Contact Information

The Saffron Productions
3rd Floor Kudvas Granduer
Surathkal Mangalore 575014

We Are Available 24/ 7. Call Now.

ಜಪಾನ್ ನಲ್ಲಿ ಹೆಚ್ಚುತ್ತಿರುವ ಮುಸ್ಲಿಮರನ್ನು ಹೊರಹಾಕಲು ಪ್ರತಿಭಟನೆ

Spread the love

ಮುಸ್ಲಿಮರ ಹೆಚ್ಚುತ್ತಿರುವ ಅಪರಾಧ ಮತ್ತು ಜನಸಂಖ್ಯೆಯಿಂದಾಗಿ ಜಪಾನ ಸಂಸ್ಕೃತಿಯ ಮೇಲೆ ಪರಿಣಾಮ ಬೀರುತ್ತಿದೆ.

ಟೋಕಿಯೋ (ಜಪಾನ) – ಪ್ರಸ್ತುತ ಜಪಾನ್‌ನಲ್ಲಿ ವಲಸೆ ಬಂದ ಕುರ್ದ್ ಮುಸ್ಲಿಮರ ವಿರುದ್ಧ ನಾಗರಿಕರಿಂದ ಪ್ರತಿಭಟನೆಗಳು ನಡೆಯುತ್ತಿವೆ. ಜಪಾನ್‌ನ ಸೈತಾಮಾ ಪ್ರಾಂತ್ಯದಲ್ಲಿ, ರಾಷ್ಟ್ರಧ್ವಜವನ್ನು ಹಿಡಿದು ಸಾವಿರಾರು ಜನರು ಕುರ್ದ್ ಮುಸ್ಲಿಮರ ವಿರುದ್ಧ ಬೀದಿಗಿಳಿದಿರುವುದು ಕಂಡುಬಂದಿದೆ.

ಜಪಾನ್‌ನಲ್ಲಿರುವ ಮುಸ್ಲಿಮರನ್ನು ದೇಶದಿಂದ ಹೊರಹಾಕುವಂತೆ ನಾಗರಿಕರು ಬೇಡಿಕೆ ಮಾಡುತ್ತಿದ್ದಾರೆ.

ಕುರ್ದ್ ಗಳು ತುರ್ಕಿ, ಇರಾಕ ಮತ್ತು ಸಿರಿಯಾದ ಮುಸ್ಲಿಮರು. ಇವರಲ್ಲಿ ಹೆಚ್ಚಿನವರು ಸುನ್ನಿ ಮುಸ್ಲಿಮರಾಗಿದ್ದಾರೆ. ಈ ದೇಶಗಳಲ್ಲಿ ಕುರ್ದ್ ಮುಸ್ಲಿಮರ ಮೇಲೆ ದೌರ್ಜನ್ಯ ಹೆಚ್ಚಾದಾಗ, ಜಪಾನ ಮಾನವೀಯತೆ ತೋರಿಸಿ ಅವರಿಗೆ ವೀಸಾ ನೀಡಿತು. ನಂತರ ದಕ್ಷಿಣ ಸೈತಮಾದ ಕಾವಾಗುಚಿ ಮತ್ತು ವರಾಬಿ ಪ್ರದೇಶಗಳಲ್ಲಿ ಕುರ್ದ್ ಗಳ ಜನಸಂಖ್ಯೆಯು ನಿರಂತರವಾಗಿ ಹೆಚ್ಚಾಯಿತು. ಕವಾಗುಚಿ ಮತ್ತು ವರಾಬಿ ಪ್ರದೇಶವು ಒಂದು ರೀತಿಯ ‘ಮಿನಿ ಕುರ್ದಿಸ್ತಾನ್’ ಆಗಿ ಮಾರ್ಪಟ್ಟಿತು. ಜನಸಂಖ್ಯೆಯ ಹೆಚ್ಚಳದೊಂದಿಗೆ, ಈ ಪ್ರದೇಶದಲ್ಲಿ ಕುರ್ದ್ ಗಳ ಭಯೋತ್ಪಾದನೆಯೂ ಹೆಚ್ಚಾಯಿತು. ಇದರಿಂದಾಗಿ ಜಪಾನ ಮೂಲದ ಶಾಂತಿಪ್ರಿಯ ಜನರು ಬೀದಿಗಿಳಿಯಬೇಕಾಯಿತು. (ಮುಸ್ಲಿಮರ ಬಗ್ಗೆ ಸಹಾನುಭೂತಿ ಮತ್ತು ಮಾನವೀಯತೆ ತೋರಿಸಿದ ಪರಿಣಾಮವೇನು ಎಂಬುದನ್ನು ಗಮನಿಸಿರಿ! – ಸಂಪಾದಕರು)

ಜಪಾನ್‌ನಲ್ಲಿ ಅಪರಾಧ ಚಟುವಟಿಕೆಗಳಲ್ಲಿ ತೊಡಗಿದ ಕುರ್ದ್ ಮುಸ್ಲಿಮರು!

