನಿದು ಪ್ರಕರಣ.?
ಗೋವಿಂದಪುರ ಠಾಣೆಯಲ್ಲಿ ಕ್ರೈಂ ನಂಬರ್ 144/25ರ ಕೇಸ್ ಸಂಬಂಧಿಸಿದಂತೆ ಬಿ ರಿಪೋರ್ಟ್ ಸಲ್ಲಿಸಲು ಪಿಎಸ್ಐ ಸಾವಿತ್ರಿ ಬಾಯಿ ಅವರು ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಆದರೆ ಯೂನಸ್ ಅವರು ಈ ಬಗ್ಗೆ ಲೋಕಾಯುಕ್ತಕ್ಕೆ ದೂರು ನೀಡಿದ್ದರು. ಬಳಿಕ ಟ್ರ್ಯಾಪ್ ಮಾಡಲು ಪ್ಲಾನ್ ಮಾಡಲಾಗಿತ್ತು..
ಅದರಂತೆ ಸಾವಿತ್ರಿ ಬಾಯಿ ಅವರಿಗೆ 1.25 ಲಕ್ಷ ಹಣ ನೀಡುವ ವೇಳೆ ಅಧಿಕಾರಿಗಳು ದಾಳಿ ನಡೆಸಿ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾರೆ. ಸದ್ಯ ಲೋಕಾಯುಕ್ತ ಪೊಲೀಸರು ಸಾವಿತ್ರಿ ಬಾಯಿಯನ್ನು ಬಂಧಿಸಿದ್ದು, ವಿಚಾರಣೆ ನಡೆಸುತ್ತಿದ್ದಾರೆ.
ಇನ್ನು ಹಾಡಹಗಲೇ ಚಿನ್ನದ ಅಂಗಡಿಯಲ್ಲಿ ಮೂರು ಕೋಟಿ ರೂ.ಗಳಿಗಿಂತಲೂ ಹೆಚ್ಚು ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಇದೀಗ ಮೂವರು ಕುಖ್ಯಾತ ಅಂತಾರಾಜ್ಯ ಆರೋಪಿಗಳನ್ನು ಬಂಧಿಸಲಾಗಿದೆ.
ಈ ಸಂಬಂಧ ನಗರ ಪೋಲಿಸ್ ಆಯುಕ್ತ ಡಾ. ಶರಣಪ್ಪ ಎಸ್.ಡಿ. ಸುದ್ದಿಗೋಷ್ಠಿ ನಡೆಸಿ, ಜುಲೈ 11 ರಂದು ಹಾಡಹಗಲೇ ಕಲಬುರಗಿಯ ಸೂಪರ್ ಮಾರ್ಕೆಟ್ನ ಸರಾಫ್ ಬಜಾರ್ನಲ್ಲಿ ಮಹ್ಮದ್ ಸಬ್ಕಾತುಲ್ಲಾ ಮಲ್ಲಿಕ್ ತಂದೆ ಮಹ್ಮ ಕಿಬಾರಿಯಾ ಮುಲ್ಲಿಕ್ ಅವರ ಒಡೆತನಕ್ಕೆ ಸೇರಿದ ಚಿನ್ನದ ಅಂಗಡಿಯಲ್ಲಿ ಚಿನ್ನಾಭರಣಗಳನ್ನು ದೋಚಿ ಪರಾರಿಯಾದ ಪ್ರಕರಣ ಸಂಬಂಧ ಇದೀಗ ಮೂವರು ಕುಖ್ಯಾತ ಅಂತಾರಾಜ್ಯ ಆರೋಪಿಗಳನ್ನು ಬಂಧಿಸಲಾಗಿದೆ. ಆರೋಪಿಗಳಿಂದ ಸುಮಾರು 2.10 ಕೋಟಿ ರೂ.ಗಳ ಮೌಲ್ಯದ ಚಿನ್ನಾಭರಣಗಳು ಹಾಗೂ ಸುಮಾರು 4.80 ಲಕ್ಷ ರೂ.ಗಳ ನಗದು ಸೇರಿ ಒಟ್ಟು 2,14,80,000ರೂ.ಗಳ ಮೌಲ್ಯದ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿಸಿದರು.
ಬಂಧಿತರನ್ನು ಪಶ್ಚಿಮಬಂಗಾಳದ ಪರಗಣ ಜಿಲ್ಲೆಯ ಕನಸೋನಾ ಗ್ರಾಮದ, ಹಾಲಿ ವಸ್ತಿ ಮುಂಬಯಿಯ ಮನಕುರ್ದ ವೆಸ್ಟ್ನ ಪಿಎಂಜಿ ಕಾಲೋನಿ ನಿವಾಸಿ ಹಾಗೂ ಬಟ್ಟೆ ವ್ಯಾಪಾರಿ ಅಯೋದ್ಯಾ ಪ್ರಸಾದ್ ಚವ್ಹಾಣ್ ತಂದೆ ಸೀತಾರಾಮ್ ಚವ್ಹಾಣ್ (48), ಪಶ್ವಿಮಬಂಗಾಳ್ ಜಿಲ್ಲೆಯ ಹೂಗ್ಲಿ ಜಿಲ್ಲೆಯ ಶಥಿತನ ಗ್ರಾಮದ ಚಿನ್ನದ ವ್ಯಾಪಾರಿ ಫಾರೂಕ್ ಅಹೆಮದ್ ಮುಲ್ಲಿಕ್ ತಂದೆ ಅಬ್ದುಲ್ ವಾಹಬ್ ಮುಲ್ಲಿಕ್ (40) ಮತ್ತು ಮಹಾರಾಷ್ಟçದ ಮುಂಬಯಿ ನಗರದ ಪತ್ರಾಚಾಳ ಮಾನ್ ಕೂರ್ದನ ಟೇಲರ್ ಸೋಹೆಲ್ ಶೇಕ್ ಅಲಿಯಾಸ್ ಬಾದಶಾ ತಂದೆ ಮೊಹ್ಮದ್ ಇಸ್ಮಾಯಿಲ್ ಶೇಕ್ (30) ಎಂದು ಗುರುತಿಸಲಾಗಿದೆ ಎಂದರು.
ಪ್ರಕರಣದಲ್ಲಿ ಇನ್ನಿಬ್ಬರು ಪರಾರಿಯಾಗಿದ್ದು, ಅವರ ಪತ್ತೆ ಕಾರ್ಯ ಮುಂದುವರಿದಿದೆ. ಬಂಧಿತರಿಂದ ಸುಮಾರು 2.10 ಕೋಟಿ ರೂ.ಗಳ ಮೌಲ್ಯದ ಚಿನ್ನಾಭರಣಗಳು ಜಾಗೂ ನಗದು 4.80 ಲಕ್ಷ ರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ. ದರೋಡೆಕೋರರ ಪತ್ತೆಗಾಗಿ ಐದು ವಿಶೇಷ ತಂಡಗಳನ್ನು ರಚಿಸಲಾಗಿತ್ತು. ಹೀಗಾಗಿ ಆ ತಂಡಗಳು ಕರ್ನಾಟಕ, ಮಹಾರಾಷ್ಟ್ರ, ಉತ್ತರ ಪ್ರದೇಶ, ಪಶ್ಚಿಮಬಂಗಾಳ, ತೆಲಂಗಾಣ ರಾಜ್ಯಗಳಲ್ಲಿ ಕಾರ್ಯಾಚರಣೆ ಕೈಗೊಂಡಿತು ಎಂದು ಹೇಳಿದರು.