  • 2023 ರಿಂದ ಕುರ್ದ್ ಮುಸ್ಲಿಮರನ್ನು ಜಪಾನ್‌ನಿಂದ ಗಡೀಪಾರು ಮಾಡುವಂತೆ ಒತ್ತಾಯಿಸಿ ಪ್ರತಿಭಟನೆಗಳು ನಡೆಯುತ್ತಿವೆ. ಜುಲೈ 2023 ರಲ್ಲಿ ಒರ್ವ ಕುರ್ದ್ ಮುಸ್ಲಿಂ ವ್ಯಕ್ತಿ ಇಬ್ಬರು ಜಪಾನಿ ನಾಗರಿಕರ ಕೊಲೆ ಮಾಡಿದನು.

ಜನವರಿ 2024 ರಲ್ಲಿ ಕೆಲವು ಕುರ್ದ್ ಗಳ ಮೇಲೆ ಓರ್ವ ಜಪಾನಿ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿತ್ತು. ಈ ಪ್ರಕರಣದ ಒಬ್ಬ ಆರೋಪಿಯ ಮೇಲೆ ಮತ್ತೆ 12 ವರ್ಷದ ಹುಡುಗಿಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಆರೋಪವಿತ್ತು.

  • ಸೆಪ್ಟೆಂಬರ್ 2024 ರಲ್ಲಿ ಪರವಾನಗಿ ಇಲ್ಲದ ಕುರ್ದಿಶ್ ಚಾಲಕನೊಬ್ಬ ಇಬ್ಬರು ಜಪಾನೀ ಮೋಟಾರ್ ಸೈಕಲ್ ಸವಾರರನ್ನು ಡಿಕ್ಕಿ ಹೊಡೆದು ಹತ್ಯೆ ಮಾಡಿದನು.
  • 2023 ರಲ್ಲಿ ಜಪಾನ್‌ನಲ್ಲಿ ಅಪರಾಧ ಪ್ರಕರಣಗಳಲ್ಲಿ 69 ಕುರ್ದ್ ಮುಸ್ಲಿಮರನ್ನು ಬಂಧಿಸಲಾಯಿತು. ಅಪರಾಧಗಳಿಗೆ ಬಂಧಿಸಲಾದ ಒಟ್ಟು ವಿದೇಶಿಯರಲ್ಲಿ ಇದು ಶೇ.6 ರಷ್ಟಿದೆ. ಅಂದರೆ, 100 ರಲ್ಲಿ 6 ಅಪರಾಧಿಗಳು ಕುರ್ದ್ ಗಳು ಎಂದು ಕಂಡುಬಂದಿದೆ.

ಮುಸ್ಲಿಂ ವ್ಯಕ್ತಿಯಿಂದ ಶಿಂಟೋ ದೇವಾಲಯದ ಧ್ವಂಸ

ಜುಲೈ 3, 2023 ರಂದು ಒಬ್ಬ ಮುಸ್ಲಿಂ ವಲಸೆಗಾರ ಕೋಬೆ ನಗರದ ಶಿಂಟೋ ದೇವಾಲಯ ಸಂಕೀರ್ಣವನ್ನು ಧ್ವಂಸಗೊಳಿಸಿದಾಗ, ಜಪಾನೀ ಮೂಲದ ಜನರ ಕೋಪ ಮತ್ತಷ್ಟು ಹೆಚ್ಚಾಯಿತು. ದಂಗೆಕೋರ ಮುಸ್ಲಿಂ ವ್ಯಕ್ತಿ ಸ್ಥಳೀಯ ಭಕ್ತರಿಗೆ ‘ದೇವಾಲಯದಲ್ಲಿ ಪೂಜೆ ಮಾಡಬಾರದು’ ಎಂದು ಬೆದರಿಕೆ ಹಾಕಿದ್ದನು ಮತ್ತು ‘ಅಲ್ಲಾ ಮಾತ್ರ ಏಕೈಕ ದೇವರು’ ಎಂದು ಹೇಳಿದ್ದನು.
ಅಪರಾಧ ಕೃತ್ಯಗಳಿಂದ ಜಪಾನಿ ನಾಗರಿಕರ ಆಕ್ರೋಶ

ಅಪರಾಧಗಳಲ್ಲಿ ಕುರ್ದ್ ಗಳ ಹೆಚ್ಚುತ್ತಿರುವ ಪಾಲ್ಗೊಳ್ಳುವಿಕೆಯಿಂದಾಗಿ ಜಪಾನಿ ಜನರ ಸಹನೆ ಮುಗಿದಿದೆ ಮತ್ತು ಕುರ್ದ್ ಗಳನ್ನು ಜಪಾನ್‌ನಿಂದ ಹೊರಹಾಕುವಂತೆ ಒತ್ತಾಯಿಸಲಾಗುತ್ತಿದೆ. ಕೇವಲ ಅಪರಾಧ ಮಾತ್ರವಲ್ಲ, ತಮ್ಮ ಸಾಂಸ್ಕೃತಿಕ ಗುರುತನ್ನು ಉಳಿಸಿಕೊಳ್ಳುವ ಚಿಂತೆಯೂ ಅವರಿಗಿದೆ.

ಮುಸ್ಲಿಮರ ಹೆಚ್ಚುತ್ತಿರುವ ಜನಸಂಖ್ಯೆ

ಕಳೆದ 18 ವರ್ಷಗಳಲ್ಲಿ ಜಪಾನ್‌ನಲ್ಲಿ ಮುಸ್ಲಿಮರ ಜನಸಂಖ್ಯೆ ಮೂರು ಪಟ್ಟು ಹೆಚ್ಚಾಗಿದೆ. 2005 ರಲ್ಲಿ ಜಪಾನ್‌ನಲ್ಲಿ ಮುಸ್ಲಿಮರ ಜನಸಂಖ್ಯೆ 1 ಲಕ್ಷ 10 ಸಾವಿರ ಇತ್ತು. 2023 ರಲ್ಲಿ ಮುಸ್ಲಿಮರ ಜನಸಂಖ್ಯೆ 3 ಲಕ್ಷ 50 ಸಾವಿರಕ್ಕೆ ಏರಿತು. ಜಪಾನ್‌ನ ಒಟ್ಟು ಜನಸಂಖ್ಯೆಯಲ್ಲಿ ಮುಸ್ಲಿಮರ ಸಂಖ್ಯೆ ಕಡಿಮೆ ಇದ್ದರೂ, ಮುಸ್ಲಿಮರ ಜನಸಂಖ್ಯೆ ಹೆಚ್ಚುತ್ತಿರುವ ವೇಗದಿಂದಾಗಿ ಜಪಾನಿ ಮೂಲದ ಜನರ ಸಂಸ್ಕೃತಿಯ ಬಗ್ಗೆ ಆತಂಕ ಹೆಚ್ಚಾಗಿದೆ.

ಮಸೀದಿಗಳ ಸಂಖ್ಯೆಯಲ್ಲಿಯೂ ದೊಡ್ಡ ಪ್ರಮಾಣದ ಹೆಚ್ಚಳ

1999 ರಲ್ಲಿ ಸಂಪೂರ್ಣ ಜಪಾನ್‌ನಲ್ಲಿ ಕೇವಲ 5 ಮಸೀದಿಗಳಿದ್ದವು. 2021 ರಲ್ಲಿ ಜಪಾನ್‌ನಲ್ಲಿ ಮಸೀದಿಗಳ ಸಂಖ್ಯೆ 113 ಕ್ಕೆ ಏರಿತು. 2022 ರಲ್ಲಿ ಒಸಾಕಾದ ನಿಶಿನಾರಿ ವಾರ್ಡ್ನಲ್ಲಿ ಒಂದು ಕಾರ್ಖಾನೆಯಲ್ಲಿ ಅಕ್ರಮವಾಗಿ ಮಸೀದಿ ನಿರ್ಮಿಸಲಾಯಿತು. ಮಸೀದಿ ನಿರ್ಮಾಣಕ್ಕಾಗಿ ಇಂಡೋನೇಷ್ಯಾದಿಂದ ದೇಣಿಗೆಗಳನ್ನು ನೀಡಲಾಯಿತು.

ಜಪಾನ್‌ನಲ್ಲಿ ಬೌದ್ಧ ಮತ್ತು ಶಿಂಟೋ ಧರ್ಮ ಬಹುಸಂಖ್ಯಾತ!

ಜಪಾನ್‌ನಲ್ಲಿ ಸುಮಾರು ಶೇ. 48 ಜನರು ಶಿಂಟೋ ಧರ್ಮವನ್ನು ಅನುಸರಿಸುತ್ತಾರೆ. ಶಿಂಟೋ ಜಪಾನ್‌ನ ಸ್ಥಳೀಯ ಧರ್ಮವಾಗಿದೆ. ಅದೇ ಸಮಯದಲ್ಲಿ, ಶೇ. 46 ಜನರು ಬೌದ್ಧ ಧರ್ಮವನ್ನು ಅನುಸರಿಸುತ್ತಾರೆ. ಉಳಿದ ಶೇ. 5 ಜನರು ಇತರ ಧರ್ಮಗಳನ್ನು ನಂಬುತ್ತಾರೆ. ಅದರಲ್ಲಿ ಕ್ರಿಶ್ಚಿಯನ್, ಇಸ್ಲಾಂ, ಹಿಂದೂ ಮತ್ತು ಯಹೂದಿ ಧರ್ಮಗಳು ಸೇರಿವೆ.


Spread the love
Share:

administrator

Leave a Reply

Your email address will not be published. Required fields are marked *